Published On: Tue, Feb 13th, 2018

ಕಂಠಪಾಠ ಸ್ಪರ್ಧೆಯಲ್ಲಿ ಮೈತ್ರೇಯಿ ಗುರುಕುಲಮ್‍ನ ವಿದ್ಯಾರ್ಥಿನಿ ಗೌರೀ ಅವರು ಪ್ರಥಮ ಸ್ಥಾನ

ರಾಷ್ಟ್ರೀಯ ಸಂಸ್ಕೃತ ಸಂಸ್ಥಾನಂ ವತಿಯಿಂದ ತ್ರಿಪುರಾ ರಾಜ್ಯದ ಅಗರ್ತಲಾದಲ್ಲಿ ನಡೆದ ಅಷ್ಟಾಧ್ಯಾಯಿ ಕಂಠಪಾಠ ಸ್ಪರ್ಧೆಯಲ್ಲಿ ವಿಟ್ಲ ಸನಿಹದ ಮೂರ್ಕಜೆ ಮೈತ್ರೇಯಿ ಗುರುಕುಲಮ್‍ನ ವಿದ್ಯಾರ್ಥಿನಿ ಗೌರೀ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.

gowri

gowri_prashsti
ಅಗರ್ತಲಾದ ಏಕಲವ್ಯ ಪರಿಸರದಲ್ಲಿನ ಶಹೀದ್ ಭಗತ್‍ಸಿಂಗ್ ಯೂತ್ ಹಾಸ್ಟೆಲ್‍ನಲ್ಲಿ ಜ. 18 ರಿಂದ 22 ರವರೆಗೆ ನಡೆದ ಸಂಸ್ಕೃತ ಸಂಬಂಧಿ ವಿವಿಧ ಸ್ಪರ್ಧೆಗಳು ನಡೆದವು. ವಿವಿಧ ರಾಜ್ಯದಿಂದ ಬಂದ 17 ಮಂದಿ ಸ್ಪರ್ಧಿಗಳ ಪೈಕಿ ಗೌರೀ ಅವರು ಪಾಣಿನಿಯ ವ್ಯಾಕರಣ ಶಾಸ್ತ್ರವಾಗಿರುವ ಅಷ್ಟಾಧ್ಯಾಯಿಯ 8 ಅಧ್ಯಾಯದಲ್ಲಿ ತಲಾ 4 ಪಾದಗಳಂತೆ ಇರುವ 3,964 ಸೂತ್ರಗಳನ್ನು 3 ಗಂಟೆಗಳಲ್ಲಿ ಕಂಠಪಾಠ ಒಪ್ಪಿಸಿ ಪ್ರಶಸ್ತಿ ಫಲಕ, ಸ್ವರ್ಣಪದಕ, ಪ್ರಮಾಣ ಪತ್ರ ಹಾಗು ನಗದು ಪುರಸ್ಕಾರವನ್ನು ಪಡೆದರು. ಗೌರೀ ಅವರು ಕಾಸರಗೋಡು ಪೈವಳಿಕೆ ತಲೆಂಗಳ ನಾರಾಯಣ ಭಟ್, ಪ್ರಭಾವತಿ ಎಸ್ ಅವರ ಪುತ್ರಿಯಾಗಿದ್ದು ಕಳೆದ 12 ವರ್ಷಗಳಿಂದ ಗುರುಕುಲದಲ್ಲಿದ್ದು ಅಧ್ಯಯನ ಮಾಡುತ್ತಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter