Published On: Tue, Feb 13th, 2018

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ: ಅಡ್ಡೂರಿನ ಬಾಲಕನಿಗೆ ಕಂಚಿನ ಪದಕ

ಶಶಶಶಶಶಢ

ಮಂಗಳೂರು: ಮುಂಬೈನಲ್ಲಿ ಇತ್ತೀಚೆಗೆ ನಡೆದ “ಡಬ್ಲ್ಯುಎಫ್ ಎಸ್ ಕೆಒ ಓಪನ್ ಏಷಿಯನ್” ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ  ನಗರದ ಗುರುಪುರ ವ್ಯಾಪ್ತಿಯ  ಅಡ್ಡೂರು ಗ್ರಾಮದ ಬಾಲಕ ಶೀಶ್ ಅಬ್ದುಲ್ ಖಾದರ್ ಭಾಗವಹಿಸಿ ಎರಡು ಕಂಚಿನ ಪದಕ ಗಳಿಸಿ ಜೆಲ್ಲೆ ಹಾಗೂ ಗ್ರಾಮಕ್ಕೆ ಕೀರ್ತಿಯ ಪತಾಕೆ ಹಾರಿಸಿದ್ದಾನೆ.

ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ ಹಾಗೂ ಝೀನತ್ ಅವರ ಪುತ್ರನಾಗಿರುವ ಶೀಶ್, ಕಾರಟೆ ಸ್ಪರ್ಧೆಯ ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ತನ್ನದಾಗಿಸಿದ್ದಾನೆ.

2142

ಈತ ಅಲ್ ಪುರ್ ಖಾನ್ ಆಂಗ್ಲ ಮಾಧ್ಯಯ ಶಾಲೆಯ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಪೂರೈಸುತ್ತಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಹಾಪೂರ: ಇನ್ನೂ ಶೀಶ್ ಕರಾಟೆಯಲ್ಲಿ ತೃತೀಯ ಸ್ಥಾನ ಪಡೆದ ಸುದ್ದಿ ಕೇಳಿ ಗ್ರಾಮಸ್ಥರು ಸಾಮಾಜಿಕ ಜಾಲತಾಣವಾದ ವಾಟ್ಸಾಪ್, ಫೇಸ್ ಬುಕ್ ನಲ್ಲಿ  ಶುಭಕೋರಿ ಪ್ರಶಂಸಿದ್ದಾರೆ. ಅಲ್ಲದೆ, ಈ ಬಾಲಕ ಮುಂದೆಯು ಕರಾಟೆಯಲ್ಲಿ ಉನ್ನತ ಮಟ್ಟಕ್ಕೇರಿ ತನ್ನ ಗ್ರಾಮ ಹಾಗೂ ದೇಶಕ್ಕೆ ಕೀರ್ತಿತರಲಿ, ಯುವ ಪೀಳಿಗೆಗೆ ನಾಂದಿ ಹಾಡಲಿ ಎಂದು ಆಶಿಸಿದ್ದಾರೆ.

542

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter