Published On: Mon, Nov 27th, 2017

ಹೊಕ್ಕಾಡಿಗೋಳಿ: ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಫಲಿತಾಂಶ

ಸಿದ್ಧಕಟ್ಟೆ: ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ರಾತ್ರಿ ನಡೆದ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ಒಟ್ಟು 98 ಜೋಡಿ ಓಟದ ಕೋಣಗಳು ಭಾಗವಹಿಸಿದ್ದು, ಸಹಸ್ರಾರು ಮಂದಿ ಕಂಬಳಾಸಕ್ತರು ಪಾಲ್ಗೊಂಡಿದ್ದರು. ಈ ಪೈಕಿ ನೇಗಿಲು ಕಿರಿಯ-36, ನೇಗಿಲು ಹಿರಿಯ -27, ಹಗ್ಗ ಕಿರಿಯ-15, ಹಗ್ಗ ಹಿರಿಯ-13, ಅಡ್ಡಹಲಗೆ-6, ಕನೆಹಲಗೆ-1 ಜೋಡಿ ಓಟದ ಕೋಣಗಳು ಭಾಗವಹಿಸಿ ಗಮನ ಸೆಳೆಯಿತು. ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ, ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರ ಸುರೇಶ ಶೆಟ್ಟಿ ಮತ್ತಿತರರು ಇದ್ದರು.

ಫಲಿತಾಂಶ ವಿವರ:
ಕನೆಹಲಗೆ:
ವಾಮಂಜೂರು ತಿರುವೈಲುಗುತ್ತು ನವೀನ್‍ಚಂದ್ರ ಆಳ್ವ -ಪ್ರಥಮ. (ಓಡಿಸಿದವರು: ನಾರಾವಿ ಯುವರಾಜ್ ಜೈನ್)
ಹಗ್ಗ ಹಿರಿಯ:
ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್-ಪ್ರಥಮ. (ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ)
ನಂದಳಿಕೆ ನವ್ಯತಾ ಶ್ರೀಕಾಂತ್ ಭಟ್ (ಬಿ)-ದ್ವಿತೀಯ. (ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ ಎಂ.ಶೆಟ್ಟಿ )
ಹಗ್ಗ ಕಿರಿಯ:
ಮಿಜಾರು ಪ್ರಸಾದ ನಿಲಯ ಶಕ್ತಿಪ್ರಸಾದ್ ಶೆಟ್ಟಿ-ಪ್ರಥಮ. (ಓಡಿಸಿದವರು: ಮಾರ್ನಾಡ್ ರಾಜೇಶ್ )
ಜಪ್ಪು ಮಣ್ಣುತೋಟ ಗುತ್ತು ಸಾಚಿ ಅನಿಲ್ ಶೆಟ್ಟಿ -ದ್ವಿತೀಯ. (ಓಡಿಸಿದವರು: ಬಂಗಾಡಿ ಹಮೀದ್)
ನೇಗಿಲು ಹಿರಿಯ:
ಇರುವೈಲು ಪಾಣೇಲ ಬಾಡ ಪೂಜಾರಿ – ಪ್ರಥಮ. (ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ)
ಕಕ್ಯಪದವು ಪೆಂರ್ಗಾಲ್ ಬಾಬು ವೆಂಕಪ್ಪ ಗೌಡ -ದ್ವಿತೀಯ. (ಓಡಿಸಿದವರು: ಬಾರಾಡಿ ನತೇಶ್)
ನೇಗಿಲು ಕಿರಿಯ:
ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ -ಪ್ರಥಮ. (ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
ಮರೋಡಿ ಕೆಳಗಿನ ಮನೆ ಕೃತೇಶ್ ಅಣ್ಣಿ ಪೂಜಾರಿ -ದ್ವಿತೀಯ. (ಓಡಿಸಿದವರು: ಮರೋಡಿ ಶ್ರೀಧರ)
ಅಡ್ಡಹಲಗೆ:
ಆಲದಪದವು ಮೇಗಿನಮನೆ ಶುಭ್ರತ್ ಶೆಟ್ಟಿ -ಪ್ರಥಮ. (ಓಡಿಸಿದವರು: ಮುಳಿಕಾರು ಕೇವುಡೇಲು ಅಣ್ಣಿ ದೇವಾಡಿಗ)
ಗುರುಪುರ ಕೆದುಬರಿ ಯಶೋಧ ಗುರುವಪ್ಪ ಪೂಜಾರಿ-ದ್ವಿತೀಯ. (ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ)

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter