Published On: Thu, Mar 15th, 2018

ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿ “ಡೌರಿ ಫ್ರೀ ನಿಖಾಃಹ್ ಗ್ರೂಪ್”

62+2

ಕಳೆದ ಒಂದು ವರ್ಷದಿಂದ ಮುಸ್ಲಿಂ ಸಮುದಾಯದ ಬಡ ಕುಟುಂಬದ ಹೆಣ್ಣು ಮಕ್ಕಳ ಮತ್ತು ಅವರ ಹೆತ್ತವರ ಕಣ್ಣೀರು ಒರೆಸಲು ನಾವು ಮಾಡುತ್ತಿರುವ ಈ ಒಂದು ಕಾರ್ಯವು ನಮ್ಮ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಉತ್ತಮವಾದ ವರದಕ್ಷಿಣೆ ರಹಿತ ವರನ ಅನ್ವೇಷಣೆಯಲ್ಲಿ ಸಹಕರಿಸುತ್ತ ದಾಂಪತ್ಯ ಜೀವನ ಹಾಗೂ ಯುವಕ-ಯುವತಿಯರ ಉತ್ತಮ ಭವಿಷ್ಯ ರೂಪಿಸಲು ಬೇಕಾದ ಸಲಹೆ, ಮಾರ್ಗದರ್ಶನ ಮತ್ತು ದೀನಿ ಬೋಧನೆ ನೀಡುತ್ತ ವಧು-ವರರ ವೈವಾಹಿಕ ಜೀವನ ಸಂಬಂಧಗಳನ್ನು ಸುಧಾರಿಸುವುದರೊಂದಿಗೆ ನಾವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತ ಬಂದಿದ್ದೇವೆ.

ಡೌರಿ ಫ್ರೀ ನಿಖಾಃಹ್ ಗ್ರೂಪ್ ನ ಕಿರು ಪರಿಚಯ: ನಾವು ಒಂದು ಎಂಟು ಜನರು ಒಂದು ಗ್ರೂಪ್ ಮಾಡಿ ಅದರಲ್ಲಿ ನಮ್ಮ ಸಮುದಾಯದ ಬಗ್ಗೆ ಚರ್ಚೆ ನಡೆಸುತ್ತಾ ಇತರ ವಿಷಯಗಳ ಕುರಿತು ಮಾತಾನಾಡುತ್ತ ಕಾಲಹರಣ ಮಾಡುತ್ತಿರುವಾಗ ನಮ್ಮ ಊರಿನಲ್ಲಿ ಒಂದು ಬಡ ಕುಟುಂಬ ವರದಕ್ಷಿಣೆಯ ಕೂಪಕ್ಕೆ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಇದು ಎಲ್ಲರಿಗೂ ಗೊತ್ತಿರುವ ವಿಚಾರ ಅವರ ಪೂರ್ಣ ಮಾಹಿತಿ ಇಲ್ಲಿ ತಿಳಿಸುವುದಿಲ್ಲ ಇದನ್ನು ಕೇಳಿದ ನಮಗೆ ಆಕಾಶವೇ ಕಳಚಿ ತಲೆಯ ಬಿದ್ದಂತೆ ಭಾಸವಾಯಿತು ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಲೇ ಬೇಕು ಎಂದು ನಾವು ದೃಢ ನಿರ್ಧಾರ ತೆಗೆದುಕೊಂಡೆವು.

2017ರ ಮಾರ್ಚ್ ತಿಂಗಳ ವೇಳೆ ನಾವು ಸಮುದಾಯಕ್ಕಾಗಿ ಒಂದು ಗ್ರೂಪ್ ಮಾಡಬೇಕೆಂದು ನಮ್ಮದೇ ಆದ ಒಂದು ತಂಡವನ್ನು ಮಾಡಿ ವಾಟ್ಸಾಪ್ ಮೂಲಕ ಯಾವ ರೀತಿಯಲ್ಲಿ ಮಾಡುವುದು ಎಂಬದನ್ನು ಚರ್ಚಿಸಿ ನಂತರ ವರದಕ್ಷಿಣೆ ನಿಷೇಧ ಅಭಿಯಾನ ಎಂಬ ಗ್ರೂಪ್ ಮಾಡಿ ಲಿಂಕ್ ಮುಖಾಂತರ ಸದಸ್ಯರನ್ನು ಸೇರ್ಪಡೆ ಮಾಡಿ ನಂತರ ಅವರನ್ನು ಮತ್ತೊಂದು ಗ್ರೂಪಿನಲ್ಲಿ ಸೇರಿಸಿ ಆ ಗ್ರೂಪಿಗೆ ಡೌರಿ ಫ್ರೀ ನಿಖಾಃಹ್ ಗ್ರೂಪ್ ಎಂದು ನಾಮಕರಣ ಮಾಡುತ್ತೇವೆ. ಕಾರಣ ಹೊರಗಿನ ಸದಸ್ಯರ ಪರಿಚಯವಿಲ್ಲದ ಕಾರಣಕ್ಕಾಗಿ ಲಿಂಕ್ ಮೂಲಕ ಸೇರಿದ ಸದಸ್ಯರ ಹೆಸರು ವಿಳಾಸ ಪಡೆದು ಅವರಿಂದ ಒಂದು ವಾಯ್ಸ್ ಪಡೆದು ಅವರಿಗೆ ಗ್ರೂಪ್ ನಿಯಮ ಉದ್ದೇಶ ತಿಳಿಸಿ ಅವರು ಒಪ್ಪಿಗೆ ನೀಡಿದರೆ ಅವರನ್ನು ಡೌರಿ ಫ್ರೀ ನಿಖಾಃಹ್ ಗ್ರೂಪ್ ಗೆ ಸೇರ್ಪಡೆ ಮಾಡಿರುತ್ತೇವೆ. ಹೀಗೆ ಒಂದು ತಿಂಗಳ ಕಾಲ ಮುಂದುವರೆಸಿ ನಂತರ ಗ್ರೂಪಿನಲ್ಲಿ ಮದುವೆ ಆಗಲು ಹೊರಟ ಬಡವರು ಮಧ್ಯಮ ವರ್ಗದವರು ಶ್ರೀಮಂತರ ಹೆಣ್ಣು ಮಕ್ಕಳ ವಧು ವಿವರಗಳನ್ನು ಪ್ರತಿದಿನ ಗ್ರೂಪಿನಲ್ಲಿ ಅಪ್ಡೇಟ್ ಮಾಡಲು ತೊಡಗುತ್ತೇವೆ.

ಕೆಲವು ಸಮಯದವರೆಗೆ ಬಹಳ ಮಂದಗತಿಯಲ್ಲಿ ಸಾಗಿದ ನಮ್ಮ ಕಾರ್ಯಗಳು ಒಂದೆರಡು ತಿಂಗಳು ಕಳೆದರೂ ಯಾವುದೇ ರೀತಿಯ ಪಲಿತಾಂಶ ಬರಲಿಲ್ಲ ತುಂಬಾ ನಿರಾಶೆ ಮೂಡಿಸಿತು ಕಾರಣ ನಾವು ಸಮುದಾಯಕ್ಕಾಗಿ ಒಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದೇವು ಆದರೂ ಇದಕ್ಕೆ ಹೇಳುವಂತಹ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂಬ ನಿರಾಶೆಯೊಂದಿಗೆ ನೋಡುವ ಎಂದು ಮುಂದುವರೆಸಿದೆವು ಮೂರು ತಿಂಗಳ ನಂತರ ನಮ್ಮ ಅಪ್ಡೇಟುಗಳ ಒಂದು ವಧುವಿಗೆ ನಮ್ಮ ಗ್ರೂಪಿನ ಮೂಲಕವೇ ವರ ಸೆಟ್ ಆಗುತ್ತದೆ ಇದರಿಂದ ನಮಗೆ ಕೊಂಚ ಮಟ್ಟಿಗೆ ಸಮಾಧಾನ ತರುತ್ತದೆ. ಅಲ್ ಹಮ್ದುಲಿಲ್ಲಾಹ್ ನಮಗೆ ಮಾತ್ರ ಅಲ್ಲ ನಮ್ಮ ಗ್ರೂಪಿನ ಸದಸ್ಯರಿಗೂ ಕೂಡ ಇದು ಸಂತೋಷದ ವಿಷಯವಾಗುತ್ತದೆ.

ದಿನಹೋದಂತೆ ಹುಡುಗಿಯರ ವಿವರಗಳು ಹೆಚ್ಚು ಆಗುತ್ತ ಹೋಗುತ್ತದೆ ಹಾಗೆ ವಧುವು ಕೂಡ ಸೆಟ್ ಆಗುವುದರೊಂದಿಗೆ ನಮ್ಮ ಗ್ರೂಪಿಗೆ ಉತ್ತಮ ಬೆಂಬಲ ಸಿಗುತ್ತಿದೆ ಗ್ರೂಪ್ ತೊಡಗಿ ಒಂದು ವರ್ಷವಾಗಿದೆ ಇಂದಿಗೆ ಸರಿಸುಮಾರು 500ಕ್ಕೂ ಹೆಚ್ಚು ಹುಡುಗಿಯರ ಪ್ರಪೋಸೆರ್ಸ್ ನಮ್ಮ ಬಳಿಯಿದ್ದು ಇಲ್ಲಿಯವರೆಗೆ ಅರವತ್ತು ಪ್ರಪೋಸೆರ್ಸ್ ಗೆ ವರ ಸೆಟ್ ಆಗಿದೆ. ಈಗ ಸದ್ಯಕ್ಕೆ ವಾರದಲ್ಲಿ ಎರಡು ಮೂರು ಪ್ರಪೋಸೆರ್ಸ್ ಸೆಟ್ ಆಗುತ್ತಿದ್ದು, ಇಂದು ನಮ್ಮ ಗ್ರೂಪ್ ಒಂದರಿಂದ ಐದಕ್ಕೆ ಏರಿಕೆ ಕಂಡಿದೆ ಸಾವಿರಕ್ಕೂ ಹೆಚ್ಚು ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ.
ಇದರಲ್ಲಿ ಹೆಚ್ಚು ಯುವಕರು ಕೈ ಜೋಡಿಸಿರುವುದು ಸಮುದಾಯದ ಬದಲಾವಣೆಯನ್ನು ಎತ್ತಿ ತೋರಿಸುತ್ತದೆ. ಅದೆ ರೀತಿ ಉನ್ನತ ಶಿಕ್ಷಣ ದೀನಿ ವಿದ್ಯಾಭ್ಯಾಸವಿರುವ ಅದೆಷ್ಟೋ ಸಹೋದರಿಯರಿಗೆ ವಿವಾಹ ಸಂಬಂಧ ಕಲ್ಪಿಸುವ ಜವಾಬ್ದಾರಿಯು ನಮ್ಮ ಮೇಲಿದೆ ಅದುದರಿಂದ ನಮ್ಮೊಂದಿಗೆ ನೀವು ಕೂಡ ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕಿದೆ ಮುಂದೆಯೂ ನಮ್ಮ ಗ್ರೂಪಿನ ಮುಖಾಂತರ ಸಮುದಾಯಕ್ಕಾಗಿ ನಮ್ಮಿಂದ ಹಾಗುವಂತಹ ಒಳಿತನ್ನು ಮಾಡಲು ಬಯಸುತ್ತೇವೆ. ಹಾಗೆ ನಾವು ಇದಕ್ಕೂ ಮುನ್ನ ಒಂದು ಚಿಂತನೆ ನಡೆಸಿದ್ದೇವೆ.

ಏನೆಂದರೆ ಎಷ್ಟೋ ಹುಡುಗಿಯರು ಮದ್ರಸ ಕಲಿತಿಲ್ಲ ಅದುದರಿಂದ ಮದರಸ ಕಲಿಯದ ಕಾರಣದಿಂದಾಗಿ ಕೆಲವು ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಅದನ್ನು ಕೂಡ ಸರಿಮಾಡಬೇಕು ಎನ್ನುವ ಉದ್ದೇಶವು ಇದೆ ಅಂದರೆ ಅವರಿಗಾಗಿ ಮದ್ರಾಸ ಗಳನ್ನು ತೆರೆಯಬೇಕು ಹೇಗೆ ಅಂದರೆ ಮದುವೆ ಆದ ಮದುವೆ ಆಗದ ಯುವತಿಯರಿಗೆ ಕೆಲವು ಮನೆಗಳಲ್ಲಿ ಐದನೇ ತರಗತಿಗೆ ನಿಲ್ಲಿಸುತ್ತಾರೆ. ಯಾಕೆಂದರೆ ಮದ್ರಸ ಗಳಲ್ಲಿ ಕಲಿಸುವಂತವರು ಗಂಡಸರಾಗಿರುತ್ತಾರೆ ಅದರಿಂದ ಅಂತಹವರಿಗೆ ಮದ್ರಸ ಶಿಕ್ಷಣ ಸಿಗಲಿ ಮದ್ರಸ ಕಲಿಯಲು ಕಷ್ಟ ಆಗುವುದಾದರೆ ಕೇವಲ ಎರಡು ಸೂರತ್ ಗಳನ್ನದರು ಕಲಿಯಲಿ. (ಸೂರತುಲ್ ನಿಶಾ ಸೂರತುಲ್ ಅನ್ನೂರ್) ಎರಡು ಸೂರತ್ ಕಲಿಯಲಿ ಅನ್ನುವ ಯೋಜನೆ ಕೂಡ ಮಾಡಿದ್ದೇವೆ ಇನ್ಶಾ ಅಲ್ಲಾಹ್ ಮುಂದಿನ ದಿನಗಳಲ್ಲಿ ಅದನ್ನು ಕೂಡ ಪ್ರಸ್ತಾಪಿಸುತ್ತೇವೆ. ಅದೇ ರೀತಿ ಅಲ್ ಹಮ್ದುಲಿಲ್ಲಾಹ್ ಇವಾಗ ಕೆಲವೊಂದು ಮದುವೆ ಆಗುವ ಯುವಕರು ಬಂದು ನಮ್ಮ ಬಳಿ ಕೇಳುತ್ತಾರೆ.

ಹಾಫಿಲ್ ಆದಂತಹ ಅಥವಾ ಶರೀಹತ್ ಆದಂತಹ ಹುಡುಗಿಯರು ಸಿಗಬಹುದ ಅಥವಾ ಕುರಾನ್ ನನ್ನು ಅರಬಿಕ್ ಟ್ರಾನ್ಸಲೇಟ್ ಮಾಡುವ ವಧು ಇದ್ದರೆ ಸಿಗಬಹುದ ಎಂದು ಕೇಳುತ್ತಾರೆ ಅಂದರೆ ಯುವಕರು ಧಾರ್ಮಿಕ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿರುವುದು ಅಲ್ ಹಮ್ದುಲಿಲ್ಲಾಹ್ ನಮ್ಮ ಈ ಒಂದು ಕಾರ್ಯವು ಸಫಲತೆ ಕಂಡಿದೆ. ಖಂಡಿತವಾಗಿಯೂ ನಮಗೆ ಹೆಸರು ಮುಖ್ಯವಲ್ಲ ಇದೊಂದು ಹಂತ ನಮ್ಮ ಗೆಲುವಿನ ಹಂತ ಅಂದರೆ ದೀನಿಯಾದ ಹೆಣ್ಣಿಗೆ ಇಷ್ಟೊಂದು ಪ್ರತಿನಿತ್ಯ ಕೊಡುತ್ತ ಇದ್ದಾರೆ. ಅಲ್ ಹಮ್ದುಲಿಲ್ಲಾಹ್ ಇದನ್ನೇ ನಾವು ಬಯಸಿದ್ದು ಪ್ರತಿಯೊಬ್ಬರೂ ಮದುವೆ ಆಗುವಾಗ ಅಂದ ಚೆಂದ ಅಥವಾ ಆಸ್ತಿ ಅಂತಸ್ತು ಫ್ಯಾಮಿಲಿ ನೋಡಬಾರದು. ಎಷ್ಟು ಮದರಸ ಕಲಿತಿದ್ದಾಳೆ ಎಷ್ಟು ದೀನಿನ ಬಗ್ಗೆ ಗೊತ್ತಿದೆ ಎಂದು ತಿಳಿದು ಅಂತಹ ಹುಡುಗಿಯನ್ನು ನೀವು ಮದುವೆಯಾಗಿ ಇನ್ಶಾ ಅಲ್ಲಾಹ್ ನಿಮಗೆ ಸಾಧ್ಯವಾದರೆ ಮದುವೆಯಾದಮೇಲೂ ಅವರಿಗೆ ದೀನಿ ಬೋಧನೆ ಕಲಿಸಿಕೊಡಬಹುದು. ಇನ್ನೂ ಈಗಿನ ಯುವಕರು ಕೇವಲ ದೀನಿಯಾದ ವಧುವನ್ನು ಬಯಸುತ್ತಿರುವುದು ಅದು ನಮ್ಮ ಡೌರಿ ಫ್ರೀ ನಿಖಾಃಹ್ ಗ್ರೂಪ್ ನಿಂದಾಗಿ ಎಂಬುದು ಹೆಮ್ಮೆಯ ವಿಷಯ ನಾವು ಕೇವಲ ಗ್ರೂಪ್ ಮಾಡಿ ಪ್ರಪೋಸೆರ್ಸ್ ಸೆಟ್ ಮಾಡುವುದರೊಂದಿಗೆ ಕೆಲವರೊಂದಿಗೆ ವೈಯಕ್ತಿಕವಾಗಿ ಅವರೊಂದಿಗೆ ಮಾತುಕತೆ ನಡೆಸಿ ಅರಿವು ಮೂಡಿಸುವ ಕಾರ್ಯವು ಕೂಡ ಯಶಸ್ಸು ಆಗಿದೆ.

ಇನ್ಶಾ ಅಲ್ಲಾಹ್ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಷಯಕ್ಕೆ ಕೈ ಹಾಕುವ ನಿಟ್ಟಿನಲ್ಲಿ ಎಲ್ಲರ ಸಹಾಯ ಸಹಕಾರ ಬಯಸುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಎಲ್ಲ ಜಮಾತ್ ಗಳಲ್ಲಿ ವರದಕ್ಷಿಣೆ ನಿಷೇಧ ಮಾಡುವಂತೆ ಅಭಿಯಾನ ಅರಂಭಿಸಿದ್ದೇವೆ. ಅದಕ್ಕೆ ಇನ್ನೂ ಹೆಚ್ಚಿನ ಬೆಂಬಲ ಅಗತ್ಯವಿದ್ದು, ಇದಕ್ಕೂ ಕೂಡ ಸಮುದಾಯದ ಪ್ರತಿಯೊಬ್ಬರೂ ನಮ್ಮೊಂದಿಗೆ ಕೈ ಜೋಡಿಸುವಿರವೆಂಬ ವಿಶ್ವಾಸವಿದೆ.

ನಮ್ಮೊಂದಿಗೆ ಕೈ ಜೋಡಿಸಿದ ಗ್ರೂಪಿನ ಸದಸ್ಯರಿಗೂ ಹಾಗೂ ಹಿಂದೆ ನಿಂತು ನಮಗೆ ಉತ್ತಮ ಮಾರ್ಗದರ್ಶನ ನೀಡಿ ನಮ್ಮನ್ನು ಪ್ರೋತ್ಸಾಹಿಸಿದವರಿಗೂ ಅದೆ ರೀತಿ ನಮಗೆ ಬರಹದ ಅಗತ್ಯವಿದ್ದಾಗ ನಮಗೆ ಸಾಥ್ ನೀಡಿದ ಎಲ್ಲ ಬರಹಗಾರರಿಗೂ ಮತ್ತು ಪ್ರತಿಯೊಬ್ಬರಿಗೂ ಅಲ್ಲಾಹನು ಆರೋಗ್ಯ, ಆಫಿಯತ್ ನೀಡಿ ಅವರ ಮತ್ತು ಅವರ ಕುಟುಂಬದವರ ಎಲ್ಲಾ ಹಲಾಲ್ ಆದ ಉದ್ದೇಶ ಪೂರ್ತಿಗೊಳಿಸಲಿ ಆಮೀನ್.

ವರದಿ: ಮೀಡಿಯಾ ಬಳಗ (ಡೌರಿ ಫ್ರೀ ನಿಖಾಃಹ್ ಗ್ರೂಪ್)

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter