Published On: Tue, Feb 13th, 2018

ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ನಾವು ಬದ್ಧ: ಸತೀಶ್ ಶೆಟ್ಟಿ

ಕೈಕಂಬ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪೊಳಲಿ ಘಟಕದ ಪೂರ್ವಭಾವಿ ಸಭೆ ಇಲ್ಲಿನ ಕೈಕಂಬದ ಮಂಜುಶ್ರೀ ಕಾಂಪ್ಲೆಕ್ಷ್ ನ ಶ್ರೀ ರಾಮ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.13-2

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ, ಯಕ್ಷಗಾನ ತುಳು ನಾಡಿನ ಭವ್ಯ ಸಂಸ್ಕೃತಿಯಾಗಿದ್ದು, ಇದರ ಕಲಾವಿದರ ಶ್ರೇಯೋಭಿವೃದ್ಧಿಗೆ ಈ ಫೌಂಡೇಶನ್ ಸ್ಥಾಪಿಸಲಾಗಿದೆ. ಎರಡುವರೆ ವರ್ಷದಲ್ಲಿ  75 ಆಸಕ್ತ ಯಕ್ಷಗಾನ ಕಲಾವಿದರಿಗೆ ಪ್ರತಿಯೊಬ್ಬ ಕಲಾವಿದರಿಗೆ  50ಸಾವಿರ ರೂಪಾಯಿಯಂತೆ  ಧನ ಸಹಾಯ ಹಾಗೂ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿ ಇನ್ನಿತರ ಸುಮಾರು ಒಂದುವರೆ ಕೋಟಿ  ರೂಪಾಯಿಯನ್ನು   ಕಲಾವಿದರಿಗೆ ಸಹಾಯಹಸ್ತ ನೀಡಲಾಗಿದೆ ಎಂದು ವಿವರಿಸಿದರು.13-008

ಈ ವೇಳೆ ಪೊಳಲಿ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

13-8

13-1

13-6

13-02

13-5ಸಭೆಯಲ್ಲಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಶ್ರೀರಾಮ್ ಹೊಟೇಲ್ ಮಾಲಕ ಹರಿರಾವ್ ಕೈಕಂಬ, ಕೈಕಂಬ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಅಧ್ಯಕ್ಷ ವಿನೋದ್‍ಮಾಡ , ಶ್ರೀಧರ್ ಭಟ್ , ಪೂಜಾ ಮೆಡಿಕಲ್ಸ್ ಮಾಲಕ ಉಮೇಶ್ ಭಂಡಾರಿ , ಉಧ್ಯಮಿಗಳಾದ ಹರೀಶ್ ಶೆಟ್ಟಿ,ಚಂದ್ರಹಾಶ ಶೆಟ್ಟಿ ನಾರಳ ಪೊಳಲಿ ವೆಂಕಟೇಶ್ ನಾವಡ, ರಾಜೀವ ಕೈಕಂಬ, ನಾಗೇಶ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು. ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter