Published On: Sat, Feb 10th, 2018

ಜಮ್ಮು: ಸೇನಾ ಕ್ಯಾಂಪ್ ಮೇಲೆ ಉಗ್ರರರ ದಾಳಿ; ಇಬ್ಬರು ಯೋಧರ ಹುತಾತ್ಮರು, ಮೂವರು ಗಂಭೀರ

Sfsafdsdf

ಜಮ್ಮು: ನಗರದ ಹೊರವಲಯದಲ್ಲಿರುವ ಚೆನ್ನಿ ಪ್ರಾಂತ್ಯದಲ್ಲಿರುವ ಸುಂಜವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ  ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ಸೇನಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಇಂದು ಮುಂಜಾನೆ 4.55ರ ಸುಮಾರಿನಲ್ಲಿ ಉಗ್ರರು ಕ್ಯಾಂಪ್ ನೊಳಗೆ ನುಸುಳಿದ್ದು, ಅನುಮಾನಗೊಂಡ ಸೈನಿಕರು ಶೋಧ ನಡೆಸಿದ್ದಾರೆ. ಈ ವೇಳೆ ಉಗ್ರರು ದಾಳಿ ನಡೆಸಿದ್ದು, ಕ್ಯಾಂಪ್ ಅವರಣದಲ್ಲಿದ್ದ ಬಂಕರ್ ಗೆ ಬೆಂಕಿ ಹಾಕಿದ್ದು, ಕ್ಯಾಂಪ್ ನ ಆವರಣದಲ್ಲಿರುವ ಸೇನಾ ಕ್ವಾರ್ಟರ್ಸ್ ನೊಳಗೆ ನುಸುಳಿರುವ ಉಗ್ರರು ಅವಿತುಕೊಂಡಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದು, ಯೋಧನ ಪುತ್ರಿ ಸೇರಿ ಮೂವರಿಗೆ ಗಾಯವಾಗಿದೆ. ಅವರನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೂಡಲೇ ಸೇನೆ ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಿಸಿದ್ದು, ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದೆ. ಅಂತೆಯೇ ಕಾರ್ಯಾಚರಣೆಗೆ ಸೇನೆ ಒಂದು ಹೆಲಿಕಾಪ್ಟರ್ ಅನ್ನೂ ಕೂಡ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

 

 

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter