Published On: Tue, Feb 13th, 2018

ಮಂಗಳೂರು: ಫೆ.20ರಂದು ಮಾತಾ ಅಮೃತಾನಂದಮಯಿ ದೇವಿ ಆಗಮನ

matha

ಮಂಗಳೂರು: `ಅಮ್ಮ’ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ  ಫೆ. 20ರಂದು  ನಗರದ ಬೋಳೂರು ಅಮೃತ ವಿದ್ಯಾಲಯಕ್ಕೆ ಆಗಮಿಸಲಿದ್ದಾರೆ.

ಅಮ್ಮನವರು 2008 ಫೆಬ್ರವರಿ 18ರಂದು ಪ್ರಾಣ ಪ್ರತಿಷ್ಠೆಗೈದಿರುವ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದ ದಶಮಾನೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆ ಪ್ರಯುಕ್ತ ಭಕ್ತರ ಸಭೆಯು ಅಮೃತ ವಿದ್ಯಾಲಯದಲ್ಲಿ ಜರುಗಲಿದೆ.

ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ರಾಜ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದಾರೆ. ಮಠಾಧಿಪತಿ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರು ಆಶೀರ್ವಚನವಿತ್ತು ಇದೇ ಬರುವ ಫೆಬ್ರವರಿ 20 ಮತ್ತು 21ರಂದು ಜರುಗುವ ಶ್ರೀ ಬ್ರಹ್ಮಸ್ಥಾನ ಮಹೋತ್ಸವ ಮತ್ತು ಅಮೃತಸಂಗಮ 2018ರ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳುವ ಬಗ್ಗೆ ಮಾರ್ಗದರ್ಶನವಿತ್ತರು.

ದೇಶವಿದೇಶಗಳ ಸಹಸ್ರಾರು ಭಕ್ತರು ಅಮ್ಮನವರ ದರ್ಶನವನ್ನು ಪಡೆಯಲು ಮಂಗಳೂರಿಗೆ ಆಗಮಿಸಲಿದ್ದಾರೆ..ಸಾರ್ವಜನಿಕರಿಗೆ ಅಮ್ಮನವರ ದರ್ಶನ ಪಡೆಯಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆ ಚರ್ಚಿಸಲಾಗಿದೆ.

ಗೌರವಾಧ್ಯಕ್ಷರುಗಳಾದ ಡಾ.ಜೀವರಾಜ್ ಸೊರಕೆ, ಡಾ.ವೈ.ಸನತ್ ಹೆಗ್ಡೆ, ವಾಮನ್ ಕಾಮತ್, ಶ್ರುತಿ ಸನತ್ ಹೆಗ್ಡೆ ವಿವಿಧ ರೀತಿಯ ಕಾರ್ಯಯೋಜನೆ, ಸಮಾಜಮುಖಿ ಸೇವಾ ಕಾರ್ಯಗಳ ಅನುಷ್ಠಾನಕ್ಕೆ ಸರ್ವ ಸಿದ್ಧತೆಗಳ ಬಗ್ಗೆ ವಿವರ ನೀಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter