ಅಂತರ್ ಕಾಲೇಜ್ ಕ್ರಿಕೆಟ್ ಪಂದ್ಯಾಟ: ಆಳ್ವಾಸ್ ಕಾಲೇಜ್ ಗೆ ಪ್ರಥಮ ಸ್ಥಾನ
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜ್ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ 2017-18ನೇ ಸಾಲಿನ ಪುರುಷರ ಉಡುಪಿ ಜೊಮ್ ಅಂತರ್ ಕಾಲೇಜ್ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜ್ ಪ್ರಥಮ ಸ್ಥಾನ ಗಳಿಸಿದೆ.
ಎಸ್.ಎಮ್.ಎಸ್ ಕಾಲೇಜ್ ಬ್ರಹ್ಮಾವರ ದ್ವಿತೀಯ ಸ್ಥಾನವನ್ನು ಪಡೆದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಳ್ವಾಸ್ ತಂಡವು 50 ಒವರ್ ಗಳಲ್ಲಿ 8 ವಿಕೆಟ್ ಗಳಲ್ಲಿ 287 ರನ್ನ್ ಗಳಿಸಿತು. ಆಳ್ವಾಸ್ ಪರ ಮನೋಜ್ ಎಮ್ 120, ಪವನ್ ಜೆ ಗೊಕಲೆ 54 ರನ್ನ್ಗಳನ್ನು ಗಳಿಸಿದರು. ಎಸ್ ಎಮ್ಎಸ್ ಕಾಲೇಜ್ ಬ್ರಹ್ಮವರ ಪರ ಸುಧೀರ್ 4, ಪ್ರದೀಪ್ 2 ವಿಕೆಟ್ ಪಡೆದಿದ್ದಾರೆ. ನಂತರ ಬ್ಯಾಟಿಂಗ್ ಮಾಡಿದ ಎಸ್.ಎಮ್.ಎಸ್ ಕಾಲೇಜ್ ಬ್ರಹ್ಮಾವರ ತಂಡವು 96 ರನ್ನಿಗೆ ತನ್ನ ಎಲ್ಲಾ ವಿಕೆಟಗಳನ್ನು ಕಳೆದುಕೊಂಡಿತು. ಎಸ್ಎಮ್ಎಸ್ ಕಾಲೇಜ್ ಬ್ರಹ್ಮಾವರ ತಂಡದ ಪರ ಅಭಿಶೇಕ್ 27, ಅಶಿಕ್ 19 ರನ್ನ್ಗಳನ್ನು ಗಳಿಸಿದರು. ಆಳ್ವಾಸ್ ಪರ ಪವನ್ 5, ಯಶ್ವಿತ್ 3 ವಿಕೆಟ್ಗಳನ್ನು ಪಡೆದರು. ಆಳ್ವಾಸ್ ಕಾಲೇಜು ತಂಡವು 191 ರನ್ನ್ಗಳೊಂದಿಗೆ ಲೆಸ್ಲಿ ಡಿಸೋಜ ಮೆಮೊರಿಯಲ್ ಟ್ರೋಪಿಯನ್ನು ತನ್ನದಾಗಿಸಿತು.
ಈ ಸಂದರ್ಭದಲ್ಲಿ ಎನ್ ಐಟಿಕೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೆಶಕ ಶಿವರಾಮ್.ಎ, ಪಂದ್ಯಾಟದ ವೀಕ್ಷಣೆಗಾರರಾಗಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ದಿವಾಕರ್, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ.ಕೆಂಪರಾಜ್ ಎಚ್.ಬಿ, ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೆಶಕ ತಿಲಕ್ ಶೆಟಿ, ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕ ಅವಿನ್, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿಕುಮಾರ್ ಟಿ.ಎಸ್ ಹಾಗೂ ಎಸ್.ಎಮ್.ಎಸ್ ಕಾಲೇಜ್ ಬ್ರಹ್ಮಾವರ ಪ್ರಾಧ್ಯಾಪಕ ಅಶ್ವಿನ್ ಶೆಟ್ಟಿ ಸಮಾರೋಪ ಸಮಾರಮಭದಲ್ಲಿ ಭಾಗವಹಿಸಿದ್ದರು.