Published On: Tue, Mar 13th, 2018

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿಕೆ ಖಂಡನೀಯ

ಬಂಟ್ವಾಳ : ಅವಹೇಳನಕಾರಿ ಹಾಗು ಸಂವಿದಾನಕ್ಕೆ ವಿರುದ್ಧವಾಗಿ ಹೇಳಿಕೆ ಕೊಟ್ಟ ಭಾರತೀಯ ಜನತಾಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರವರನ್ನು ಪಕ್ಷದಿಂದ ಉಚ್ಛಾಟಿಸಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯವಾದಿ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರ ಪೂಜಾರಿ ಆಗ್ರಹಿಸಿದ್ದಾರೆ.

ರವಿಕುಮಾರ್ ರವರ ವರ್ತನೆ ಅವಿವೇಕತನದ ಮಾತು ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವಂತಾಗಿದೆ. ತನ್ನ ಮಾತಿನಲ್ಲಿ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ರಮಾನಾಥ ರೈ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ.ಖಾದರ್ ರವರನ್ನು “ಟೆರೆರಿಸ್ಟ್‍ಗಳು” “ಉಗ್ರಗಾಮಿಗಳು” ಎಂದು ಹೇಳಿರುತ್ತಾರೆ. ಸದ್ರಿ ಹೇಳಿಕೆ ಸಚಿವರುಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದರಿಂದ ಆತನ ಹೇಳಿಕೆ ಖಂಡನೀಯ ಹಾಗೂ ಶಿಕ್ಷಾರ್ಹವಾಗಿದೆ .

ರವಿಕುಮಾರ್ ರವರು ನಾಲ್ಕು ಗೋಡೆಗಳ ಮದ್ಯೆ ತನ್ನ ಕೆಟ್ಟ ನಾಲಿಗೆಯನ್ನು ಹರಿಬಿಟ್ಟು ಸಮಾಜದಲ್ಲಿ ಅವರ ಹಾಗೂ ಕರ್ನಾಟಕದ ಜನತೆಯ ಆಶೋತ್ತರಗಳಿಗೆ ಈ ಹೇಳಿಕೆಯು ಶೋಭೆ ತರುವಂತದ್ದಲ್ಲ . ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಹಾಗೂ ದ.ಕ.ಹಾಗೂ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಅಧ:ಪತನಕ್ಕೆ ಇಳಿದ ಬಗ್ಗೆ ಅವರ ಹೇಳಿಕೆ ನಿದರ್ಶನವಾಗಿದೆ. ಈ ರವಿಕುಮಾರ್ ಗೆ ತಾಕತ್ತಿದ್ದರೆ ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹಿರಂಗ ಹೇಳಿಕೆ ನೀಡಲಿ. ಅದನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಸನ್ನದ್ದವಾಗಿದೆ. ಎಲ್ಲಿಯೋ ಕೂತು ಹೇಳಿಕೆ ಕೊಟ್ಟು ತನ್ನ ಅವಿವೇಕತನವನ್ನು ತೋರಿಸಿದ್ದು ಖಂಡನೀಯ.

ಮಾನಸಿಕ ಸ್ಥಿಮಿತ ಹಾಗೂ ಕಾಮಾಲೆ ರೋಗ ಪೀಡಿತರಾದ ರವಿಕುಮಾರ್‍ರವರು ಆಸ್ಪತ್ರೆಗೆ ದಾಖಲಾಗಿ ಮನೋವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಆಗ್ರಹಿಸುತ್ತಾರೆ. ಈ ತರಹದ ಕೆಟ್ಟ ಹೇಳಿಕೆಗಳನ್ನು ಕೊಟ್ಟು ಸಮಾಜದ ಸ್ಥೆರ್ಯ, ಆತ್ಮ ಶಕ್ತಿ ತಪ್ಪಿಸುವ ಕೆಲಸವನ್ನು ಮಾಡಿದಲ್ಲಿ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಹಾಗೂ ಧೈರ್ಯವಿದ್ದರೆ ದ.ಕ.ಹಾಗೂ ಉಡುಪಿ ಜಿಲ್ಲೆಗೆ ಬಂದು “ಸಚಿವದ್ವಯರು ಉಗ್ರಗಾಮಿಗಳು” ಎಂದು ಹೇಳಿಕೆ ನೀಡಲಿ . ಈ ಬಗ್ಗೆ ರವಿಕುಮಾರ್ ಮೇಲೆ ಪೋಲೀಸ್ ಇಲಾಖೆ ಶೀಘ್ರ ಕಾನೂನು ಕ್ರಮ ಜರುಗಿಸಬೇಕು ಎಂದು ನ್ಯಾಯವಾದಿ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರ ಪೂಜಾರಿ ಆಗ್ರಹಿಸಿರುತ್ತಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter