Published On: Mon, Mar 12th, 2018

ರವಿ ಕುಮಾರ್ ಅವಿವೇಕಿಯಂತೆ ವರ್ತಿಸುತ್ತಿದ್ದಾರೆ: ಸಚಿವ ಖಾದರ್ ತಿರುಗೇಟು

06-1433573598-utkhader

ಮಂಗಳೂರು: ಬುದ್ಧಿ ಸ್ಥಿಮಿತ ಕಳೆದುಕೊಂಡ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಓರ್ವ ಅವಿವೇಕಿಯಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಯು.ಟಿ ಖಾದರ್ ಸಚಿವ ರೈ ಹಾಗೂ ಖಾದರ್ ಭಯೋತ್ಪಾದಕರು ಎಂದ ರವಿಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರವಿಕುಮಾರ್ ಅಂತವರ ಮಾತಿಗೆ ನಾವು ಮಹತ್ವ ನೀಡುವುದಿಲ್ಲ. ಬಿಜೆಪಿಗರು ಅಧಿಕಾರಕ್ಕಾಗಿ ಯಾವ ಕೆಳಮಟ್ಟಕ್ಕೂ ಹೋಗಲು ಸಿದ್ಧರಿದ್ದಾರೆ ಎಂಬುದಕ್ಕೆ ಅವರೇ ಸಾಕ್ಷಿ ಎಂದು ಟೀಕಿಸಿದರು.

ಚುನಾವಣೆ ಸಮೀಪದಲ್ಲಿರುವುದರಿಂದ ಮಾನಸಿಕ ರೋಗ ಬರುವ ಕಾಲ ಇದು. ಜನಸಾಮಾನ್ಯರ ನೆಮ್ಮದಿ ಕೆಡಿಸುವ ಯಾವ ಕೆಲಸವಾಗಬಾರದೆಂದು ಸೋದರನಾಗಿ, ರವಿಕುಮಾರ್ ಅವರಿಗೆ ಬುದ್ಧಿ ಹೇಳುತ್ತಿದ್ದೇನೆ ಎಂದರು.

ಭಾರತವನ್ನು ವಿರೋಧಿಸುವ ಪ್ರತ್ಯೇಕವಾದಿಗಳಿಗೆ ಬಿಜೆಪಿಯ ಬೆಂಬಲವಿದೆ ನ್ಯಾಗಲ್ಯಾಂಡ್ ತ್ರಿಪುರದಲ್ಲೂ ಪ್ರತ್ಯೇಕವಾದಿಗಳನ್ನು ಬೆಂಬಲಿಸಿದ್ದಾರೆ. ಜತೆಗೆ ಮತಕ್ಕಾಗಿ ಸಮಾಜವನ್ನು ವಿಭಾಗಿಸುವುದು ಇವರ ತಂತ್ರ ಎಂದು ವಾಗ್ದಾಳಿ ನಡೆಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter