Published On: Mon, Mar 5th, 2018

ಕೆರೆಯ ನಡುವಲ್ಲೊಂದು ಬಸದಿ..!

ನಮ್ಮದೇಶ ಸರ್ವಧರ್ಮ ಸಮನ್ವಯತೆಯದೇಶವಾಗಿದ್ದು ಹಲವು ಧರ್ಮ, ಜಾತಿಗಳ ನೆಲೆವೀಡೂ ಹೌದು. ಹಿಂದೂಗಳು ಪೂಜಿಸುವ ಸ್ಥಳವನ್ನು ‘ದೇವಾಲಯ’ವೆಂದುಕರೆದರೆ, ಮುಸ್ಲೀಮರು ‘ಮಸೀದಿ’, ಕ್ರಿಶ್ಚಿಯನ್ನು ‘ಚರ್ಚ್’ ಹಾಗೂ ಜೈನರು ಪೂಜಿಸುವ ಸ್ಥಳವನ್ನು ‘ಬಸದಿ’ಗಳೆಂದು ಕರೆಯುತ್ತಾರೆ.ಸಾಮಾನ್ಯವಾಗಿ ಪುಣ್ಯಕ್ಷೇತ್ರಗಳು ಮತ್ತು ಮಂದಿರಗಳು ಪ್ರಕೃತಿಯಸೊಬಗಿನ ಮಡಿಲಲ್ಲೇ ನೆಲೆ ನಿಂತಿರುವುದುಸಾಮಾನ್ಯ.ದೇಶದಲ್ಲಿ ಹಲವರು ಧರ್ಮಗಳಿದ್ದು ಅವುಗಳ ಪೈಕಿ ಜೈನಧರ್ಮವುಒಂದು.ದೇಶದೆಲ್ಲೆಡೆ ಹಲವಾರುಜೈನ ಬಸದಿಗಳು ವಿವಿಧರೀತಿಯ ಪ್ರಕೃತಿಯರಮಣೀಯ ಸ್ಥಳಗಳಲ್ಲಿ ನೆಲೆ ನಿಂತಿವೆ. ಇಲ್ಲೊಂದುಅಂತಹದೇ ವಿಶಿಷ್ಟ ಬಸದಿಯೊಂದಿದ್ದುಅದುವೇಕಾರ್ಕಳದ ವರಂಗ ಬಸದಿ.

IMG_2197
ದಕ್ಷಿಣ ಭಾರತದಲ್ಲೇಅತ್ಯಂತ ವಿಶಿಷ್ಟವೆನ್ನಬಹುದಾದಈ ಬಸದಿಯುಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿರಸ್ತೆಯಲ್ಲಿ ಸಿಗುವ ವರಂಗ ಎಂಬ ಪುಟ್ಟ ಹಳ್ಳಿಯಲ್ಲಿದೆ. ಪಶ್ಚಿಮ ಘಟ್ಟದ ಹಸಿರಿನ ಸೆರಗಿನ ಮಧ್ಯದಲ್ಲಿ ನಳನಳಿಸುತ್ತಿರುವ ಗದ್ದೆ ತೋಟಗಳ ನಡುವಲ್ಲೊಂದು ವಿಶಾಲ ಕೆರೆ, ಕೆರೆಯಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಪದ್ಮಾವತಿದೇವಿಯ ಬಸದಿಯಿದ್ದು,ದೂರದಿಂದಲೇ ಪ್ರಕೃತಿ ಪ್ರಿಯರ ಮನಸ್ಸನ್ನು ಸೂರೆಗೊಂಡು ಬಿಡುತ್ತದೆ.ನಾಲ್ಕೂ ಸುತ್ತಲೂತುಂಬಿದ ನೀರಿನ ಮಧ್ಯೆ ಬೆಳೆದಿರುವ ತಾವರೆಯ ಹೂವುಗಳ ಮೇಲೆಯೇ ಬಸದಿ ನಿಂತಿದೆಯೇನೋಎನ್ನಿಸುವ ಸೌಂದರ್ಯ.ಸುಮಾರು ಹದಿನಾಲ್ಕರಿಂದ ಹದಿನೈದುಎಕರೆ ವಿಸ್ತಾರವಾಗಿ ಸದಾ ಮೂರುಋತುಗಳಲ್ಲೂ ತುಂಬಿ ತುಳುಕುವ ಕೆರೆಯ ನಡುವೆ ನಕ್ಷತ್ರಾಕೃತಿಯಚತುರ್ಮುಖ ಬಸದಿಯು ನೆಲೆ ನಿಂತಿದೆ.1320

ಈ ಬಸದಿಯನ್ನುತಲುಪಬೇಕೆಂದರೆಇರುವ ಏಕೈಕ ವ್ಯವಸ್ಥೆದೋಣಿಯೊಂದೇ.ದೋಣಿಯ ಮೂಲಕ ಬಸದಿಯೆಡೆಗೆ ಸಾಗುವುದೇರೋಚಕ ಹಾಗೂ ರೋಮಾಂಚನತರಿಸುವಅನುಭವವಾಗಿದ್ದು, ಸುಮಾರು ನೂರರಿಂದ ನೂರೈವತ್ತು ಮೀಟರ್‍ದೂರದೋಣಿಯುಕಮಲದ ಹೂವುಗಳನ್ನು ಸೀಳಿಕೊಂಡು ದೋಣಿಯು ಸಾಗುವುದೇಅವರ್ಣನೀಯ.ದೋಣಿಯಿಂದ ಇಳಿದು ಬಸದಿಯುಕಟ್ಟೆಯನ್ನು ಹತ್ತಿ ನೋಡಿದರೆಎಲ್ಲೆಲ್ಲೂಅಗಾಧ ಜಲರಾಶಿ, ಸಮುದ್ರದ ಮಧ್ಯದಲ್ಲಿಏಕಾಂಗಿಯಾದಂತಹಅನುಭವವನ್ನು ನೀಡುತ್ತದೆ.ಜಲರಾಶಿ ಮಧ್ಯೆಅಬ್ಬಬ್ಬಾಎಂದರೆಐದು ಸೆಂಟ್ಸ್‍ಜಾಗದಲ್ಲಿ ಮಂಟಪದಂತೆಅತ್ಯಂತ ವಿಶಿಷ್ಟವಾಗಿ ನಿರ್ಮಿಸಿರುವ ಬಸದಿಯುತನ್ನ ಒಡಲಾಳದಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹುದುಗಿಕೊಂಡಿದೆ.

6149
ಜೈನಧರ್ಮದತೀರ್ಥಂಕರರಾದ ಪಾಶ್ರ್ವನಾಥ, ನೇಮಿನಾಥ, ಶಾಂತಿನಾಥ ಮತ್ತುಅನಂತನಾಥರ ವಿಗ್ರಹಗಳು ಕರಿಶಿಲೆಯಲ್ಲಿ ಖಡ್ಗಾಸನ ಭಂಗಿಯಲ್ಲಿಕೆತ್ತಲ್ಪಟ್ಟಿರುವುದುಇಲ್ಲಿನ ವಿಶೇಷಗಳಲ್ಲೊಂದು.ಈ ಕ್ಷೇತ್ರವು ಹೊಯ್ಸಳ ಮತ್ತುಚಾಲುಕ್ಯರ ಶಿಲ್ಪಕಲಾ ಶೈಲಿಯ ಸಮ್ಮಿಶ್ರಣವಾಗಿದ್ದು, ವಿಗ್ರಹಗಳ ಎರಡು ಬದಿಗಳಲ್ಲಿ ಯಕ್ಷಯಕ್ಷಿಯರ ಬಿಂಬಗಳಿವೆ. ಪೂರ್ವದಿಕ್ಕಿನಲ್ಲಿ ಪಾಶ್ರ್ವನಾಥ ಸ್ವಾಮಿಯ ವಿಗ್ರಹದ ಪಕ್ಕದಲ್ಲಿ ಪದ್ಮಾವತಿದೇವಿಯ ವಿಗ್ರಹವಿದೆ.ಪದ್ಮಾವತಿದೇವಿಯೇಇಲ್ಲಿನ ಪ್ರಧಾನದೇವರು.ಈ ಬಸದಿಯು ನಾಲ್ಕು ದಿಕ್ಕಿನಿಂದಲೂಏಕರೂಪವಾದ ಪ್ರವೇಶದ್ವಾರವಿದ್ದೂ ಪ್ರತಿಯೊಂದು ದಿಕ್ಕಿಗೂ ಒಂದೇ ಅಳತೆಯ ಮುಖ ಮಂಟಪಗಳಿದ್ದು ಪ್ರವೇಶದ್ವಾರದ ಹೊರಭಾಗದಲ್ಲಿ ಭಕ್ತರು ಬಸದಿಗೆ ಪ್ರದಕ್ಷಿಣೆಹಾಕಲು ಅನುವಾಗುವಂತೆ ಪ್ರದಕ್ಷಿಣೆ ಪಥದೊಂದಿಗೆಇದಕ್ಕೆ ನಕ್ಷತ್ರಆಕಾರದಜಗುಲಿಯನ್ನು ನಿರ್ಮಿಸಲಾಗಿದೆ.ಕೆರೆಯ ಮಧ್ಯದಲ್ಲಿ ನಿರ್ಮಿತವಾದ ಈ ಬಸದಿಯುಗೋಡೆ ಮತ್ತು ಮಂಟಪವುಸಂಪೂರ್ಣ ಶಿಲಾಮಯವಾಗಿದ್ದು ಇದರಛಾವಣಿಯನ್ನೂ ಸಂಪೂರ್ಣಕಲ್ಲಿನಿಂದಲೇ ನಿರ್ಮಿಸಲಾಗಿದೆ.6219

ಈ ಬಸದಿಯನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದುಇಲ್ಲಿನ ಮೂರ್ತಿಗಳನ್ನೂ ಅದೇ ಸಂದರ್ಭದಲ್ಲಿನಿರ್ಮಿಸಲಾಗಿದೆಎಂದು ಹೇಳಲಾಗಿದೆ.ಈ ಕೆರೆಯನ್ನುಆಳುಪ ಮನೆತನದರಾಣಿಯಾದಜಾಕಲೀದೇವಿ ನಿರ್ಮಿಸಿದ್ದಾಳೆಂದು ಇತಿಹಾಸದಿಂದ ತಿಳಿದುಬರುತ್ತದೆ.ಇಂತಹವಿೈಶಿಷ್ಟಕ್ಷೇತ್ರ ಮೂಲತಃಜೈನರ ಪವಿತ್ರ ಸ್ಥಳವಾಗಿದ್ದರೂ ಇಲ್ಲಿಗೆ ಬಂದು ಪೂಜೆ ಮತ್ತು ಸೇವೆಯನ್ನು ಸಲ್ಲಿಸುವವರಲ್ಲಿ ಬಹುತೇಕ ಮಂದಿಅನ್ಯದರ್ಮೀಯರು.ಅಪಾರ ಜಲರಾಶಿಯ ಮಧ್ಯೆ ವಿರಾಜಮಾನಳಾಗಿರುವ ಪದ್ಮಾವತಿದೇವಿಯುಭಕ್ತಾದಿಗಳ ಇಷ್ಟಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆಯಿದೆ.ಮದುವೆಯಾಗಲು ಹರಕೆ ಹೇಳಲು, ಮದುವೆಯಾದ ಹೊಸ ಜೋಡಿ ಮೊದಲ ಪೂಜೆ ಸಲ್ಲಿಸಲು ಈ ಬಸದಿಗೆ ಬರುವುದು ವಿಶೇಷ. ಚರ್ಮರೋಗಿಗಳಿಗೂ ಇಲ್ಲಿನದೇವರಿಗೆ ಹರಕೆಯನ್ನು ಹೇಳಿ ಪರಿಹಾರವಾದರೆಬೆಳ್ತಿಗೆ ಅಕ್ಕಿ ಹಾಗೂ ಹುರುಳಿಯನ್ನು ದೇವರಿಗೆಸಮರ್ಪಿಸುತ್ತಾರೆ.

9772
ಹರಕೆಯಾಗಿ ಬರುವ ಅಷ್ಟೂ ಅಕ್ಕಿ, ಹುರುಳಿಗಳನ್ನು ಈ ಕೆರೆಯಲ್ಲಿಆಶ್ರಯ ಪಡೆದಿರುವ ಮತ್ಸ್ಯಗಳಿಗೆ ಆಹಾರವಾಗಿನೀಡÀಲಾಗುತ್ತದೆ. ನೀರಿಗೆ ಅಕ್ಕಿ, ಹುರುಳಿಗಳನ್ನು ಹಾಕಿದಾಗ ನೀರಿನಿಂದ ಮೇಲೆದ್ದುಆಹಾರತಿನ್ನಲು ಪೈಪೋಟಿ ನಡೆಸುವಮತ್ಸ್ಯರಾಶಿಯನ್ನು ನೋಡುವುದೇಅಂದ.ಈ ಕೆರೆಯು ವರ್ಷದ ಸರ್ವ ಋತುಗಳಲ್ಲೂ ತುಂಬಿ ತುಳುಕಿಕೊಂಡಿರುತ್ತಿದ್ದು, ಅತೀಯಾದ ಬರಗಾಲದ ಸಂದರ್ಭಒಮ್ಮೆ ಮಾತ್ರ ಬಸದಿಗೆ ನಡೆದುಕೊಂಡುಹೋಗುವಷ್ಟು ಕೆರೆ ಬರಿದಾಗಿದ್ದು ಬಿಟ್ಟರೆ ಉಳಿದೆಲ್ಲಾ ಕಾಲವೂ ಈ ಕೆರೆಯುತುಂಬಿರುತ್ತದೆ.ಬಸದಿಯು ಪಕ್ಕದಲ್ಲೆ ವರಂಗತೀರ್ಥವೆಂಬ ನೀರಿನ ಸೆಲೆಯ ಸ್ಥಳವಿದ್ದು ಇದುವೇ ಈ ಕೆರೆಗೆ ನೀರಿನ ಮೂಲ.ಬಸದಿಯಲ್ಲಿ ಬೆಳಗ್ಗೆ 05.30ಕ್ಕೆ ಪ್ರಥಮ ಪೂಜೆಯೊಂದಿಗೆ ಸಂಜೆಯೊಳಗೆ ಮೂರು ಪೂಜೆಗಳು ನಡೆಯುತ್ತದೆ.ಸೋಮವಾರ ಮಂಗಳವಾರ ಮತ್ತು ಶುಕ್ರವಾರಇಲ್ಲಿ ಪದ್ಮಾವತಿದೇವಿಗೆ ವಿಶೇಷ ಪೂಜೆಯು ನಡೆಯುವುದರೊಂದಿಗೆ ಸಿಂಹ ಮಾಸದಲ್ಲಿ ಈ ಬಸದಿಗೆ ಭಕ್ತರದಂಡೇ ಹರಿದು ಬರುತ್ತದೆ.

ಕೆರೆಯದಡ ಹಾಗೂ ಬಸದಿಯ ಮದ್ಯೆ ಸಂಪರ್ಕಸೇತುವಾಗಿಇರುವ ಏಕೈಕ ಆಸರೆಯೆಂದರೆದೋಣಿ ಎನೋ ನಿಜ. ಆದರೆದೋಣಿಯನ್ನು ನಡೆಸಲುಇಲ್ಲಿ ಪ್ರತ್ಯೇಕ ಅಂಬಿಗನಿಲ್ಲವಾಗಿದ್ದು, ಬಸದಿಯುಇಂದ್ರರೇ (ಅರ್ಚಕರು) ಇಲ್ಲಿದೋಣಿಗೆ ಅಂಬಿಗಎನ್ನುವುದುಇಲ್ಲಿನವಿಶೇಷ. ಒಬ್ಬನೇಒಬ್ಬ ಭಕ್ತಅಥವಾಅದೆಷ್ಟೇ ಭಕ್ತರುದಡದಲ್ಲಿ ನಿಂತಿದ್ದರೂ ಸ್ವಲ್ಪವೂ ಬೇಸರಿಸಿಕೊಳ್ಳದೇ ಇಂದ್ರರುಭಕ್ತರನ್ನು ಬಸದಿಗೆ ಕರೆದುಕೊಂಡು ಬಂದು ಪೂಜೆಮಾಡಿಸಿ ಪ್ರಸಾದ ನೀಡಿ ವಾಪಸ್ಸುಕರೆದುಕೊಂಡು ಬಂದು ಬಿಡುತ್ತಾರೆ. ಮಳೆ ಬಿಸಿಲು ಚಳಿಗಾಳಿಗೆ ಸ್ವಲ್ಪವೂಅಂಜದೆ ಅಳುಕದೇ ಬೇಸರಿಸದೇ ನಗುಮುಖದೊಂದಿಗೆದೋಣಿಗೆ ಹುಟ್ಟು ಹಾಕಿಕೊಂಡು ಬರುವಇವರ ಮುಖವರ್ಚಸ್ಸಲ್ಲೇಅದೇನೋವಿಶಿಷ್ಟ ಕಳೆಯಿದೆ.ದೇಶದಲ್ಲಿ ಮಧ್ಯಪ್ರದೇಶದಲ್ಲಿಬಿಟ್ಟರೆಇಂತಹಎರಡನೆಯಕೆರೆ ಬಸದಿಯಿರುವುದುಕರ್ನಾಟಕದ ವರಂಗದಲ್ಲಿ ಮಾತ್ರ.ಈ ಬಸದಿಗೆ ಪ್ರಾರಂಭದಲ್ಲಿ ಸೇತುವೆಯನ್ನು ನಿರ್ಮಿಸುವ ಪ್ರಸ್ಥಾವನೆಯಿತ್ತಾದರೂ, ಇದರ ಮೂಲ ಸೌಂದರ್ಯ ಹಾಗೂ ಐತಿಹಾಸಿಕತೆಗೆ ದಕ್ಕೆಯಾಗುವುದೆಂಬ ಕಾರಣಕ್ಕೆ ಪ್ರಸ್ಥಾವನೆಯನ್ನು ಭಕ್ತರೇಕೈಬಿಟ್ಟಿದ್ದಾರೆ.

ವರಂಗವು ಕಾರ್ಕಳ ನಗರದಿಂದ ಹೆಬ್ರಿ ತೀರ್ಥಹಳ್ಳಿ ರಸ್ತೆಯಲ್ಲಿ ಸುಮಾರು 24 ಕಿ.ಮೀ ಕ್ರಮಿಸಿದಾಗ ಕಾಣಲು ಸಿಗುತ್ತಿದ್ದು, ಕೆರೆಯ ಸಮೀಪದಲ್ಲೇಇರುವಬೇಡರಾಜನಅರಮನೆಯ ಅವಶೇಷಗಳನ್ನು ನೋಡಲು ಬೆಟ್ಟಕ್ಕೆಚಾರಣವನ್ನೂ ನಡೆಸಬಹುದು. ಪ್ರತೀ ಎಳ್ಳಮವಾಸ್ಯೆಯ ದಿನ ಇಲ್ಲಿನಕುಂದಾದ್ರಿತೀರ್ಥದಲ್ಲಿತಲೆಯೊಡ್ಡಿತೀರ್ಥಸ್ನಾನವನ್ನು ಮಾಡಬಹುದು.ಸಾವಿರ ವರ್ಷಕ್ಕೂ ಮಿಕ್ಕಿದಇತಿಹಾಸವನ್ನು ಹೊಂದಿರುವ ವರಂಗ ಬಸದಿಯುಜೈನರಅತಿಶಯಕ್ಷೇತ್ರವಾಗಿದ್ದು, ಶಾಸನಗಳಲ್ಲಿ ಇದನ್ನು‘ವರಂಗತೀರ್ಥ’ವೆಂದುಉಲ್ಲೇಖಿಸಲಾಗಿದೆ. ‘ವರಂಗ’ ಎಂಬ ಜನಪರ ಕಾಳಜಿ ಹೊಂದಿದರಾಜ ಈ ಊರನ್ನು ಆಳುತ್ತಿದ್ದು, ಈ ಪ್ರದೇಶಕ್ಕೆಆತನ ಹೆಸರೇ ಬಂದಿದೆಎಂದು ತಿಳಿದು ಬರುತ್ತದೆ.ಇನ್ನೊಂದು ಮೂಲದ ಪ್ರಕಾರ ಈ ಬಸದಿಗಳಲ್ಲಿರುವ ತೀರ್ಥಂಕರ ಮೂರ್ತಿಗಳ ಪೈಕಿ ನೇಮಿನಾಥರ ಮೂರ್ತಿಯು ಸ್ವಲ್ಪ ವಾಲಿಕೊಂಡಿರುವುದರಿಂದ‘ವಾರೆ’‘ಅಂಗ’ಶಬ್ದವು‘ವರಂಗ’ಎಂದಾಗಿದೆಎಂದುಇಲ್ಲಿನ ಹಿರಿಯರು ಹೇಳುತ್ತಾರೆ.

ಜೈನ ವಾಸ್ತುಶಿಲ್ಪದಲ್ಲಿ ಒಟ್ಟು ನಾಲ್ಕು ಪ್ರಕಾರಗಳಿದ್ದು, ಅವುಗಳಾದ ಏಕಶಿಲಾ ವಿಗ್ರಹಗಳು, ಮಾನಸ್ತಂಭ, ಬಸದಿಗಳು ಮತ್ತುಸಮಾಧಿಗಳ ಪೈಕಿ ಮಾನಸ್ತಂಭ, ಬಸದಿಗಳು ಮತ್ತು ಸಮಾಧಿಗಳು ವರಂಗದಲ್ಲೇಕಾಣಲು ಸಿಗುವುದು ಇಲ್ಲಿನ ವಿಶೇಷತೆಗಳಲ್ಲೊಂದು. ನೇಮಿನಾಥ ಸ್ವಾಮಿಯ ಬಸದಿ ದೀರ್ಘಆಯತಾಕೃತಿಯಲ್ಲಿದ್ದು, ಚೌಕ ಗರ್ಭಗ್ರಹ, ಸುಖಾಸೀನ, ನವರಂಗ ಮತ್ತು ಮುಖ ಮಂಟಪಗಳಿಂದ ಕೂಡಿದೆ.ಬಸದಿಯೊಳಗೆ ನಾಲ್ಕು ಅಡಿ ಎತ್ತರದಧ್ಯಾನಸ್ಥ ನೇಮಿನಾಥ ಹಾಗೂ ಚಂದ್ರನಾಥ ಸಾಮಿಯ ವಿಗ್ರಹಗಳಿವೆ. ಪೂರ್ತಿ ಬಸದಿಯನ್ನುಕಲ್ಲಿನಿಂದಲೇ ನಿರ್ಮಿಸಿದ್ದು, ಕಪ್ಪುಕಲ್ಲಿನಚಿತ್ತಾರ ಮತ್ತು ಬೆಳಕಿನ ಸಂಯೋಜನೆಯು ಪ್ರವಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.ಪ್ರವೇಶದ್ವಾರದಲ್ಲಿ 45 ಅಡಿ ಎತ್ತರದ ಮಾನಸ್ಥಂಭವಿದ್ದುಇದು ಕರಾವಳಿಯ ಅತಿ ಪ್ರಾಚೀನ ಮಾನಸ್ಥಂಭಗಳ ಪೈಕಿ ಮೂರನೇಅತಿದೊಡ್ಡ ಮಾನಸ್ಥಂಭವಾಗಿದೆ.(ಪ್ರಥಮ ಹಿರಿಯಂಗಡಿಯಲ್ಲಿದ್ದು, ದ್ವಿತೀಯ ಅಳದಂಗಡಿಯಲ್ಲಿದೆ)

ಪ್ರಸಕ್ತ ಶ್ರವಣಬೆಳಗೊಳದ ಮಠಾಧೀಶರಾಗಿರುವಚಾರುಕೀರ್ತಿ ಭಟ್ಟಾರಕ ಶ್ರೀಗಳು ಮೂಲತಃ ವರಂಗದವರಾಗಿರುವುದುಇಲ್ಲಿನ ವಿಶೇಷತೆಗಳಲ್ಲೊಂದು.ವರಂಗ ಬಸದಿಯ ಆಡಳಿತವನ್ನು ಹೊಸನಗರದ ಹುಂಬುಜಬಸದಿಯ ಮಠಾಧೀಶರು ನೋಡಿಕೊಳ್ಳುತ್ತಿದ್ದು, ಈ ಬಸದಿಗೊಂದು ಹೊಸ ರೂಪವನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ.ಪ್ರಕೃತಿ ಸಿರಿಯ ಮಡಿಲ್ಲಿರುವ ಈ ವಿಶಿಷ್ಟ ಕೆರೆ ಬಸದಿಯುಎಲ್ಲರ ಕಣ್ಮನಗಳಿಗೆ ಮುದ ನೀಡುವಸೌಂದರ್ಯವನ್ನು ಹೊಂದಿದ್ದು, ಇಲ್ಲಿನ ಪರಿಸರವನ್ನು ಹಾಗೂ ಕೆರೆಯನ್ನು ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿಕಾಪಾಡುವಜವಾಬ್ದಾರಿಯು ಪ್ರವಾಸಿಗರ ಮೇಲಿದೆ.ಇಲ್ಲಿಇತ್ತೀಚೆಗೆಗೋಲ್ಡನ್‍ಸ್ಟಾರ್‍ಗಣೇಶ್‍ಅಭಿನಯದ‘ಮುಗುಳುನಗೆ’ ಚಲನಚಿತ್ರದಚಿತ್ರೀಕರಣವು ನಡೆದಿದ್ದು, ಈ ಕೆರೆ ಬಸದಿಯುಪ್ರವಾಸಿಗರನ್ನು ಆಕರ್ಷಿಸುವಂತೆಕರ್ನಾಟಕ ಪ್ರವಾಸೋಧ್ಯಮಇಲಾಖೆಯುಇನ್ನೂಹೆಚ್ಚಿನಉತ್ತೇಜನವನ್ನು ನೀಡಬೇಕಿದೆ.

ಲೇಖನ: ಸಂತೋಷ್‍ರಾವ್ ಪೆರ್ಮುಡ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter