Published On: Thu, Feb 8th, 2018

ಸೀತಾಲಕ್ಷ್ಮೀ ಕರ್ಕಿಕೋಡಿಗೆ ಡಬಲ್ ಪಿಎಚ್‍ಡಿ

ಮಂಗಳೂರು: ಮಂಗಳೂರು ವಿವಿ ಕನ್ನಡ ವಿಭಾಗ ಮುಖ್ಯಸ್ಥ ಖ್ಯಾತ ವಿದ್ವಾಂಸ ಡಾ.ಜಿ.ಎನ್ .ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಸೀತಾಲಕ್ಷ್ಮೀ ಕರ್ಕಿಕೋಡಿ ನಡೆಸಿದ “ಕನ್ನಡ ಪತ್ರಿಕೋದ್ಯಮದಲ್ಲಿ ಸ್ತ್ರೀಪರತೆ” ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮುಂಬಯಿ ವಿವಿ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.ಸೀತಾಲಕ್ಷ್ಮೀ ಅವರಿಗೆ ಎರಡನೇ ಸಂದ ಡಾಕ್ಟರೇಟ್ ಪದವಿ ಇದಾಗಿದೆ.

001

2004 ರಲ್ಲಿ “ಮಾಸ್ತಿಅವರ ಕಥೆಗಳಲ್ಲಿಸ್ತ್ರೀ ಪ್ರತಿನಿಧೀಕರಣ” ಬಗ್ಗೆ ಸಂಶೋಧಕ ಡಾ.ಮೋಹನ್‍ಕುಂಟಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಹಂಪಿ ವಿಶ್ವ ವಿದ್ಯಾಲಯಕ್ಕೆ ಮಹಾಪ್ರಬಂಧ ಸಲ್ಲಿಸಿ ಪಿಎಚ್‍ಡಿ ಪದವಿ ಪಡೆದಿದ್ದರು.
ರಂಗ ಕರ್ಮಿ ಸದಾನಂದ ಸುವರ್ಣ ಅವರ ಬದುಕು ಮತ್ತು ಸಾಧನೆ ಕುರಿತು ಡಾ.ಜಿ.ಎನ್‍ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಅಧ್ಯಾಯನ ಮಾಡುಇ ರಚಿಸಿದ ಸಂಪ್ರಬಂಧಕ್ಕೆ ಮುಂಬಯಿ ವಿ ವಿ ಯಿಂದ ಎಂಫಿಲ್ ಪದವಿ ಪಡೆದಿದ್ದಾರೆ.

Kannada Dept. Seetalaxmi Karkikodi 6

ವಿಜಯ ಕರ್ನಾಟಕ ಮಂಗಳೂರು ಆವೃತಿಯ ಹಿರಿಯ ಉಪ ಸಂಪಾದಕಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ನಿರಂತರ ಓದು , ಬರಹ ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಬನ್ನಂಜೆ ರಾಮಾಚಾರ್ಯ ಪ್ರಶಸ್ತಿ ಪಡೆದಿದ್ದಾರೆ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದಿರುವ ಅವರು ಹಿರಿಯ ಸಾಹಿತಿ ವಿ.ಗ. ನಾಯಕ್ ಮತ್ತು ಶ್ಯಾಮಲಾ ಕರ್ಕಿಕೋಡಿ ಅವರ ಪುತ್ರಿ.

Kannada Dept. Seetalaxmi Karkikodi B3

* ಸದಾನಂದ ಸುವರ್ಣರೊಂದಿಗೆ ಡಾ. ಸೀತಾಲಕ್ಷ್ಮೀ.

0003Kannada Dept. Seetalaxmi Karkikodi 10

1

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter