ಈ ವರ್ಷದ ‘ಮದರ್ ತೆರೆಸಾ ಸ್ಮಾರಕ ಪ್ರಶಸ್ತಿ’ ಪಡೆದ ನಟಿ ಯಾರು ಗೊತ್ತೇ?
ಸಿನೆಮಾ: ಸಾಮಾಜಿಕ ನ್ಯಾಯಕ್ಕಾಗಿ ನೀಡುವ ಈ ವರ್ಷದ ಮದರ್ ತೆರೆಸಾ ಸ್ಮಾರಕ ಪ್ರಶಸ್ತಿಗೆ ಬಾಲಿವುಡ್ನ ಖ್ಯಾತ ನಟಿ ಪ್ರಿಯಾಂಕ ಛೋಪ್ರಾ ಭಾಜನರಾಗಿದ್ದಾರೆ.
ಯುನಿಸೆಫ್ ನ ಗುಡ್ ವಿಲ್ ಅಂಬಾಸಡರ್ ಆಗಿಯೂ ನಟಿ ಸೇವೆ ಸಲ್ಲಿಸುತ್ತಿದ್ದು, ನಾನಾ ಜನ ಕಲ್ಯಾಣ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದಾರೆ.
ಸಮಾಜ ಸೇವೆಗೆ ಆಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡ ಗೌರವಿಸಲಾಗಿದ್ದು, ಈ ಪ್ರಶಸ್ತಿಯನ್ನು ಪ್ರಿಯಾಂಕ ಅನುಸ್ಥಿತಿಯಲ್ಲಿ ತಾಯಿ ಮಧು ಛೋಪ್ರಾ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಇತ್ತೀಚೆಗಷ್ಟೆ ಸಿರಿಯಾಗೆ ಭೇಟಿ ನೀಡಿ ಅಲ್ಲಿನ ನಿರಾಶ್ರಿತ ಮಕ್ಕಳ ಜತೆ ನಟಿ ಪ್ರಿಯಾಂಕ ಛೋಪ್ರಾ ಅವರು ಸಂವಾದ ನಡೆಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಈ ಹಿಂದೆ ಖ್ಯಾತನಾಮರಾದ ಕಿರಣ್ ಬೇಡಿ, ಅಣ್ಣಾ ಹಜಾರೆ, ಆಸ್ಕರ್ ಫರ್ನಾಂಡಿಸ್, ಸುಧಾ ಮೂರ್ತಿ, ಮಲಾಲ ಯೂಸಫ್ಜಾಯ್, ಸುಷ್ಮಿತಾ ಸೇನ್, ಬಿಲ್ಕಿಸ್ ಬನೋ ಎಧಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.