Published On: Tue, Mar 13th, 2018

ಮಂಗಳಾಂಬಿಕೆಯ ಸನ್ನಿದಾನ ಅನನ್ಯವಾದದು: ಭಾಸ್ಕರ.ಕೆ

ಮಂಗಳೂರು:ಅನನ್ಯ ಸನ್ನಿದಾನವಾದ ಶ್ರೀ ಮಂಗಳಾಂಬಿಕೆ ಎಲ್ಲ ಭಕ್ತರನ್ನು ಹರಸುವ ಮಹಾತಾಯಿ. ಮಂಗಳಾದೇವಿ ದೇವಸ್ಥಾನ ಮಂಗಳೂರು ನಗರಕ್ಕೆ ಬಹುದೊಡ್ಡ ಆಭರಣ ಇದ್ದಂತೆ. ಮಂಗಳೂರಿನ ರಕ್ಷಣೆಯ ದೇವರು ಶ್ರೀ ಮಂಗಳಾಂಬಿಕೆ, ಇಂತಹ ಅನನ್ಯ ಸನ್ನಿದಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಎಲ್ಲಾ ಭಕ್ತರಿಗೂ ಸನ್ಮಂಗಲವನ್ನು ಉಂಟು ಮಾಡಲಿ ಎಂದು ಮಂಗಳೂರು ಮಾಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಕೆ.ಅವರು ಸಮರೋಪ ವೇದಿಕೆಯಲ್ಲಿ ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ಶಾಸಕರಾದ ಜೆ.ಆರ್.ಲೋಬೋ ವಹಿಸಿ ಕ್ಷೇತ್ರದ ಆಡಳಿತ ಮೋಕ್ತೇಸರರಾದ ರಮಾನಾಥ ಹೆಗ್ಡೆಯವರ ಮನವಿಯ ಮೇರೆಗೆ ಕ್ಷೇತ್ರದ ಯಾತ್ರಿ ನಿವಾಸಕ್ಕೆ ಸರಕಾರದ ವತಿಯಿಂದ 50ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದರು.

IMG-20180313-WA0030

IMG-20180313-WA0029ವೇದಿಕೆಯಲ್ಲಿ ಕ್ಷೇತ್ರದ ಆಡಳಿತ ಮೋಕ್ತೆಸರರಾದ ರಮಾನಾಥ ಹೆಗ್ಡೆ, ಮೋಕ್ತೇಸರರಾದ ರಾಮನ್ಯಾಕ್ ಕೋಟೆಕಾರ್, ಹಾಗೂ ಪ್ರೇಮಲತಾ, ಎಸ್.ಕುಮಾರ್, ಅನುವಂಶಿಕ ಮೋಕ್ತೇಸರರಾದ ಜಿ.ರಘುರಾಮ ಉಪಾಧ್ಯಾಯ, ಎಂ.ಗಣೇಶ್ ಐತಾಳ್, ಬಿ.ವೆಂಕಟರಮಣ ಐತಾಳ್ ಉಪಸ್ಥಿತರಿದ್ದರು.ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿರುವ ಬಾಸ್ಕರ ಕೆ.ರಘುರಾಮ ರಾವ್, ರಾಧಾಕೃಷ್ಣ, ಭಾಸ್ಕರ ಬಂಗೇರ, ಕುಮಾರಿ ಗೌತಮಿ, ಸದಾಶಿವ ಅಮೀನ್ ಅವರನ್ನು ಅವರವರ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಗುರುತಿಸಿ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಎಲ್ಲಾ ದಿನಗಳಲ್ಲೂ ಸಹಕರಿಸಿದ ಕ್ಷೇತ್ರದ ಸಂಘ ಸಂಸ್ಥೆಗಳನ್ನು ಬ್ರಹ್ಮ ರಥೋತ್ಸವ ಹಾಗೂ ಅವಭ್ರತ ಉತ್ಸವ ಸಂದರ್ಭ ಸಹಕಾರ ನೀಡಿದ ಟ್ಯಾಬ್ಲೊ ತಂಡದವರನ್ನು ವಿಶೇಷವಾಗಿ ಗೌರವಿಸಲಾಗಿದೆ. ಸಂಯೋಜಕರಾದ ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.ಕ್ಷೇತ್ರದ ಸಾಂಸ್ಕ್ರತಿಕ ಕಾರ್ಯಕ್ರಮದ ಸಂಯೋಜಕರಾದ ವಿನಯಾನಂದ ವಂದಿಸಿದರು. ಶ್ರೀ ವಾಸುದೇವ ರಾವ್ ಕುಡುಪು ಅಭಿನಂದನಾ ಭಾಷಣಗೈದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter