Published On: Thu, Jan 11th, 2018

ಮೋದಿ ಬಳಿಕ ನಾನೇ ಪ್ರಧಾನಿ ; ಹುಚ್ಚ ವೆಂಕಟೇಶ

 ಮಂಗಳೂರು:ಮೋದಿ ಬಳಿಕ ನಾನು ದೇಶದ ಪ್ರಧಾನಿಯಾಗುತ್ತೇನೆ. ಮುಂಬರುವ ಚುನಾವಣೆಯಲ್ಲಿ ಹುಚ್ಚ ವೆಂಕಟ ಸೇನೆ ಸ್ಪರ್ಧಿಸಲಿದೆ ಎಂದು ಬಿಗ್‍ಬಾಸ್ ಖ್ಯಾತಿಯ ಹುಚ್ಚ ವೆಂಕಟೇಶ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಹೊಸ ಪಕ್ಷ ಸ್ಥಾಪಿಸಬೇಕಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಆಗಿಲ್ಲ. ನನ್ನ ಹುಚ್ಚ ವೆಂಕಟ್ ಸೇನೆ ಸಕ್ರಿಯವಾಗಿದೆ. ಅದನ್ನು ಮುಂದಿನ ಚುನಾವಣೆ ವೇಳೆಯಾದರೂ ರಾಜಕೀಯ ಪಕ್ಷವನ್ನಾಗಿಸಬೇಕು. ಮೋದಿ ಇನ್ನು ಸ್ವಲ್ಪ ವರ್ಷ ದೇಶದ ಪ್ರಧಾನಿಯಾಗಿರುತ್ತಾರೆ. ಅವರ ನಂತರ ನಾನು ದೇಶದ ಪ್ರಧಾನಿಯಾಗುವೆ ಎಂದರು.

‘ಡಿಕ್ಟೆಟರ್’ ಹೊಸ ಸಿನೆಮಾ; ಚಿತ್ರಿಕರಣ ಆರಂಭ
ನಿರ್ದೇಶನ, ಸಂಭಾಷಣೆ ಹಾಗೂ ನಾಯಕ ನಟನಾಗಿ ನಾನು ಅಭಿನಯಿಸುತ್ತಿರುವ ಹೊಸ ಚಿತ್ರ ‘ಡಿಕ್ಟೇಟರ್’ ನ ಚಿತ್ರೀಕರಣ ಆರಂಭವಾಗಿದೆ. ನಾನೇ ಚಿತ್ರದಲ್ಲಿ 5 ಹಾಡುಗಳನ್ನು ಹಾಡಿದ್ದೇನೆ. ಚಿತ್ರೀಕರಣದ ಪ್ರೋಮೊ ಯೂಟ್ಯೂಬ್‍ನಲ್ಲಿ ಲಭ್ಯವಿದೆ. ತಿಕ್ಲ ಹುಚ್ಚ ವೆಂಕಟೇಶ್, ದುರಂಹಕಾರಿ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ ಎಂದರು.
ಚಿತ್ರದಲ್ಲಿ ಸಂಗೀತ ಸತೀಶ್ ಬಾಬು, ತಾರಾಗಣದಲ್ಲಿ ಐಶ್ವರ್ಯ ಸೇನ್, ಜೈಜಗದೀಶ್, ರಮೇಶ್, ಶೈಲೇಶ್, ಸುಂದರ್‍ರಾಜ್ ಅಭಿನಯಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕಿ ಐಶ್ವರ್ಯ ಸೇನ್ ಇದ್ದರು.

ಪತ್ರಕರ್ತರಿಗೆ ಪ್ರತ್ಯೇಕ ಅನುದಾನ;
ಅದೇಷ್ಟೋ ಪತ್ರಕರ್ತರು ಇಂದು ಮಾನನಷ್ಟ ಕೇಸ್‍ಗಳನ್ನು ಎದುರಿಸುತ್ತಿದ್ದಾರೆ. ಅವರ ಜೀವನ ದುಸ್ತರದಿಂದ ಕೂಡಿದೆ. ಅವರಿಗೆ ಸರಕಾರ ಬಜೆಟ್‍ನಲ್ಲಿ ಪ್ರತ್ಯೇಕ ಅನುದಾನ ನೀಡಬೇಕು ಎಂದು ಆಗ್ರಹಿಸಿದ ಅವರು, ಎಲ್ಲಾ ವರ್ಗಗಳಿಗೂ ಅನುದಾನ ನೀಡುವ ಸರಕಾರ ಪತ್ರಕರ್ತರಿಗೆ ಅನುದಾನ ನೀಡಿದರೆ ತಪ್ಪೇನು? ಆ ಮೂಲಕ ಪತ್ರಕರ್ತರ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು ಎಂದರು.

ಮೋದಿ ಪ್ರಧಾನಿಯಾಗಲು ಮಾಧ್ಯಮ ಕಾರಣ
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಲು ಮಾಧ್ಯಮವೇ ಕಾರಣ ವೆಂದ ಹುಚ್ಚ ವೆಂಕಟೇಶ್, ರಾಜಕೀಯ ನಾಯಕರು ಮಂತ್ರಿ ಪಟ್ಟ ಪಡೆಯಲು ಪತ್ರಕರ್ತರೇ ಕಾರಣರಾಗುತ್ತಾರೆ. ಚುನಾವಣಾ ಸಮಯದಲ್ಲಿಯು ರಾಜಕಾರಣಿಯ ಮಾತನ್ನು ಯಾರು ಕೇಳಲ್ಲ. ಮಾಧ್ಯಮದಲ್ಲಿ ಯಾವ ರೀತಿಯಾಗಿ ಹೇಳಲಾಗಿದೆ ಅದನ್ನು ಜನ ನಂಬುತ್ತಾರೆ. ಮಾಧ್ಯಮಕ್ಕೆ ಸಮಾಜವನ್ನು ಬದಲಿಸುವ ಶಕ್ತಿಯಿದೆ ಎಂದರು.
ಮಂಗಳೂರು ಸಂಘರ್ಷ ನೋವು ತಂದಿದೆ

ಮಂಗಳೂರಲ್ಲಿ ಕೆಲ ಸಮಯದಿಂದ ನಡೆಯುತ್ತಿರುವ ಗಲಭೆಗಳು ನನಗೆ ಅತೀವ ನೋವುಂಟು ಮಾಡಿದೆ. ನಾವೆಲ್ಲರೂ ಪ್ರೀತಿಯಿಂದ ಬದುಕಬೇಕು. ಹಿಂಸಾಚಾರ ಬೇಡ. ನಮ್ಮನ್ನು ದೂರ ಮಾಡಲು ಪ್ರಯತ್ನಿಸುವವರನ್ನು ನಾವು ದೂರ ಇಡೋಣ. ಶಾಂತಿ ಕದಡಲು ಬರುವವರನ್ನು ಎದುರಿಸೋಣ ಎಂದರು.

ಹೆಂಡ, ಹಣಕ್ಕೆ ವೋಟು ಮಾರಬೇಡಿ
ಹಣ, ಸೀರೆ, ಹೆಂಡ ಶಾಶ್ವತ ಅಲ್ಲ. 200, 500 ರುಪಾಯಿ ನೀಡುತ್ತಾರೆಮದು ಮತವನ್ನು ಮಾರಿಕೊಳ್ಳಬೇಡಿ. 1 ಅಥವಾ 2 ದಿನ ಇವೆಲ್ಲವು ಸಿಗಬಹುದು. ಅದು ಶಾಶ್ವತ ಅಲ್ಲ. ಸಮಾಜವೇ ನನಗೆ ಮನೆ. ಸಮಾಜದ ಬದಲಾವಣೆಗೆ ಶ್ರಮಿಸುವೆ ಎಂದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter