Published On: Thu, Feb 22nd, 2018

ಹೀಗೆ ಮಾಡಿದರೆ ಗ್ಯಾಸ್ ಟ್ರಬಲ್ ಕ್ಷಣದಲ್ಲೇ ನಿವಾರಣೆ! ಹೇಗೆ ಗೊತ್ತಾ…?

gas-trouble-home-remedies

ಇಂದಿನ ದಿನಗಳಲ್ಲಿ ಬಹಳಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆ ‘ಅಸಿಡಿಟಿ’. ಎದೆಯಲ್ಲಿ ಉರಿ, ಹುಳಿತೇಗು, ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆ ಅನುಭವ ಮುಂತಾದವು ಅಸಿಡಿಟಿಯ ಲಕ್ಷಣಗಳು.

ಸ್ಥೂಲಕಾಯ, ಉಬ್ಬಸ, ರಕ್ತದೊತ್ತಡ, ಧೂಮಪಾನ… ಈ ಅನಾರೋಗ್ಯ ಸಮಸ್ಯೆಗೆ ದಾರಿಮಾಡುತ್ತಿವೆ. ಇದನ್ನು ನಿರ್ಲಕ್ಷಿಸಿದರೆ ಧ್ವನಿಪೆಟ್ಟಿಗೆ ಹಾಳಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಬನ್ನಿ ಈ ಸಮಸ್ಯೆಯನ್ನು ಹೊಡೆದೋಡಿಸುವ ವಿಧಾನವನ್ನು ತಿಳಿದುಕೊಳ್ಳೋಣ…

ನಾವು ಸೇವಿಸುವ ಆಹಾರ ಗಂಟಲಿನಿಂದ ಅನ್ನ ನಾಳದ ಮೂಲಕ ಜೀರ್ಣಾಶಯವನ್ನು ಸೇರುತ್ತದೆ. ಜೀರ್ಣಾಶಯದಲ್ಲಿ, ಆಹಾರ ಜೀರ್ಣವಾಗಲು ಅಗತ್ಯವಿರುವ ಆಮ್ಲಗಳು, ರಾಸಾಯನಿಕಗಳು ಇರುತ್ತವೆ. ಹೀಗೆ ಉತ್ಪತ್ತಿಯಾಗುವ ಆಮ್ಲಗಳು ನೇರವಾಗಿ ಮೇಲೇರಿದಾಗ ಉಂಟಾಗುವ ಉರಿಯೇ ಅಸಿಡಿಟಿ. ಹೀಗೆ ಆಮ್ಲ ಮೇಲೆ ಬರುವುದನ್ನು ತಡೆಯಲು ಅನ್ನನಾಳದ ಕೊನೆಯಲ್ಲಿ ಸ್ನಾಯುಗಳಿಂದ ಕಾರ್ಯನಿರ್ವಹಿಸುವ ಕವಾಟ ವಿರುತ್ತದೆ. ಇದು ನಾವು ಆಹಾರ ಸೇವಿಸಿದಾಗ ತೆರೆದುಕೊಂಡು ನಂತರ ಮುಚ್ಚಿಕೊಳ್ಳುತ್ತದೆ. ಇದು ಕೆಲಸಮಾಡದಾದಾಗ ಆಮ್ಲಗಳು ಗಂಟಲವರೆಗೂ ಬರುತ್ತವೆ. ಇದರ ಫಲವೇ ಗಂಟಲಲ್ಲಿ ವಿಪರೀತವಾದ ಉರಿ ಉಂಟಾಗುತ್ತದೆ. ಇದು ನಿರಂತರ ಪ್ರಕ್ರಿಯೆ. ಇದನ್ನು ನಿವಾರಿಸಲು ನಮ್ಮ ಪೂರ್ವಜರು ಸುಲಭ ಪರಿಹಾರವನ್ನು ಕಂಡುಹಿಡಿದಿದ್ದಾರೆ. ಅದು ಯಾವುದೆಂದು ತಿಳಿಯೋಣ.

ನಾವು ದಿನ ನಿತ್ಯ ಅಡುಗೆಯಲ್ಲಿ ಜೀರಿಗೆಯನ್ನು ಬಳಸುತ್ತೇವೆ. ಹಲವಾರು ಅನಾರೋಗ್ಯಗಳನ್ನು ಹೊಡೆದೋಡಿಸುವ ಗುಣಗಳುಳ್ಳ ಜೀರಿಗೆಯನ್ನು ಕುಟ್ಟಿ ಪುಡಿಮಾಡಿ ಅಥವಾ ಮಿಕ್ಸಿಯಲ್ಲಿ ಪುಡಿಮಾಡಿ ನೀರು ಹಾಕಿ ಕುದಿಸಬೇಕು. ತಣ್ಣಗಾದನಂತರ ಸೋಸಿಕೊಂಡು ಖಾಲೀ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಮಾಡುವುದರಿಂದ ಜೀರ್ಣಾಶಯ ಶುಭ್ರವಾಗುತ್ತದೆ. ಮಲಬದ್ಧತೆಯನ್ನು ಹೊಡೆದೊಡಿಸುತ್ತದೆ. ಅಜೀರ್ಣದ ಸಮಸ್ಯೆ ನಿವಾರಿಸುತ್ತದೆ. ಹೀಗೆ ಪ್ರತೀನಿತ್ಯ ಜೀರಿಗೆ ನೀರನ್ನು ಕುಡಿಯುತ್ತಿದ್ದರೆ ಗ್ಯಾಸ್ ಟ್ರಬಲ್ ನಿವಾರಣೆಯಾಗುತ್ತದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter