Published On: Wed, Apr 11th, 2018

2016–17ರ ಲೆಕ್ಕಪತ್ರ: ಬಿಜೆಪಿ ದೇಶದ ಅತ್ಯಂತ ಶ್ರೀಮಂತ ಪಕ್ಷ!

bjp-history-banner

ಹೊಸದಿಲ್ಲಿ: ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್) ಪ್ರಮುಖ ರಾಷ್ಟ್ರೀಯ ಪಕ್ಷಗಳ 2016–17ನೇ ಸಾಲಿನ ವರಮಾನ ವರದಿಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ದೇಶದ ಅತ್ಯಂತ ಶ್ರೀಮಂತ ಪಕ್ಷ ಎಂದು ತಿಳಿಸಿದೆ.

ಪಕ್ಷಗಳು ಸಲ್ಲಿಸಿರುವ ವಾರ್ಷಿಕ ಲೆಕ್ಕಪತ್ರದ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದ್ದು, ಬಿಜೆಪಿ ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿದ್ದರೆ ಸಿಪಿಐ ಅತ್ಯಂತ ಕಡಿಮೆ ವರಮಾನ ಪಡೆದ ಪಕ್ಷವಾಗಿದೆ.

2016–17ನೇ ಸಾಲಿನ ಬಿಜೆಪಿ ವರಮಾನ 1,034.27 ಕೋಟಿಯಾಗಿದೆ. ಜತೆಗೆ 2016-17ರಲ್ಲಿ 710.057 ಕೋಟಿ ರೂ. ಖರ್ಚು ಮಾಡಿರುವುದಾಗಿ ಬಿಜೆಪಿ ಘೋಷಿಸಿಕೊಂಡಿದೆ.

ಭಾರತೀಯ ಜನತಾ ಪಕ್ಷದ ಚುನಾವಣಾ ಯಶಸ್ಸಿಗೆ ಅನುಗುಣವಾಗಿ ಅದರ ಆದಾಯ 2015-16 ಮತ್ತು 2016-17ರಲ್ಲಿ ಶೇ.81.18ರ ಏರಿಕೆಯನ್ನು ಕಂಡಿದೆ.

ಕಾಂಗ್ರೆಸ್‌ ಪಕ್ಷದ ಆದಾಯದಲ್ಲಿ ಶೇ.14ರ ಕುಸಿತ ದಾಖಲಾಗಿದ್ದು, ಈ ಅವಧಿಯಲ್ಲಿ ಕಾಂಗ್ರೆಸ್‌ ಮಾಡಿರುವ ಖರ್ಚು 321.66 ಕೋಟಿ ರೂ. ಆದರೆ ಈ ಮೊತ್ತವು, ಅದರ ಈ ಅವಧಿಯ ಆದಾಯಕ್ಕಿಂತ 96.30 ಕೋಟಿ ರೂ. ಹೆಚ್ಚು ಎಂಬುದು ಗೊತ್ತಾಗಿದೆ. ಇನ್ನು ಸಿಪಿಐನ ವರಮಾನ 2.08 ಕೋಟಿ ರೂ.

ಒಟ್ಟು 7 ರಾಷ್ಟ್ರೀಯ ರಾಜಕೀಯ ಪಕ್ಷಗಳ ಒಟ್ಟು ಆದಾಯ 1,559.17 ಕೋಟಿ ರೂ. ಖರ್ಚು 1,288.26 ಕೋಟಿ ರೂ. ಎಂಬುದು ವರದಿಯಲ್ಲಿ ಬಹಿರಂಗವಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter