Published On: Tue, Feb 13th, 2018

ಮೈತ್ರೇಯೀ ಗುರುಕುಲದ ವೆಬ್‍ಸೈಟ್ ಲೋಕಾರ್ಪಣೆ

ನಮ್ಮ ಸಂಸ್ಕೃತಿಯಲ್ಲಿ ಆಹಾರ, ಔಷಧಿ, ವಿದ್ಯೆ ಇವುಗಳು ಮಾರಾಟಕ್ಕಿಲ್ಲ. ಆದರೆ ಅವೇ ಇಂದು ಹಣಗಳಿಕೆಯ ಸಾಧನವಾಗಿವೆ ಎಂದು ಕುಟುಂಬ ಪ್ರಬೋಧನದ ಅಖಿಲ ಭಾರತೀಯ ಸಂಯೋಜಕರು ಹಾಗೂ ಅಜೇಯ ವಿಶ್ವಸ್ತ ಮಂಡಳಿಯ ಸದಸ್ಯರಾದ ಶ್ರೀ ಸುಬ್ರಹ್ಮಣ್ಯ ಭಟ್ ಕಜಂಪಾಡಿ ಅವರು ತಿಳಿಸಿದರು.

SHV_8771 ಅವರು 11 ರಂದು ಭಾನುವಾರ  ಮೈತ್ರೇಯೀ ಗುರುಕುಲದ ವೆಬ್‍ಸೈಟ್ ಉದ್ಘಾಟನೆಯ ಸಂದರ್ಭ ಮಾತನಾಡಿ ಈ ವೆಬ್‍ಸೈಟ್ ಪ್ರಚಾರಕ್ಕೆ ಅಲ್ಲ, ಗುರುಕುಲ ಶಿಕ್ಷಣದ ಬಗ್ಗೆ ತಿಳಿದುಕೊಳ್ಳುವವರಿಗೆ ಸಹಾಯಕವಾಗಬೇಕೆಂದು ಲೋಕಾರ್ಪಣೆಗೊಂಡಿದೆ ಎಂದರು. ಗುರುಕುಲದ ದೀಪದಿಂದ ಮತ್ತೊಂದು ದೀಪ ಬೆಳಗುವಂತಾಗಬೇಕು, ಅನೇಕ ಗುರುಕುಲಗಳಾಗಬೇಕೆಂದು ತಮ್ಮ ಆಶಯ ವ್ಯಕ್ತಪಡಿಸಿದರು.SHV_8772

ವೆಬ್‍ಸೈಟ್ ಸಿದ್ಧಪಡಿಸಿದ ಮೈಸೂರಿನ ಶ್ರೀ ಕಿರಣ್ ಅವರನ್ನು ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸೀತಾರಾಮ ಕೆದಿಲಾಯ ಅವರು ಶಾಲು ಹೊದಿಸಿ ಸತ್ಕರಿಸಿದರು. ಆಚಾರ್ಯ ಉಮೇಶ್ ಅವರು ವೆಬ್‍ಸೈಟಿನ ಮಾಹಿತಿಯನ್ನು ನೀಡಿ ಗೂಗಲ್ ನಲ್ಲಿ www.maitreyeegurukulam.com ಗೆ ಭೇಟಿ ನೀಡಬಹುದೆಂದರು. ಗುರುಕುಲದ ಪಾಲಕರು ಹಾಗೂ ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter