Published On: Wed, Apr 11th, 2018

ಮುಂಬಯಿ: ‘ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ-2018′ ಸೌಂದರ್ಯ ಸ್ಪರ್ಧೆ

MR & MISS KARAVALI 2018 AA1

ಮುಂಬಯಿ: ರುದ್ರ ಎಂಟರ್‍ಟೇನ್ಮೆಂಟ್ ಸಂಸ್ಥೆಯು ಫ್ಯಾಶನ್ ಕೋರಿಯೋಗ್ರಾಫರ್ ಸನ್ನಿಧ್ ಪೂಜಾರಿ ಇವರ ಪರಿಕಲ್ಪನೆಯ ಮುನಿಯಾಲ್ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್  ಪ್ರಾಯೋಜಕತ್ವ ಮತ್ತು ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಹಯೋಗದಲ್ಲಿ ಆಯೋಜಿಸಿದ್ದ `ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ-2018′ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಸಾದ್ ಹರಿ ಶೆಟ್ಟಿ `ಮಿಸ್ಟರ್ ಕರಾವಳಿ’ ಗೌರವಕ್ಕೆ ಪಾತ್ರರಾದರೆ ಮತ್ತು ಶಿಲ್ಪಾ ಡಿ.ಶೆಟ್ಟಿ `ಮಿಸ್ ಕರಾವಳಿ’ ಕಿರೀಟ ಮುಡಿಗೇರಿಸಿ ಕೊಂಡರು.

MR & MISS KARAVALI 2018 1

ಹಲವಾರು ಸುತ್ತಿನ ಸ್ಪರ್ಧೆಯ ಬಳಿಕ ಇಂದಿಲ್ಲಿ ನಡೆಸಲ್ಪಟ್ಟ ಅಂತಿಮ ಸುತ್ತಿನ (ಗ್ರ್ಯಾಂಡ್ ಫಿನಾಲೆ) ಸ್ಪರ್ಧೆ ಇಂದಿಲ್ಲಿ ಇತ್ತೀಚೆಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ನಡೆಸಲ್ಪಟ್ಟಿದ್ದು, ಮುಖ್ಯ ಅತಿಥಿಯಾಗಿ ಉಪಸ್ಥಿತ ಕಾರ್ಯಕ್ರಮದ ಪ್ರಾಯೋಜಕರಾದ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‍ ಸಂಸ್ಥಾಪಕಾಧ್ಯಕ್ಷ ಮುನಿಯಾಲ್ ಉದಯ ಕೆ.ಶೆಟ್ಟಿ ವಿಜೇತರಿಗೆ  ಪಾರಿತೋಷಕಗಳನ್ನು ಪ್ರದಾನಿಸಿ ಮತ್ತು ನಮಿತಾ ಉದಯ ಶೆಟ್ಟಿ ದಂಪತಿ ಹಾಗೂ ಅಶ್ಮಿತಾ ಉದಯ ಶೆಟ್ಟಿ ಅವರು ಜಯಶೀಲ ಮಿಸ್ ಸ್ಪರ್ಧಿಗಳಿಗೆ ಕಿರೀಟ ತೊಡಿಸಿ ಶುಭಾರೈಸಿದರು.

MR & MISS KARAVALI 2018 3

ಮಿಸ್ಟರ್ ಕರಾವಳಿ ಪ್ರಸಾದ್ ಶೆಟ್ಟಿ ಮೂಲತಃ ಮಂಗಳೂರು ಸುರತ್ಕಲ್ ಅಲ್ಲಿನ ಸೂರಿಂಜೆಯ ಹರಿ ಎಂ.ಶೆಟ್ಟಿ ಮತ್ತು ಉಡುಪಿ ಕಡೆಕಾರು ಮಲ್ಲಿಕಾ ಎಂ.ಶೆಟ್ಟಿ ದಂಪತಿ ಸುಪುತ್ರರಾಗಿದ್ದು, ನವಿಮುಂಬಯಿ ನೆರೂಲ್‍ನಲ್ಲಿ ನೆಲೆಯಾಗಿದ್ದಾರೆ. ಮಿಸ್ ಕರಾವಳಿ ಶಿಲ್ಪಾ ಶೆಟ್ಟಿ ಈಕೆ ನಡಿಬೆಟ್ಟು ಯೆರ್ಲಪಾಡಿ ಅಲ್ಲಿನ ದಿವಾಕರ್ ಶೆಟ್ಟಿ ಮತ್ತು ಬಂಟ್ವಾಳ ವಾಮದಪದವು ಕೆದಿಗೆ ನಿವಾಸಿ ಯಶೋಧಾ ಡಿ.ಶೆಟ್ಟಿ ಇವರ ಸುಪುತ್ರಿಯಾಗಿದ್ದು, ನವಿಮುಂಬಯಿ ವಾಶಿಯಲ್ಲಿ ನೆಲೆಯಾಗಿದ್ದಾರೆ.

MR & MISS KARAVALI 2018 B3

ಪ್ರಶಾಂತ್ ಕುಮಾರ್ ಪೂಜಾರಿ ಡೊಂಬಿವಿಲಿ `ಮಿಸ್ಟರ್ ಕರಾವಳಿ’ ಪ್ರಥಮ ರನ್ನರ್, ಸಾಗರ್ ಎಸ್.ಬಂಗೇರ ಗೋರೆಗಾಂ ದ್ವಿತೀಯ ರನ್ನರ್ ಸ್ಥಾನ ಗಿಟ್ಟಿಸಿ ಕೊಂಡರು.  ದೀಕ್ಷಾ ಕೋಟ್ಯಾನ್ ಸಿ.ಥಾಣೆ `ಮಿಸ್ ಕರಾವಳಿ’ ಪ್ರಥಮ ರನ್ನರ್, ನಿಧಿ ಎಂ.ಶೆಟ್ಟಿ ವಿೂರಾಭಯಂದರ್ ದ್ವಿತೀಯ ರನ್ನರ್ ಕಿರೀಟ ತನ್ನದಾಗಿಸಿದರು. ರಿತೇಶ್ ಕೋಟ್ಯಾನ್ `ಮಿಸ್ಟರ್ ಇಂಟರ್‍ನೆಟ್ ಪಾಪ್ಯುಲರ್’,  ರೂಪೇಶ್ ಶೆಟ್ಟಿ `ಬೆಸ್ಟ್ ಹೇರ್’, ಸಾಯಿ ಕಿರಣ್ ಶೆಟ್ಟಿ `ಬೆಸ್ಟ್‍ವಾಕ್’, ಜಯ್ ಕಿರಣ್ ರೈ `ಮಿಸ್ಟರ್ ಪ್ರೆಶ್‍ಫೇಸ್’, ನಿನಾದ್ ಶೆಟ್ಟಿ `ಮಿಸ್ಟರ್ ಇಂಟರ್‍ಲೆಕ್ಟ್’,  ಕ್ರಿತೇಶ್ ಅಮೀನ್ `ಬೆಸ್ಟ್  ಸ್ಮೈಲ್’, ವಿನೋದ್ ಪೂಜಾರಿ `ಬೆಸ್ಟ್ ಫಿಜಿಕ್ಸ್’, ಹಾಗೂ ದಿವ್ಯಾ ಶೆಟ್ಟಿ `ಮಿಸ್ ಇಂಟರ್‍ನೆಟ್ ಪೆÇಪ್ಯುಲರ್’, ಚೈತ್ರಾ ಶೆಟ್ಟಿ `ಮಿಸ್ ಫ್ರೆಶ್ ಫೆಸ್’, ರೋಶ್ನಿ ಶೆಟ್ಟಿ `ಮಿಸ್ ಬೆಸ್ಟ್ ಕ್ಯಾಟ್‍ವಾಕ್’, ಶ್ರೇಯಾ ಸಾಲ್ಯಾನ್ `ಬೆಸ್ಟ್ ಸ್ಮೈಲ್’, ಪ್ರಿಯಾಂಕಾ ಸಾಲ್ಯಾನ್ ಪುಣೆ `ಬೆಸ್ಟ್ ಹೇರ್’, ಶ್ರದ್ಧಾ ಶೆಟ್ಟಿ `ಮಿಸ್ ಪರ್‍ಫೆಕ್ಟ್ ಟೆನ್’, ಡಾ| ಕÀಶ್ಮಿತಾ ಪೂಜಾರಿ `ಮಿಸ್‍ಇಂಟರ್‍ಲೆಕ್ಟ್’ ಸ್ಥಾನಕ್ಕೆ ಪಾತ್ರರಾದರು.

Honor A3

ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌ. ಪ್ರಾ. ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಬಂಟರ ಸಂಘದ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ವಾಸ್ತುತಜ್ಞ ಪಂಡಿತ್ ನವೀನ್‍ಚಂದ್ರ ಆರ್.ಸನಿಲ್, ಕತ್ತಲೆಕೋಣೆ ಚಲನಚಿತ್ರದ ನಾಯಕಿನಟಿ ಹೆನಿಕಾ ರಾವ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ರಾಜ ವಿ.ಸಾಲ್ಯಾನ್, ಯುವ ವಿಭಾಗದ ಕಾರ್ಯಾಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರ್, ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಅಧ್ಯಕ್ಷ ಇನ್ನಾಬಾಳಿಕೆ ನವೀನ್ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಮೋದಿನಿ ಶೆಟ್ಟಿ, ರೋಕಿ ಉಚಿಲ್, ಶ್ರದ್ಧಾ ಬಂಗೇರಾ ತೀರ್ಪುಗಾರರಾಗಿದ್ದರು.

ಕಾರ್ಯಕ್ರಮದ ಸಾರಥಿ, ಪ್ರಧಾನ ಸಂಘಟಕ ಪ್ರಭಾಕರ್ ಬೆಳುವಾಯಿ ಮತ್ತು ಶೋಧನಾ ಪ್ರಭಾಕರ್ ದಂಪತಿಯನ್ನು ಅತಿಥಿಗಳು ಸನ್ಮಾನಿಸಿದರು ಹಾಗೂ ಟೀಮ್ ರುದ್ರ ಬಳಗದ ರೂವಾರಿಗಳಾದ ಸನ್ನಿಧ್ ಪೂಜಾರಿ, ಅಭಿಷೇಕ್ ಪೂಜಾರಿ, ಐಶ್ವರ್ಯ ಪೂಜಾರಿ, ಕು| ನಿಶಾ ಪೂಜಾರಿ ಸತ್ಕರಿಸಿ ಗೌರವಿಸಿದರು ಹಾಗೂ ಸಹ ಪ್ರಾಯೋಜಕರನ್ನು ಒಳಗೊಂಡು ವಿಜೇತರಿಗೆ ಕಿರೀಟ ತೊಡಸಿ ಪುಷ್ಫಗುಪ್ಚ, ಸ್ಮರಣಿಕೆ, ನಗದು ಪ್ರದಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮೆಕಾೈ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎಂ.ಶೆಟ್ಟಿ, ಚಂದ್ರಹಾಸ್ ಕೆ.ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಐಕಳ ಗುಣಪಾಲ್ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ಅನಂತೇಶ್ ಪೂಜಾರಿ, ಮೋಹಿನಿ ರವಿ ಪೂಜಾರಿ, ಹರೀಶ್ ಪಡುಇನ್ನಾ, ರವೀಂದ್ರ ಎಸ್.ಕರ್ಕೇರ ವಿೂರಾರೋಡ್, ಅಶೋಕ್ ಕೋಟ್ಯಾನ್ ಅಂಧೇರಿ, ಬೋಳ ರವಿ ಪೂಜಾರಿ, ಪ್ರವೀಣ್ ಶೆಟ್ಟಿ ವಾರಂಗ, ಗುರು ಶಂಕರ್ ಭಟ್ ಮತ್ತು ಶಂಕರ್ ಗುರು ಭಟ್, ಪ್ರಜ್ವಲ್ ಪೂಜಾರಿ ಕಾರ್ಕಳ, ಭಾಸ್ಕರ್ ಸುವರ್ಣ (ಸಪ್ತಸ್ವರ), ಹರೀಶ್ ಮೂಡಬಿದ್ರೆ, ನಿಖಿಲೇಶ್ ಪೂಜಾರಿ, ಹರೀಶ್ ಶಾಂತಿ, ಶುಭಾಂಗಿ ಶೆಟ್ಟಿ, ಉದಯ ವೇಣೂರು, ಮನೋಹರ್ ಶೆಟ್ಟಿ ನಂದಳಿಕೆ, ಶಿವಪ್ರಸಾದ್ ಪುತ್ತೂರು, ಕಿಶೋರ್ ಪಿಲಾರ್, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ವಿಲಾಸ್ ಸಾವಂತ್, ಮನೋಹರ್ ಶೆಟ್ಟಿ ನಂದಳಿಕೆ, ನವೀನ್ ಪಡುಇನ್ನಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿ ದ್ದು ಕಾರ್ಯಕ್ರಮ ಸಂಯೋಜಕರು ಮತ್ತು ಸ್ಪರ್ಧಿಗಳನ್ನು ಅಭಿನಂದಿಸಿದರು.

ಶಿಲ್ಪಿಕಾ ಸಾಲ್ಯಾನ್, ನಿಶ್ಮಿತಾ ಕೋಟ್ಯಾನ್, ಸ್ನೇಹಾ ಸಾಲ್ಯಾನ್ ತಂಡದ  ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ದೀಪಕ್ ಶೆಟ್ಟಿ ಮತ್ತು ನಿತೇಶ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಪಕ್ಕಳ ಸ್ವಾಗತಿಸಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಸನ್ನಿಧ್ ಪೂಜಾರಿ ಪ್ರಸ್ತಾವನೆಗೈದು ವಂದಿಸಿದರು. ಮನೋರಂಜನೆಯ ಅಂಗವಾಗಿ ಅಪ್ರತಿಮ ಕಲಾವಿದ ಲತೇಶ್ ಎಂ.ಪೂಜಾರಿ ಮತ್ತು ಬಳಗವು ಎಎಫ್‍ಎಂ ಮ್ಯಾಜಿಕ್ ತಂಡವು ವೈವಿಧ್ಯಮಯ ಸಂಗೀತ ರಸಮಂಜರಿ ಹಾಗೂ ಮಹಾನಗರದ ಕಲಾ ತಂಡಗಳು ನೃತ್ಯ ವೈಭವ ಪ್ರಸ್ತುತ ಪಡಿಸಿದವು.

MR & MISS KARAVALI 2018 99

MR & MISS KARAVALI 2018 87

MR & MISS KARAVALI 2018 4

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter