Published On: Tue, Mar 13th, 2018

ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರದ ದಶಮಾನೋತ್ಸವ

ವಿಟ್ಲ :ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ದಶಮಾನೋತ್ಸವದ ಅಂಗವಾಗಿ ವಂದೇಮಾತರಂ ಕಂಠಪಾಠ ಗಾಯನ ಸ್ಪರ್ಧೆಯು 4 ನೇ ತರಗತಿಯಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ, ದ ಕ ಜಿ ಪಂ ಮಾದರಿ ಶಾಲೆಯ ಸಭಾ ಭವನದಲ್ಲಿ ನಡೆಯಿತು.bg

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಚಂದ್ರಕಾಂತಿ ಶೆಟ್ಟಿ, ಉದ್ಯಮಿಗಳಾದ ತುಳಸೀದಾಸ್ ಶೆಣೈ, ಗಂಗಾಧರ ಚಂದಳಿಕೆ ಭಾಗವಹಿಸಿದ್ದರು. ಬಾಲಗೋಕುಲ ಕ್ಷೇತ್ರ ಸಮಿತಿ ಅಧ್ಯಕ್ಷ ಜಗದೀಶ ಪಾಣೆಮಜಲು, ಸದಸ್ಯ ನಾಗರಾಜ ವಿಟ್ಲ ಮತ್ತು ಮೈತ್ರೇಯಿ ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು ಉಪಸ್ಥಿತರಿದ್ದರು. ಸಮಿತಿ ಕೋಶಾಧಿಕಾರಿ ರಾಜೇಶ್ ಆರ್ ಕೆ ಆಟ್ರ್ಸ್ ಸ್ವಾಗತಿಸಿದರು. ಉಪಾಧ್ಯಕ್ಷ ರವಿಶಂಕರ ವಂದಿಸಿದರು. ಸಂಚಾಲಕ ಪರಮೇಶ್ವರ ಆಚಾರ್ಯ ಮಂಕುಡೆ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter