Published On: Tue, Feb 13th, 2018

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಸಾಮರಸ್ಯ ಭೋಜನ – ಶ್ರೀ ಗುರೂಜಿ ಜನ್ಮದಿನಾಚರಣೆ

DSC_0989

ಕಲ್ಲಡ್ಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘ ಚಾಲಕ ಶ್ರೀಗುರೂಜಿ ಮಾಧವ ಸದಾಶಿವ ರಾವ್ ಗೋಳ್ವಲ್ಕರ್‍ರವರ ಜನ್ಮ ದಿನಾಚರಣೆ ಕಾರ್ಯಕ್ರಮ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿ  ಸೋಮವಾರದಂದು  ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಯಶಸ್ವಿನಿ, ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತರ ಪ್ರಾಧ್ಯಾಪಕರು  ಮಾತನಾಡಿ ,ಶ್ರೀರಾಮ ವಿದ್ಯಾಕೇಂದ್ರ ಒಂದು ಪವಿತ್ರವಾದುದು. ಇಲ್ಲಿನ ಶಿಕ್ಷಣ ಕಂಡು ನನಗೆ ತುಂಬಾ ಸಂತೋಷವಾಯಿತು. ಈ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಮಕ್ಕಳಾಗಿಯೇ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ಶಿಸ್ತು, ವಿದ್ಯಾಕೇಂದ್ರದ ಪರಿಸರ ಕಂಡು ನಾನು ಆಶ್ಚರ್ಯಚಕಿತನಾದೆ ಎಂದರು. ನಾನು ಇಲ್ಲಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲು ತಯಾರು ಮಾಡಿದ್ದೆ.DSC_0015

ಆದರೆ ಇಲ್ಲಿನ ಶಿಕ್ಷಣ ಪದ್ದತಿ, ಇಲ್ಲಿನ ವಿದ್ಯಾರ್ಥಿಗಳನ್ನು ಕಂಡು ಅದೆಲ್ಲ ಇಲ್ಲಿನ ಈ ಸಂಸ್ಥೆಗೆ ಅಗತ್ಯವಿಲ್ಲ. ಇದು ಎಲ್ಲವೂ ಇರುವ ಶಿಕ್ಷಣ ಸಂಸ್ಥೆ ಎಂದು ಹೇಳಿದರು. ನಾನೊಬ್ಬಳು ಬುಡಕಟ್ಟು ಆದಿವಾಸಿ ಸಮುದಾಯಕ್ಕೆ ಸೇರಿದವಳಾಗಿದ್ದು ಸರ್ಕಾರ ಸೌಲಭ್ಯ ಪಡೆದು ಸಾಧನೆ ಮಾಡಿದೆ. ಇಲ್ಲಿನ ಮಕ್ಕಳಲ್ಲಿ ಯಾವುದೇ ಬೇಧವಿಲ್ಲದೆ ಎಲ್ಲರೂ ಭಾರತ ಮಾತೆಯ ಮಕ್ಕಳಾಗಿ ನೋಡುತ್ತಿರುವುದು ವಿಶೇಷವಾಗಿದೆ. ಈ ಸಂಸ್ಥೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ, ಭೋಜನ, ಸಮವಸ್ತ್ರ ಕೊಡುತ್ತಿರುವುದು ಶ್ಲಾಘನೀಯವಾಗಿದೆ. ಇದು ಯಾವುದೇ ಯುನಿವರ್ಸಿಟಿಗಳಿಗೆ ಕಡಿಮೆ ಇಲ್ಲ ಇದು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಶಿಶುಮಂದಿರ ಮತ್ತು ಪೂರ್ವಗುರುಕುಲದ ಮಕ್ಕಳುವಿವಿಧ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ||ಪ್ರಭಾಕರ ಭಟ್ ಕಲ್ಲಡ್ಕ, ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ,ಸಂಚಾಲಕ ವಸಂತಮಾಧವ ಉಪಸ್ಥಿತರಿದ್ದರು.

ಪದವಿ ಪೂರ್ವ ವಿಭಾಗದ ಶೈಲಿನಿ ಮಾತಾಜಿಯವರು ಶ್ರೀ ಗುರೂಜಿಯವರ ಜೀವನ ಚರಿತ್ರೆಯನ್ನು ತಿಳಿಸಿದರು.
ನಂತರಸಾಮರಸ್ಯಭೋಜನ ನೆರವೇರಿತು. ವಿದ್ಯಾಕೇಂದ್ರದ ಸುತ್ತಮುತ್ತಲಿನ ಐನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಮನೆಗಳಿಂದ ಅನ್ನ, ಕಡ್ಲೆ ಪಲ್ಯ, ಪಾಯಸ, ಉಪ್ಪಿನಕಾಯಿ,ಕೊಬ್ಬರಿ ಮಿಠಾಯಿಗಳನ್ನು ಮಾತೆಯರು ತಯಾರಿಸಿ ತಂದಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೆ ಬಡಿಸಿ ಸಾಮೂಹಿಕ ಸಹಭೋಜನದಲ್ಲಿ ಪಾಲ್ಗೊಂಡರು.ಕಾರ್ಯಕ್ರಮದಲ್ಲಿ ಮಾತೃಭಾರತಿ ಕಾರ್ಯದರ್ಶಿ ಭಾರತಿ ರಾವ್ ನಿರೂಪಿಸಿ, ಮಮತಾ ಸ್ವಾಗತಿಸಿ, ಪಣಿಪ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter