Published On: Tue, Mar 13th, 2018

ಕ್ರೀಡಾಂಗಣ ಜಿಲ್ಲೆಯಲ್ಲಿಯೇ ಮಾದರಿ ಕ್ರೀಡಾಂಗಣವಾಗಲಿದ್ದು ಇದು ನನ್ನ ಸಫಲತೆಯ ಹೆಜ್ಜಯಾಗಿದೆ: ಸಚಿವ ಬಿ.ರಮಾನಾಥ ರೈ

ಅಮ್ಮುಂಜೆ: ಬೆಂಜನಪದವಿನಲ್ಲಿ ನಿರ್ಮಾಣಗೊಳ್ಳುವ ಕ್ರೀಡಾಂಗಣ ಜಿಲ್ಲೆಯಲ್ಲಿಯೇ ಮಾದರಿ ಕ್ರೀಡಾಂಗಣವಾಗಲಿದ್ದು ಇದು ನನ್ನ ಸಫಲತೆಯ ಹೆಜ್ಜಯಾಗಿದೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.002

KAR_7898ಅಮ್ಮುಂಜೆ ಗ್ರಾಮದ ಬೆಂಜನಪದವಿನಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಯಾವುದೇ ತಾಲೂಕಿನಲ್ಲಿಯೂ ಕೂಡ 10 ಕೋಟಿ ರುಪಾಯಿ ವೆಚ್ಚದ ಕ್ರೀಡಾಂಗಣ ಇಲ್ಲ, ಆದರೆ ಬಂಟ್ವಾಳದಲ್ಲಿ 10 ಕೋಟಿ ರುಪಾಯಿ ವೆಚ್ಚದ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ. ಟೀಕೆ ಮಾಡುವವರಿಗೆ ಅಭಿವೃದ್ದಿ ಕಾರ್ಯಗಳೇ ನನ್ನ ಉತ್ತರವಾಗಿದೆ ಎಂದರು.

KAR_7918

ವೇದಿಕೆಯಲ್ಲಿ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಮ್ಮುಂಜೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ, ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯರಾದ ಪ್ರವೀಣ್ ಬಿ., ಜಗದೀಶ ಕುಂದರ್, ಸುಶೀಲ ಭಟ್, ಬೆಂಜನಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಿರೀಶ್ ಚಂದ್ರ, ಉಪಪ್ರಾಂಶುಪಾಲೆ ಶ್ರೀದೇವಿ,ಕಮ್ಮಾಜೆ ಮಹಾಬಲ ಆಳ್ವ, ಸದಾನಂದ ಶೆಟ್ಟಿ, ಅಬ್ದುಲ್ ರಹಿಮಾನ್ ಯುವ ಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ತಾಲೂಕು ಅಧಿಕಾರಿ ನವೀನ್ ಕುಮಾರ್, ಲೋಕೋಪಯೋಗಿ ಇಲಾಖೆಯ ಕಾಂತರಾಜು ಮತ್ತಿತರರು ಹಾಜರಿದ್ದರು.

001

0004

0002
ಕರಿಯಂಗಳ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿದರು,ಎಂ ಟಿ.ಹಕೀಂ ಕಾರ್ಯಕ್ರಮ ನಿರೂಪಿಸಿದರು. ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ ಉಮೇಶ್ ಭಟ್ ತಾಂತ್ರಿಕ ವರದಿ ನೀಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter