Published On: Mon, Mar 12th, 2018

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವವರು ನಿಜವಾದ ಹೀರೋಗಳು : ಸಹನಾ ಕುಂದರ್

ಪೊಳಲಿ:ಒಬ್ಬ ಯೋಧನನ್ನು ಮಾದರಿಯಾಗಿಟ್ಟುಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ದೇಶ ಕಾಯುವ ಸೈನಿಕರು ನಮ್ಮ ನಿಜವಾದ ಹೀರೋಗಳು, ಚಿತ್ರ ನಟರಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವವರು, ಗುಂಡೇಟು ಬೀಳಿಸಿಕೊಳ್ಳುವವರು ಮತ್ತು ಹೆಣ್ಮಕ್ಕಳ ಪ್ರಾಣ ರಕ್ಷಿಸುವವರು ನಿಜವಾದ ಹೀರೋಗಳು ಎಂದು  ವಕೀಲೆ ಸಹನಾ ಕುಂದರ್  ತಿಳಿಸಿದ್ದಾರೆ.

ಅಮ್ಮುಂಜೆ ವೀರಯೋಧ ಯಾದವ ಫ್ರೆಂಡ್ಸ್ ಇದರ 16ನೇ ವಾರ್ಷಿಕೋತ್ಸವ ಹಾಗೂ ಯಾದವ ಫ್ರೆಂಡ್ಸ್ ನ ಮಹಿಳಾ ಘಟಕದ ಉದ್ಘಾನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

11-5

ಈ ದೇಶದ ತ್ರಿವರ್ಣ ಧ್ವಜ ಮುಟ್ಟುವ ಅಧಿಕಾರ ನಮ್ಮ ಐಶಾರಾಮಿ ಜೀವನ ಸಾಗಿಸುವ ರಾಜಕಾರಣಿಗಳಿಗೆ ಇಲ್ಲವೇ ಇಲ್ಲ. ಅದೇನಿದ್ದರೂ ಗಡಿ ಕಾಯುವ ಯೋಧರು, ಅವರ ತಂದೆ-ತಾಯಿಯರು ಯಾರೂ ಇಲ್ಲದಿದ್ದರೆ ಗದ್ದೆಯಲ್ಲಿ ಕೆಲಸ ಮಾಡುವ ಹೆಂಗಸರಿಗೆ ಆ ಅಧಿಕಾರವಿದೆ ಎಂದು ಹೇಳಿದರು.

11vp veera yodha

11-1

ವಿವಿಧ ರೀತಿಯಲ್ಲಿ ಭಿಕ್ಷಾಟನೆ ಮಾಡುವ ಮೋಸಗಾರರನ್ನು ನಾವಿಂದು ಕಾಣುತ್ತೇವೆ. ಇಂತಹವರಿಗೆ ತಕ್ಕ ಪಾಠ ಕಲಿಸಲು ಸಾಮಾಜಿಕ ಜಾಲತಾಣಗಳ ಬಳಕೆ ಮಾಡಬೇಕೇ ವಿನಾ ಅವುಗಳ ದುರ್ಬಳಕೆ ಮಾಡಬಾರದು. ನಾಗರಿಕ ಸಮಾಜಕ್ಕೆ ನಮ್ಮಿಂದಾದ ಸೇವೆ ಮಾಡುವುದು ಮರೆಯಬಾರದು ಎಂದು ಶ್ರೀರಾಮಕೃಷ್ಣ ಮಿಶನಿನ ಸಾಮಾಜಿಕ ಕಾರ್ಯಕರ್ತ ಸೌರಜ್ ಅಭಿಪ್ರಾಯಪಟ್ಟರು.

11-4

11-3
ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಲ್ಲಿ ನಮ್ಮ ಟೆನ್ಶನ್ ಕಡಿಮೆಯಾಗುತ್ತದೆ. ನಮ್ಮ ಹೆಚ್ಚಿನ ರೋಗಗಳಿಗೆ ಟೆನ್ಶನ್ ಕಾರಣ. ಇಲ್ಲಿ ಉದ್ಘಾಟನೆಗೊಂಡ ಮಹಿಳಾ ಸಂಘದಲ್ಲಿ ನೀವೆಲ್ಲ ಸಕ್ರಿಯರಾದರೆ ಮಹಿಳೆಯರ ಟೆನ್ಶನ್ ಕಡಿಮೆಯಾಗಲಿದೆ ಎಂದು ಪತಂಜಲಿ ಸ್ಥಳೀಯ ಘಟಕದ ಯೋಗಬಂಧು ಸುಬ್ಬರಾವ್ ಪೊಳಲಿ ಅಭಿಪ್ರಾಯಪಟ್ಟರು.

ಈ ವೇಳೆ  ಸ್ವಚ್ಛ ಭಾರತ ಯೋಜನೆಯಡಿ ಸಂಘದ ಸದಸ್ಯರು ಊರವರ ಸಹಕಾರದಲ್ಲಿ `ಸ್ವಚ್ಛ ಅಮ್ಮುಂಜೆ’ ಹೆಸರಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದರು.

11-02

0000009

00001ಕಾರ್ಯಕ್ರಮವನ್ನು ದೇವಳದ ಅರ್ಚಕ ಶಶಿಧರ ಭಟ್‍ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಹ್ಯಾದ್ರಿ ವಿದ್ಯಾ ಸಂಸ್ಥೆಯ ನಿರ್ದೇಶಕ ಅಮ್ಮುಂಜೆಗುತ್ತು ದೇವದಾಸ ಹೆಗ್ಡೆ ವಹಿಸಿದ್ದರು. ಯಾದವ ಫ್ರೆಂಡ್ಸಿನ ಗೌರವಾಧ್ಯಕ್ಷ ಕರುಣಾಕರ ಆಳ್ವ, ,ಎಸ್ ಆರ್ ಹಿಂದೂ ಫ್ರೆಂಡ್ಸಿನ ಅಧ್ಯಕ್ಷ ಲೋಕೇಶ ಭರಣಿ, ಉಧ್ಯಮಿ ಸುಕೇಶ್ ಚೌಟ, ಗಣೇಶ ಕಲಾಯಿ, ವಿಶ್ವಂಭರ ವರಕೋಡಿ, ಪ್ರವೀಣ ಬೆಂಜನಪದವು, ಚಂದ್ರಹಾಸ ಶೆಟ್ಟಿಗಾರ, ಯಾದವ ಫ್ರೆಂಡ್ಸ್ ಸಂಘದ ಅಧ್ಯಕ್ಷ ಪ್ರಶಾಂತ ಕುಲಾಲ್ ಅಮ್ಮುಂಜೆ, ಮಹಿಳಾ ಘಟಕಾಧ್ಯಕ್ಷೆ ಚೇತನಾ ರಾವ್, ಗೌರವಾಧ್ಯಕ್ಷೆ ವಿಜಯಲಕ್ಷ್ಮೀ ಬಳ್ಳಾಲ್‍ಯಾದವ ಫ್ರೆಂಡ್ಸಿನ ಸ್ಥಾಪಕ ಅಧ್ಯಕ್ಷ ಜನಾರ್ದನ ಪೂಜಾರಿ ಅಮ್ಮುಂಜೆ ಇದ್ದರು. ನಿಶ್ಮಿತಾ ಸ್ವಾಗತಿಸಿ ರಾಜೇಂದ್ರ ಎಕ್ಕಾರ್ ನಿರೂಪಿಸಿದರು.

000005

00011

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter