ಎನ್ಎಸ್ಎಸ್ ಶಿಬಿರದ ಮೂಲಕ ಸಮಾನತೆ ಮತ್ತು ಸಾಮರಸ್ಯ ಮೂಡಿಸಲು ಸಾಧ್ಯ: ರೈ
ಸಿದ್ಧಕಟ್ಟೆ: ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಶಿಬಿರ ಮೂಲಕ ಸಮಾನತೆ ಮತ್ತು ಸಾಮರಸ್ಯ ಮೂಡಿಸಲು ಸಾಧ್ಯ. ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಗ್ರಾಮೀಣರ ಬದುಕು ಪರಿಚಯವಾಗುತ್ತದೆ ಎಂದು ಸಚಿವ ಬಿ.ರಮಾನಾಥ ರೈ ಹೇಳಿದರು.ಭಾನುವಾರ ಸಂಜೆ ಸಿದ್ಧಕಟ್ಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿ.ಪಂ. ಸದಸ್ಯ ಪದ್ಮಶೇಖರ ಜೈನ್, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ದಿನೇಶ ಸುಂದರ ಶಾಂತಿ , ಸಿದ್ಧಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಶ್ರೀನಿವಾಸ್ ನಾಯ್ಕ್, ಪ್ರಮುಖರಾದ ಅರ್ಕಕೀರ್ತಿ ಇಂದ್ರ, ಬೇಬಿ ಕುಂದರ್, ಸೀತಾರಾಮ ಎಂ.ಶೆಟಿ,್ಟ ಲೋಕಯ ಗಾಡಿಪಲ್ಕೆ, ಕವಿತಾ ವಿ.ಶೆಟ್ಟಿಗಾರ್ ಕಲ್ಪನೆ ,ಕಾಲೇಜು ಎನ್ಎಸ್ಎಸ್ ಘಟಕದ ನಾಯಕರುಗಳಾದ ಸುಮಂತ್ ಎಸ್.ಕೆ.,ಕೀರ್ತನ್, ಪ್ರತೀಕ್ಷಾ,ಪಂಚಶ್ರೀ ಮತ್ತಿತರರು ಇದ್ದರು.
ಕಾಲೇಜಿನ ಎನ್ಎಸ್ಎಸ್ 2ನೇ ಘಟಕದ ಶಿಬಿರಾಧಿಕಾರಿ ಕಿಟ್ಟುರಾಮ ಕುಂಜ ಸ್ವಾಗತಿಸಿದರು. ಕಾಲೇಜಿನ ಎನ್ಎಸ್ಎಸ್ 1ನೇ ಘಟಕದ ಶಿಬಿರಾಧಿಕಾರಿ ಡಾ.ಮಂಜುನಾಥ ಉಡುಪ ಕೆ. ವಂದಿಸಿದರು. ಶಿಬಿರಾರ್ಥಿ ಸುದರ್ಶನ್ ಡಿ. ಸುವರ್ಣ ಕಾರ್ಯಕ್ರಮ ನಿರೂಪಿಸಿದರು.