Published On: Fri, Feb 2nd, 2018

ಫಿಡೆಲ್ ಕ್ಯಾಸ್ಟ್ರೋ ಹಿರಿಯ ಪುತ್ರ ಆತ್ಮಹತ್ಯೆಗೆ ಶರಣು

000011

ಹವಾನ: ದ್ವೀಪರಾಷ್ಟ್ರ ಕ್ಯೂಬಾದ ದಿವಂಗದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರ ಹಿರಿಯ ಪುತ್ರ ಡಯಾಝ್-ಬಲರ್ಟ್  ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

68 ವರ್ಷದ ಡಯಾಝ್-ಬಲರ್ಟ್ ಅವರು  ತೀವ್ರ ಖಿನ್ನತೆಯಿಂದ ಹಲವು ತಿಂಗಳ ಕಾಲ ವೈದ್ಯರ ತಂಡದಿಂದ ಚಿಕಿತ್ಸೆಗೆ ಒಳಗಾಗಿದ್ದು,ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕ್ಯೂಬಾದ ಸರಕಾರಿ ಮಾಧ್ಯಮ ಸಂಸ್ಥೆ ಕ್ಯೂಬಾಡಿಬೇಟ್ ವೆಬ್ ಸೈಟ್ ವರದಿ ಮಾಡಿದೆ.

 ದ್ವೀಪರಾಷ್ಟ್ರದಲ್ಲಿ ಫಿಡೆಲಿಟೋ ಮತ್ತು ಕ್ಯಾಸ್ಟ್ರೋ ಜ್ಯೂನಿಯರ್ ಎಂದೇ ಚಿರಪರಿಚಿತರಾಗಿದ್ದ ಅವರು

ಹಿಂದಿನ ಸೋವಿಯತ್ ಯೂನಿಯನ್ ನಲ್ಲಿ ಶಿಕ್ಷಣ ಪಡೆದಿದ್ದರಲ್ಲದೆ ಕ್ಯೂಬಾದ ಕೌನ್ಸಿಲ್ ಆಫ್ ಸ್ಟೇಟ್ ಇದರ ವೈಜ್ಞಾನಿಕ ಸಲಹೆಗಾರ ಹಾಗೂ ಕ್ಯೂಬನ್ ಅಕಾಡೆಮಿ ಆಫ್ ಸಯನ್ಸಸ್ ಇದರ ಉಪಾಧ್ಯಕ್ಷರಾಗಿದ್ದರು.

ಡಯಾಝ್-ಬಲರ್ಟ್  ಅವರು ಗಂಭೀರ ಹತಾಶೆ ಮತ್ತು ಖಿನ್ನತೆಯಿಂದ ನರಳುತ್ತಿದ್ದರು. ಅವರಿಗೆ ಆಸ್ಪತ್ರೆಯಲ್ಲಿ ಶುಶ್ರೂಷೆ ಮಾಡಿ ನಂತರ ಹೊರ ರೋಗಿಯಾಗಿ ಚಿಕಿತ್ಸೆ ಮುಂದುವರಿಸಲಾಗಿತ್ತು ಎಂದು ತಿಳಿದು ಬಂದಿದೆ.

ವಿಜ್ಞಾನಿಯಾಗಿದ್ದ ಡಯಾಜ್-ಬಲಾರ್ಟ್‍ರ ಅವರು ಈ ಹಿಂದಿನ ಸೋವಿಯತ್ ಒಕ್ಕೂಟದಲ್ಲಿ ತರಬೇತಿ ಪಡೆದು, ಕಮ್ಯೂನಿಸ್ಟ್ ಆಳ್ವಿಕೆಯ ಕ್ಯೂಬಾದಲ್ಲಿ ಅಣುಶಕ್ತಿ ಕಾರ್ಯಕ್ರಮಗಳ ಅಭಿವೃದ್ಧಿಗೆ ನೆರವಾಗಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter