Published On: Fri, Nov 10th, 2017

ಗುರುಪುರ ಬಂಟರ ಮಾತೃ ಸಂಘದ ಕ್ರೀಡಾಕೂಟ, ಇತರ ಬಂಟ ಸಂಘಗಳಿಗೆ ಮಾದರಿ : ಮಾಲಾಡಿ

ಕೈಕಂಬ : ಗುರುಪುರ ವಲಯ ಬಂಟ ಸಮಾಜದ ಯುವಜನರನ್ನು ಒಂದೇ ಸೂರಿನಡಿ ಸೇರಿಸಿ ಗುರುಪುರ ಬಂಟರ ಮಾತೃ ಸಂಘ ನಡೆಸಿಕೊಟ್ಟ ಕ್ರೀಡಾಕೂಟ ಯಶಸ್ವಿಯಾಗಿರುವುದರಲ್ಲದೆ ಇತರೆಲ್ಲ ಬಂಟ ಸಂಘಗಳಿಗೆ ಮಾದರಿಯಾಗಿದೆ ಎಂದು ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಭಿಮಾನ ವ್ಯಕ್ತಪಡಿಸಿದರು.gur-nov-7-ajith maladi

gur-nov-7-bunts sports-1
ನ. 5ರಂದು ಗಂಜಿಮಠದ ರಾಜ್ ಅಕಾಡೆಮಿ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಂಟ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ರವಿರಾಜ ಶೆಟ್ಟಿ ನಿಟ್ಟೆಗುತ್ತು, ಉದ್ಯಮಿ ರವೀಂದ್ರನಾಥ ಮಾರ್ಲ ಪೆರ್ಮಂಕಿ ಹೊಸಮನೆ, ಮಂಗಳೂರು ಬಂಟರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಮಂಗಳೂರು ತಾಲೂಕು ಬಂಟರ ಮಾತೃ ಸಂಘದ ಸಂಚಾಲಕ ಜಯರಾಮ ಸಾಂತ, ಉಮೇಶ್ ರೈ ಪದವು ಮೇಗಿನಮನೆ, ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಶೆಟ್ಟಿ ವಾಮಂಜೂರು, ಸುಬ್ಬಯ್ಯ ಶೆಟ್ಟಿ ಗುರುಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

gur-nov-7-bunts sports-2

gur-nov-7-bunts sports-3
ಸಂಘದ ಅಧ್ಯಕ್ಷ ತಿರುವೈಲುಗುತ್ತು ರಾಜಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯುವ ವಿಭಾಗದ ಅಧ್ಯಕ್ಷ ಉದಯ ಶೆಟ್ಟಿ ಬೆಳ್ಳೂರುಗುತ್ತು ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ ದಯಾನಂದ ಮಾಡ ಎಕ್ಕಾರು, ಪ್ರೇಮನಾಥ ಶೆಟ್ಟಿ ಪುತ್ತೂರು, ಶಶಿಧರ ಶೆಟ್ಟಿ ಗಂಜಿಮಠ, ಜಯಲಕ್ಷ್ಮೀ ಶೆಟ್ಟಿ ನಾರಳ, ಸುಧಾಕರ ಶೆಟ್ಟಿ ಮಂಗಳೂರು ತೀರ್ಪುಗಾರರಾಗಿ ಸಹಕರಿಸಿದರು. ಜಯರಾಮ ರೈ ಉಳಾಯಿಬೆಟ್ಟು ಮತ್ತು ಕವಿತಾ ಪೆರ್ಮಂಕಿಗುತ್ತು ವಿಜೇತರ ಹೆಸರು ವಾಚಿಸಿದರು. ರಾಜೀವ ಶೆಟ್ಟಿ ಸಲ್ಲಾಜೆ ಕಾರ್ಯಕ್ರಮ ನಿರೂಪಿಸಿದರೆ, ಸುದರ್ಶನ ಶೆಟ್ಟಿ ಪೆರ್ಮಂಕಿ ವಂದಿಸಿದರು. ಸಂಘದ ವ್ಯಾಪ್ತಿಯ 13 ಗ್ರಾಮಗಳ 400ಕ್ಕೂ ಅಧಿಕ ಬಂಟ ಕ್ರೀಡಾಪಟುಗಳು ಒಟ್ಟು 20 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter