Published On: Mon, Mar 12th, 2018

ಕಾಪು ಕ್ಷೇತ್ರದಿಂದ ಅನುಪಮಾ ಶೆಣೈ ಸ್ಪರ್ಧೆ!

14BNP (6)

ಬಳ್ಳಾರಿ: ಕೇಂದ್ರ ಚುನಾವಣಾ ಆಯೋಗವು ಮಾರ್ಚ 13 ರಂದು ಭಾರತೀಯ ಜನಶಕ್ತಿ ಪಕ್ಷದ ಚಿಹ್ನೆಯನ್ನು ನೀಡುವ ಸಾಧ್ಯತೆಯಿದ್ದು, ಮಾ. 15 ರಂದು ಬಸವನ ಬಾಗೇವಾಡಿಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಪಕ್ಷದ ಅಧ್ಯಕ್ಷೆಅನುಪಮಾ ಶೆಣೈ ಹೇಳಿದ್ದಾರೆ.

ಕಟ್ಟೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಚುನಾವಣಾ ಆಯೋಗಕ್ಕೆ  ಪೆನ್ನು, ಮೆನಸಿನಕಾಯಿ,  ತೆಂಗಿನಕಾಯಿ ಸೇರಿದಂತೆ 10 ಕ್ಕೂ ಹೆಚ್ಚು ಗುರುತುಗಳನ್ನು ಕಳುಹಿಸಿಕೊಡಲಾಗಿದ್ದು, ಇದರಲ್ಲಿ ಯಾವ ಚಿನ್ಹೆಯನ್ನು ನೀಡಲಿದೆ ಎಂದು ಕಾದು ನೋಡಬೇಕು ಎಂದರು.

ಕಾಪು ಕ್ಷೇತ್ರದಿಂದ ಸ್ಪರ್ಧೆ: ಈ ಬಾರಿ ಚುನಾವಣೆಯಲ್ಲಿ ತಾವು ಕಾಪು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾಗಿ ತಿಳಿಸಿದ ಅವರು, ಕಾರ್ಯಕರ್ತರು ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ನಾನು ಈ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.

ಜನರ ಹಿತವನ್ನು ಕಾಯಲು ಪಕ್ಷವನ್ನು ಹುಟ್ಟುಹಾಕಿದ್ದು, ರಾಜ್ಯದಲ್ಲಿ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter