Published On: Fri, Feb 2nd, 2018

ತೇಲುವ ಕಂಬದ ಲೇಪಾಕ್ಷಿ ದೇವಾಲಯ

ಭಾರತದೇಶವು ಕಲೆ, ಸಂಸ್ಕøತಿ, ಇತಿಹಾಸ, ರಾಜಮನೆತನಗಳ ಮತ್ತು ವಾಸ್ತುಶಿಲ್ಪ ಶೈಲಿಯತವರೂರುಎನ್ನಬಹುದು. ಅದೇರೀತಿದೇಶದಇತಿಹಾಸ ಹಾಗೂ ವಾಸ್ತುಶಿಲ್ಪ ಕಲೆಯು ಹಲವಾರು ವಿಸ್ಮಯಗಳು, ಕುತೂಹಲಗಳು ಹಾಗೂ ನಿಗೂಢಗಳನ್ನೊಳಗೊಂಡ ಹಲವಾರು ವಿಚಾರಗಳನ್ನು ಇನ್ನೂ ತನ್ನೊಳಗೆ ಗೌಪ್ಯವಾಗಿ ಹುದುಗಿಕೊಂಡಿದೆಎನ್ನಬಹುದು. ಈ ನಿಗೂಢಗಳನ್ನು ಇಂದಿಗೂ ಲಭ್ಯವಿರುವಯಾವುದೇಆಧುನಿಕ ವಿಜ್ಞಾನವಾಗಲೀ, ಅನ್ವೇಷಣೆಗಳಾಗಲೀ ಅಥವಾ ವಿಜ್ಞಾನಿಗಳಿಂದಾಗಲೀ ಬೇಧಿಸಲು ಸಾಧ್ಯವಾಗಿಲ್ಲ ಹಾಗೂ ಮುಂದೆಯೂ ಭೇದಿಸಲು ಸಾಧ್ಯವಾಗಲಾರದುಎಂದೇ ಹೇಳಬಹುದು. ಹಿಂದಿನ ಕಾಲದ ವಾಸ್ತುಶಿಲ್ಪವೇ ಶೈಲಿಯೇತೀರಾ ವೈಶಿಷ್ಟ್ಯಪೂರ್ಣವಾಗಿದ್ದು,ಯಾವಆಧುನಿಕತಂತ್ರಜ್ಞಾನದ ಊಹೆಗೂ ನಿಲುಕದಂತಿದೆ.ಇಂತಹ ವಿಸ್ಮಯವನ್ನುತನ್ನ ಒಡಲೊಳಗೆ ಹುದುಗಿಕೊಂಡಿರುವ ದೇವಾಲಯವು ಆಂದ್ರಪ್ರದೇಶರಾಜ್ಯದ ಅನಂತಪುರ ಜಿಲ್ಲೆಯಲ್ಲಿದ್ದು, ಅದುವೇ ಲೇಪಾಕ್ಷಿ ವೀರಭದ್ರದೇವಾಲಯ.IMG_9639

ಈ ದೇವಾಲಯವುಆಂದ್ರ ಪ್ರದೇಶದಅನಂತಪುರಜಿಲ್ಲೆಯ ಹಿಂದೂಪುರದಿಂದ 15 ಕಿ.ಮೀ ಮತ್ತು ಬೆಂಗಳೂರು ನಗರದಿಂದ ಸುಮಾರು 120 ಕಿ.ಮೀ ದೂರದಲ್ಲಿದೆ. ಈ ದೇವಾಲಯವನ್ನುವಿಜಯನಗರರಾಜರ ಆಳ್ವಿಕೆಯ ಕಾಲದಲ್ಲಿಇಲ್ಲಿನವಾಸ್ತುಶಿಲ್ಪ ಶೈಲಿಯಲ್ಲಿ ಈ ದೇವಾಲಯವನ್ನು‘ವೀರಣ್ಣ’ ಹಾಗೂ ‘ವಿರೂಪಣ್ಣ’ ಎಂಬ ಇಬ್ಬರು ಸಹೋದರರುಈ ವೀರಭದ್ರದೇವರದೇವಾಲಯವನ್ನು ನಿರ್ಮಿಸಿದರು.ಈ ದೇವಾಲಯದಲ್ಲಿ‘ಕಲ್ಲಿನ ಸರಪಳಿ’, ‘ವಾಸ್ತು ಪುರುಷ ಗಾಳಿಯಲ್ಲಿ ತೇಲುವ ಕಂಬ’, ‘ದುರ್ಗಾಪಾದ’, ‘ವಿರುಪಾಕ್ಷಣ್ಣನ ಕಣ್ಣುಗಳು’ ಹಾಗೂ ‘ಲೇಪಾಕ್ಷಿ ಸೀರೆ’ಯ ವಿನ್ಯಾಸಗಳೇ ಇಲ್ಲಿನ ವಿಶೇಷತೆಗಳು.ಈ ದೇವಾಲಯದಛಾವಣಿಯನ್ನುಆಗಿನ ಕಾಲದಲ್ಲಿಯೇನೈಸರ್ಗಿಕವಾದ ವರ್ಣದ್ರವ್ಯದಿಂದ ಲೇಪಿಸಿರುವುದು ಇಲ್ಲಿನಇನ್ನೊಂದು ವೈಶಿಷ್ಟ್ಯಗಳಲ್ಲೊಂದು. ಈ ದೇವಾಲಯವು ಸಾಂಸ್ಕøತಿಕವಾಗಿ ಹಾಗೂ ಪುರಾತಾತ್ವಿಕವಾಗಿಅತ್ಯಂತಗಮನಾರ್ಹವಾಗಿದ್ದು, ಇಲ್ಲಿ ಶಿವ, ವಿಷ್ಣು ಮತ್ತು ವೀರಭದ್ರ ದೇವಾಲಯಗಳಿರುವುದು ಇನ್ನೊಂದು ವಿಶೇಷ.ಷೀ ದೇವಾಲಯಗಳನ್ನು ಕ್ರಿ.ಶ 1336ರಿಂದಕ್ರಿ.ಶ 1646ರಲ್ಲಿ ಅಂದರೆ 15ನೇ ಶತಮಾನದ ಮಧ್ಯಭಾಗದಲ್ಲಿ ವಿಜಯನಗರಅರಸರಕಾಲದಲ್ಲಿ ನಿರ್ಮಿಸಲಾಯಿತೆಂದುಇತಿಹಾಸದಿಂದ ತಿಳಿದುಬರುತ್ತದೆ. ಈ ದೇವಾಲಯದ ಸಮೀಪದಲ್ಲೇಅಮೃತ ಶಿಲೆಯಿಂದ ನಿರ್ಮಿಸಲಾದ ಬೃಹತ್‍ಗಾತ್ರದನಂದಿಯವಿಗ್ರಹವಿದೆ.img_1200s

ಈ ದೇವಾಲಯದಲ್ಲೊಂದುವೈಚಿತ್ರ್ಯವಿದ್ದು, ಅದುವೇಈ ದೇವಾಲಯದ ಕಂಬಗಳು ಗುರುತ್ವಾಕರ್ಷಣ ಬಲದ ಸಹಕಾರವಿಲ್ಲದೇಗಾಳಿಯಲ್ಲಿ ತೇಲಾಡುತ್ತಿವೆ. ಈ ದೇವಾಲಯವನ್ನು ಪರ್ವತದ ಮೇಲ್ಭಾಗದಲ್ಲಿಕಟ್ಟಲಾಗಿದ್ದುಇಲ್ಲಿನ ವಿಸ್ಮಯಗಳಿಗೆಲ್ಲಾ ರಾಮಾಯಣದಕಾಲದ ಕೆಲ ಘಟನೆಗಳೇ ಪ್ರಮುಖಕಾರಣವೆಂದುಇಲ್ಲಿನ ಭಕ್ತರನಂಬಿಕೆಯಾಗಿದೆ. ರಾಮಾಯಣದಕಾಲದಲ್ಲಿರಾವಣನು ಸೀತಾದೇವಿಯನ್ನು ಅಪಹರಿಸಿಕೊಂಡು ಹೋಗುತ್ತಿದ್ದಾಗಗರುಡರಾಜಜಟಾಯುವುಇಂದುಲೇಪಾಕ್ಷಿ ಮಂದಿರವಿರುವಇದೇಬೆಟ್ಟದಲ್ಲಿತಡೆದುರಾವಣನಜೊತೆಕಾದಾಡಿದಾಗರಾವಣನು‘ಜಟಾಯು’ವನ್ನು ಗಾಯಗೊಳಿಸಿದ್ದ, ಆ ಸಂದರ್ಭದಲ್ಲಿಉಂಟಾದಜಟಾಯುವಿನ ಪಾದದಗುರುತನ್ನುಇಲ್ಲಿನಕಲ್ಲಿನಲ್ಲಿಕಾಣಬಹುದಾಗಿದೆ. ಇಲ್ಲಿಇನ್ನೊಂದುವಿಶೇಷವಾದ‘ರಾಮೇಶ್ವರ ಶಿವಲಿಂಗ’ವನ್ನು ಕಾಣಬಹುದಾಗಿದ್ದುಇದನ್ನು ಶ್ರೀ ರಾಮಚಂದ್ರನುಜಟಾಯುವಿನ ಮರಣಾನಂತರಅಂತ್ಯಸಂಸ್ಕಾರವನ್ನು ನೆರವೇರಿಸಿ ಅದರ ನೆನಪಿಗಾಗಿ ಪ್ರತಿಷ್ಠಾಪಿಸಿದನೆಂಬ ಉಲ್ಲೇಖವಿದೆ.ಇದೇ ಸ್ಥಳದಲ್ಲಿ 27 ಅಡಿ ಉದ್ದ ಹಾಗೂ 15 ಅಡಿ ಅಗಲದಬೃಹತ್ ನಂದಿಯ ಮೂರ್ತಿ ಹಾಗೂ ಶಿವಲಿಂಗವನ್ನು ಸಂಪೂರ್ಣವಾಗಿ ಸುತ್ತಿಕೊಂಡಿರುವ ಶೈಲಿಯ‘ಶೇಷನಾಗ’ನ ಅತ್ಯಂತ ವಿಶಿಷ್ಟವಾದ ಮೂರ್ತಿಯೂಇದ್ದು, ವಿಜಯನಗರಅರಸರಕಾಲದ ವಾಸ್ತುಶಿಲ್ಪ ಶೈಲಿಯ ವೃಭವಕ್ಕೆ ಹಿಡಿದಕೈಗನ್ನಡಿಯಾಗಿದೆ.ಇತಿಹಾಸಜ್ಞರ ಪ್ರಕಾರ ಈ ಮೂರ್ತಿಯನ್ನು ಸುಮಾರು 500 ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ ಎಂಬ ಪ್ರತೀತಿಯಿದೆ.??????????????????????????????????????????????????????????????????????????????????????????????????????????????????????????????????????????????????????

ಮಂದಿರದ ಮಧ್ಯ ಭಾಗದಲ್ಲೊಂದು ವಿಶಿಷ್ಟವಾದ ‘ನೃತ್ಯ(ರಂಗ) ಮಂಟಪ’ವೊಂದಿದ್ದು ಸುಮಾರುಎಪ್ಪತ್ತುಕಂಬಗಳಿಂದ ಕೂಡಿದ್ದುಇಂದಿಗೂ ಸ್ವಲ್ಪವೂ ವಿರೂಪಗೊಳ್ಳದೆ ಸದೃಡವಾಗಿ ನಿಂತಿದೆ. ಈಎಪ್ಪತ್ತುಕಂಬಗಳ ಪೈಕಿ ಅರುವತ್ತೊಂಬತ್ತು ಕಂಬಗಳನ್ನು ಸಾಮಾನ್ಯವಾಗಿ ನಿರ್ಮಿಸಲಾಗಿದ್ದು, ಒಂದು ಕಂಬ ಮಾತ್ರಅತ್ಯಂತಕುತೂಹಲಕಾರಿರೀತಿಂiÀiಲ್ಲಿ ಗಾಳಿಯಲ್ಲಿ ತೇಲುತ್ತಿರುವರೀತಿಯಲ್ಲಿಅಡಿಪಾಯದಯಾವುದೇಆಧಾರದಸಹಕಾರವಿಲ್ಲದೇನಿಂತಿದೆ.ಇದುವರೆಗೂ ಈ ಕಂಬವು ಗಾಳಿಯಲ್ಲಿ ತೇಲುತ್ತಾ ನೆಲಕ್ಕೆ ಸ್ವಲ್ಪವೂತಾಗದೇ, ಮೇಲ್ಗಡೆಯೂಯಾವುದೇಆಧಾರವಿಲ್ಲದೇ ಹೇಗೆ ನಿಂತಿದೆಎನ್ನುವುದು ಇಂದಿನ ಎಲ್ಲಾಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೂಸವಾಲಾಗಿನಿಂತಿದೆ.ಈ ಕಂಬದಅಚ್ಚರಿಯೆಂದರೆಕಂಬದ ತಳಬಾಗದ ಒಂದು ಭಾಗದಿಂದ ತೆಳುವಾದ ಬಟ್ಟೆಯನ್ನು ಹಾಸಿದರೆ ಇನ್ನೊಂದು ಭಾಗದಿಂದ ಬಟ್ಟೆಯನ್ನುಸರಿಸಿ ತೆಗೆಯಬಹುದಾಗಿರುವಷ್ಟುಅಂತರಕಂಬದ ತಳ ಹಾಗೂ ಭೂಮಿಯ ಮಧ್ಯದಲ್ಲಿದೆ.IMG_9676

1902ರಲ್ಲಿ ಬ್ರಿಟೀಷ್ ಸರಕಾರದಇಂಜಿನಿಯರ್‍ನೊಬ್ಬಇದರ ವಿಸ್ಮಯವನ್ನು ಭೇದಿಸುವ ಸಲುವಾಗಿ ಕಂಬವನ್ನುಅಲುಗಾಡಿಸಲುಬಹಳಷ್ಟು ಪ್ರಯತ್ನಪಟ್ಟು ವಿಫಲನಾಗುತ್ತಾನೆ. ಕಂಬ ಯಾವುದೇಆದಾರವಿಲ್ಲದೆ ಹೇಗೆ ನಿಂತಿದೆಎಂದು ಪರೀಕ್ಷಿಸುವ ಸಲುವಾಗಿ ಕಂಬವನ್ನುಆಯುಧವೊಂದರಿಂದಬಲವಾಗಿ ಹೊಡೆಯಲು ಪ್ರಯತ್ನ ಪಟ್ಟಾಗ 25 ಅಡಿ ದೂರದೂರದಲ್ಲಿರುವಉಳಿದ 69 ಕಂಬಗಳಲ್ಲೂ ಬಿರುಕು ಮೂಡಿದ್ದವೆಂಬ ಇತಿಹಾಸವನ್ನುಇಲ್ಲಿನ ಕಂಬಗಳನ್ನು ನೋಡಿದಾಗ ತಿಳಿಯುತ್ತದೆ. ಇದರಿಂದಬೆದರಿದಆ ಇಂಜಿನಿಯರ್ ಬರಿಗೈಯಲ್ಲಿಇಲ್ಲಿಂದ ವಾಪಾಸ್ಸಾಗುತ್ತಾನೆ. ಒಟ್ಟಿನಲ್ಲಿಗಾಳಿಯಲ್ಲಿ ತೇಲುತ್ತಿರುವಒಂಟಿಕಂಬದಆಧಾರದಮೇಲೆ ಇಡೀ‘ನೃತ್ಯ(ರಂಗ)ಮಂಟಪ’ ನಿಂತಿರುವುದರ ಹಿಂದಿರುವಗುಟ್ಟೇನುಎಂಬುವುದುಯಾವ ವಿಜ್ಞಾನಿಗಳಿಗೂ ಅರ್ಥವಾಗದನಿಗೂಢವಾದವಿಷಯವಾಗಿಯೇ ಉಳಿದಿದೆ.IMG_9670

IMG_9668ಈ ‘ನೃತ್ಯ(ರಂಗ)ಮಂಟಪ’ದಲ್ಲೇ ಶಿವ ಪಾರ್ವತಿಯರಕಲ್ಯಾಣೋತ್ಸವವೂ ನಡೆದಿದ್ದುಇದನ್ನರಿತ ವಿಜಯನಗರದಅರಸರುಇದನ್ನು ವಿವಾಹ ಮಂಟಪವನ್ನಾಗಿ ಪರಿವರ್ತಿಸಿದರು. ಈ ವಿವಾಹ ಮಂಟಪದಮೇಲ್ಛಾವಣಿಯಹನ್ನೆರಡು ತುಕಡಿಗಳಲ್ಲಿ ಸುಮಾರು ನೂರು ಎಲೆಗಳಿದ್ದು ಮಧ್ಯಭಾಗದಲ್ಲಿಒಂದು ಕಮಲವಿದೆ.ಈ ವಿವಾಹ ಮಂಟಪದ ಸಂಪೂರ್ಣಗುರುತ್ವಾಕರ್ಷಣ ಬಲವು ಈ ಕಮಲದಲ್ಲೇಅಡಗಿರುವುದೂಇಂದಿನ ಆಧುನಿಕತಂತ್ರಜ್ಞಾನಕ್ಕೆಮತ್ತೊಂದುಸವಾಲಾಗಿ ಉಳಿದಿದೆ. ವಿಜಯನಗರ ಸಾಮ್ರಾಜ್ಯದ ಪತನಾನಂತರಅಧಿಕಾರಕ್ಕೆ ಬಂದಇತರಅರಸರು ಈ ಮಂದಿರದವೈಭವ ಹಾಗೂ ವೈಶಿಷ್ಟ್ಯತೆಗಳನ್ನು ಕಂಡರಾಜಇಂತಹಅದ್ಭುತ ಶಿಲ್ಪಕಲೆಯ ನಿಮಾತೃ‘ವಿರೂಪಣ್ಣ’ಇಂತಹ ವೈಭವವನ್ನು ಮತ್ತೆಲ್ಲೂ ನಿರ್ಮಿಸಬಾರದೆಂಬ ಅಸೂಯೆಯಿಂದಈತನ ಕಣ್ಣುಗಳನ್ನು ಇಲ್ಲಿನ ಬೆಟ್ಟಗಳಲ್ಲಿ ಕೀಳಿಸಿದನೆಂದು ಇಲ್ಲಿನಇತಿಹಾಸ ಹೇಳುತ್ತದೆ. ಆ ಘಟನೆಯನ್ನು ಬಿಂಬಿಸುವಂತೆ ವಿರೂಪಣ್ಣನ ಕಣ್ಣುಗಳನ್ನು ಕೀಳಿಸಿದಾಗ ಬಿದ್ದರಕ್ತದ ಕಲೆಗಳು ಇಲ್ಲಿನ ಬೆಟ್ಟಗಳಲ್ಲಿ ಇವೆಯೆಂದು ಸ್ಥಳೀಯರು ಆಡಿಕೊಳ್ಳುತ್ತಿದ್ದರು.ಇದನ್ನು ಪರೀಕ್ಷಿಸಲು ಹುಡುಕಾಟ ಆರಂಭಿಸಿದ ಬ್ರಿಟೀಷರು ವಿರುಪಣ್ಣನರಕ್ತದ ಕಲೆಗಳನ್ನು ಬೆಟ್ಟದಲ್ಲಿಕಂಡುದಂಗಾದರು ಎಂಬ ಉಲ್ಲೇಖವಿದೆ.IMG_9646 (1)

IMG_9662ಒಟ್ಟಿನಲ್ಲಿಹಿಂದಿನ ಕಾಲದಐತಿಹಾಸಿಕ ಕಟ್ಟಡಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಅಂದಿನ ವಾಸ್ತುಶಿಲ್ಪಕಾರರು ಹಾಗೂ ವಾಸ್ತುಶಾಸ್ತ್ರಜ್ಞರುಯಾವುದೇಆಧುನಿಕತಂತ್ರಜ್ಞಾನದ ಸಹಾಯವೂಇಲ್ಲದೆ ಇಂದಿನ ಅಧುನಿಕತಂತ್ರಜ್ಞಾನದ ಮಟ್ಟಕ್ಕೆನಿರ್ಮಿಸಿರುವುದು ನಿಜಕ್ಕೂ ಅಂದಿನ ಜ್ಞಾನ ಹಾಗೂ ಕೌಶಲ್ಯಕ್ಕೆ ಹಿಡಿದಕೈಗನ್ನಡಿಯಾಗಿದೆ. ಇಂದಿನ ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆಲ್ಲದಕ್ಕೂಅಂದಿನ ಕಾಲದ ಶಿಲ್ಪಿಗಳ ಶಿಲ್ಪಕಲೆ ಸವಾಲಾಗಿ ನಿಂತು ಪ್ರವಾಸಿಗರ ಪಾಲಿಗೂ ಅಚ್ಚರಿಯತಾಣವಾಗಿಮೂಡಿರುವುದು ನಿಜಕ್ಕೂ ವಿಚಿತ್ರವಾದರೂ ಸತ್ಯವೂ ಹೌದು.

ಲೇಖನ ತಯಾರಿ:
ಸಂತೋಷ್‍ರಾವ್, ಪೆರ್ಮುಡ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter