Published On: Fri, Dec 15th, 2017

ಭಾರತೀಯ ವಾಯುಪಡೆ ಹುದ್ದೆಗೆ ಅರ್ಜಿ ಆಹ್ವಾನ

India Air Force Day

ಹಾಸನ: ಭಾರತೀಯ ವಾಯುಪಡೆಯ ಏರ್‍ಮನ್ ಗ್ರೂಪ್ “ಎಕ್ಸ್” (ತಾಂತ್ರಿಕ) ಮತ್ತು ಗ್ರೂಪ್ “ವೈ” (ತಾಂತ್ರಿಕವಲ್ಲದ) ಟ್ರೇಡ್ ಹಾಗೂ ಗ್ರೂಪ್ ವೈ (ಮೆಡಿಕಲ್ ಅಸಿಸ್ಟೆಂಟ್ ಟ್ರೀಡ್ ಮಾತ್ರ) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

(1) ಗ್ರೂಪ್ “ಎಕ್ಸ್” ವೃತ್ತಿ: ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಆಂಗ್ಲ ಭಾಷೆಯಲ್ಲಿ ಸರಾಸರಿ ಕನಿಷ್ಠ ಶೇ. 50 ಹಾಗೂ ಆಂಗ್ಲ ಭಾಷೆಯಲ್ಲಿ ಕನಿಷ್ಠ ಶೇ. 50 ಅಂಕ ಗಳಿಸಿ ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೊಮೋದಲ್ಲಿ ಸರಾಸರಿ ಕನಿಷ್ಠ ಶೇ. 50 ಅಂಕ ಗಳಿಸಿ ಸರ್ಕಾರದ ಅಂಗೀಕೃತ ಪಾಲಿಟೆಕ್ನಿಕ್ ನಿಂದ ತೇರ್ಗಡೆ ಹೊಂದಿರಬೇಕು ಹಾಗೂ ಇದರಲ್ಲಿ ಆಂಗ್ಲ ಭಾಷೆಯಲ್ಲಿ ಶೇ. 50 ಅಂಕ ಗಳಿಸಿರಬೇಕು.

(2) ಗ್ರೂಪ್ “ವೈ” ವೃತ್ತಿ: ಕೇಂದ್ರ ಅಥವಾ ರಾಜ್ಯ ಸರ್ಕಾರದ ಎಜುಕೇಷನ್ ಬೋರ್ಡ್‍ಗಳಿಂದ ಅಂಗೀಕೃತವಾದ ಸಂಸ್ಥೆಗಳಿಂದ ಯಾವುದೇ ವಿಷಯಗಳಲ್ಲಿ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯನ್ನು ಸರಾಸರಿ ಶೇ.50 ಹಾಗೂ ಆಂಗ್ಲ ಭಾಷೆಯಲ್ಲಿ ಶೇ.50 ಅಂಕ ಗಳಿಸಿರಬೇಕು.

(3) ಗ್ರೂಪ್”ವೈ” (ಮೆಡಿಕಲ್ ಅಇಸ್ಟೆಂಟ್ ಟ್ರೇಡ್): ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಆಂಗ್ಲ ಭಾಷೆಯಲ್ಲಿ ಸರಾಸರಿ ಕನಿಷ್ಠ ಶೇ. 50 ಅಂಕ ಹಾಗೂ ಆಂಗ್ಲ ಭಾಷೆಯಲ್ಲಿ ಕನಿಷ್ಠ ಶೇ. 50 ಅಂಕ ಗಳಿಸಿ ಉತ್ತೀರ್ಣರಾಗಿರಬೇಕು.

ವಯೋಮಿತಿ: 13/01/1998 ರಿಂದ 02/01/2002 ರ ಅವಧಿಯಲ್ಲಿ ಜನಿಸಿರಬೇಕು.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇಮಕಾತಿ ಆಯ್ಕೆ ಪರೀಕ್ಷೆಗಾಗಿ ತಮ್ಮ ಹೆಸರು ಮತ್ತು ವಿದ್ಯಾರ್ಹತೆಗಳ ಸೂಕ್ತ ಮಾಹಿತಿಯನ್ನು ಜ.12 ರೊಳಗೆ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬೇಕು.

ಅರ್ಜಿ ಭರ್ತಿ ಮಾಡುವ ವಿಧಾನ, ವಿದ್ಯಾರ್ಹತೆ, ಅರ್ಜಿ ಕಳುಹಿಸುವ ವಿಧಾನ ಹಾಗೂ ಮಾಹಿತಿಗಾಗಿ  ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ದೂ.08172 – 268374 ಸಂಪರ್ಕಿಸಬಹುದು ಎಂದು ಹಾಸನ ಜಿಲ್ಲೆ ಉದ್ಯೋಗಾಧಿಕಾರಿ ವಿಜಯಲಕ್ಷ್ಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter