Published On: Tue, Feb 13th, 2018

ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ: ದೂರು ದಾಖಲು

sand-mafia-attack (1)

ಧಾರವಾಡ: ಕರ್ತವ್ಯ ನಿರತ ಪೊಲೀಸ್ ಪೇದೆ ಮಾಲತೇಶ ಪಾಟೀಲ ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಿರಣ ಪ್ಯಾಟಿಮಠ ಹಾಗೂ ಇನ್ನಿತರರು ರೈಲ್ವೇ ಸ್ಟೇಶನ್ ಮಾರ್ಗದ ರಸ್ತೆಯಲ್ಲಿ ಗದ್ದಲ ಹಾಕುತ್ತಿದ್ದರು. ಇದನ್ನು ನೋಡಿದ ಪೊಲೀಸ್ ಪೇದೆ ಮಾಲತೇಶ ಪಾಟೀಲ, ಅವರ ಬಳಿ ತೆರಳಿ ವಿಚಾರಣೆ ಮಾಡಿ, ಗದ್ದಲ ಮಾಡದಂತೆ ತಾಕೀತು ಮಾಡಿದ್ದಾರೆ.

ಇದರಿಂದ ರೊಚ್ಚಿಗೆದ್ದ ಕಿರಣ ಹಾಗೂ ಯುವಕರ ತಂಡ ಪೇದೆ ಮೇಲೆಯೇ ತಿರುಗಿ ಬಿದ್ದು ಹಲ್ಲೆ ಮಾಡಿದ್ದಾರೆ. ಅಲ್ಲದೇ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಪೊಲೀಸ್ ಪೇದೆ ಮಾಲತೇಶ ಪಾಟೀಲ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಆದರೆ, ಕೆಲ ಪ್ರಭಾವಿಗಳು ಪ್ರಕರಣ ದಾಖಲಿಸದಂತೆ ಹಾಗೂ ರಾಜೀ ಸಂಧಾನದಲ್ಲಿ ಸುಖ್ಯಾಂತ ಕಾಣಿಸಲು ಮುಂದಾಗಿದ್ದರು. ಈ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಹತ್ತಾರು ನಾಟಕೀಯ ಬೆಳವಣಿಗೆ ನಡೆದಿದ್ದವು. ಕೊನೆಗೂ ಪೇದೆ ಮಾಲತೇಶ ಅವರು ಕಿರಣ ಸಂಗಡಿಗರ ವಿರುದ್ದ ದೂರು ದಾಖಲಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter