Published On: Tue, Mar 13th, 2018

ನವಜೀವನ ಗೇಮ್ಸ್ ಕ್ಲಬ್ ಪಾಣೆಮಂಗಳೂರು ಬೆಳ್ಳಿ ಹಬ್ಬದ ಅಂಗವಾಗಿ ಕ್ರೀಡಾಕೂಟ

ಬಂಟ್ವಾಳ : ಪಾಣೆಮಂಗಳೂರು ಎಸ್‍ವಿಎಸ್ ಶಾಲಾ ಕ್ರೀಡಾಂಗಣದಲ್ಲಿ ಮಾ. 10ರಂದು ನವಜೀವನ ಗೇಮ್ಸ್ ಕ್ಲಬ್ (ರಿ) ಪಾಣೆಮಂಗಳೂರು ಇದರ ಬೆಳ್ಳಿ ಹಬ್ಬದ ಅಂಗವಾಗಿ ನಡೆದ ಹೊನಲು ಬೆಳಕಿನ ನವಜೀವನೋತ್ಸವ 2018 ಕಬಡ್ಡಿ , ಕ್ರಿಕೆಟ್, ಹಗ್ಗಜಗ್ಗಾಟ ಪಂದ್ಯಾಟ ಕ್ಲಬ್ ಅಧ್ಯಕ್ಷ ಶರತ್ ಎಚ್. ಅಧ್ಯಕ್ಷತೆಯಲ್ಲಿ ನಡೆಯಿತು.IMG-20180312-WA0001 (1)

ಉದ್ಯಮಿ ಕಿಶೋರ್ ಆಳ್ವ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ರಘುನಾಥ ಸೋಮಯಾಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬಂಟ್ವಾಳ ರೋಟರಿ ಟೌನ್ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ, ಉದ್ಯಮಿ ಪ್ರಶಾಂತ ಕಾರಂತ, ಸತ್ಯದೇವತಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಪಿ.ಜೆ, ಶಾಲಾ ಸಂಚಾಲಕ ವೆಂಕಟ್ರಾಯ ಶೆಣೈ ಪಿ. , ಸತ್ಯದೇವತಾ ಗುಡಿಯ ಅರ್ಚಕ ಉಮೇಶ್ ಪಿ. , ಕ್ಲಬ್ ಸದಸ್ಯ ನಝೀರ್ ಮೊದಲಾದವರು ಉಪಸ್ಥಿತರಿದ್ದರು.IMG-20180312-WA0000

ಕಬಡ್ಡಿಯಲ್ಲಿ ಕೆಎಫ್‍ಡಿಸಿ ಸುಳ್ಯ ಪ್ರಥಮ, ನವಯುಗ ಕುಕ್ಕಾಜೆ ದ್ವಿತೀಯ , ಫ್ರೆಂಡ್ಸ್ ಕುಂಡೇರಿ ತೃತೀಯ, ಶ್ರೀದೇವಿ ಫ್ರೆಂಡ್ಸ್ ನಾಯಿಲಕಾಪಿಕಾಡು ಚತುರ್ಥ ಬಹುಮಾನ ಪಡೆದರು. ಕ್ರಿಕೇಟ್‍ನಲ್ಲಿ ಎನ್‍ಜಿಸಿ ಪಾಣೆಮಂಗಳೂರು ಪ್ರಥಮ, ಗುಡ್‍ಲಕ್ ಪಾಣೆಮಂಗಳೂರು ದ್ವಿತಿಯ, ಎನ್‍ಎಫ್‍ಸಿ ಪಾಣೆಮಂಗಳೂರು ತೃತೀಯ, ಎನ್‍ಜಿಸಿ ಬಿ. ಪಾಣೆಮಂಗಳೂರು ಚತುರ್ಥ ಸ್ಥಾನ ಪಡೆದರು.

ಹಗ್ಗಜಗ್ಗಾಟದಲ್ಲಿ ಶ್ರೀ ದುರ್ಗಾ ಕೆಟರರ್ಸ್ ಪಾಣೆಮಂಗಳೂರು ಪ್ರಥಮ, ಎನ್‍ಜಿಸಿ ಪಾಣೆಮಂಗಳೂರು ದ್ವಿತೀಯ, ನಮ್ಮ ಜವನೆರ್ ಮಂಜನಕಟ್ಟೆ ತೃತೀಯ,, ಆಂಜನೇಯ ಕಣ್ವತೀರ್ಥ ಚತುರ್ಥ ಬಹುಮಾನ ಪಡೆದರು.ಇದೇ ಸಂದರ್ಭ ಕ್ರೀಡಾಪಟುಗಳಾದ ಯನ್.ಪ್ರಶಾಂತ ಕಾರಂತ, ಬೂಬ ಸಾಲ್ಯಾನ್, ಶಿವಾನಂದರನ್ನು ಸಮ್ಮಾನಿಸಲಾಯಿತು. ಸಂಘದ ಹದಿನೈದು ಮಂದಿ ಸಾಧಕರನ್ನು ವೇದಿಕ್ಯೆಯಲ್ಲಿ ಗೌರವಿಸಲಾಯಿತು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter