Published On: Thu, Nov 9th, 2017

ಗಾಂಧಿಯಿಂದ ಗೌರಿವರೆಗೆ: ಐಎಸ್ಎಫ್ ಕುವೈಟ್ನಿಂದ ವಿಚಾರಗೋಷ್ಟಿ

ಕುವೈಟ್ :ಇಂಡಿಯಾದಲ್ಲಿನಫ್ಯಾಶಿಸ್ಟ್ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲುವ ‘ಗಾಂಧಿಯಿಂದ ಗೌರಿವರೆಗೆ’ ವಿಚಾರಗೋಷ್ಠಿಯು ಇಂಡಿಯನ್ ಸೋಶಿಯಲ್ ಫೋರಮ್, ಕುವೈಟ್ ವತಿಯಿಂದ ನವೆಂಬರ್ 3ರ ಶುಕ್ರವಾರಸಾಲ್ಮಿಯಾದ ರೆಡ್ ಫ್ಲೇಮ್ ಹಾಲಿನಲ್ಲಿ ನಡೆಯಿತು. ಕುವೈಟಿನ ವಿವಿಧ ಭಾಗಗಳಿಂದ ಆಗಮಿಸಿದವಿವಿಧ ಸಂಘಟನೆಗಳ ಪ್ರತಿನಿಧಿಗಳು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ISF 9

ಕಾರ್ಯಕ್ರಮದಅಧ್ಯಕ್ಷತೆವಹಿಸಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ಕರ್ನಾಟಕ ವಿಭಾಗದಅಧ್ಯಕ್ಷರಾದ ಇಮ್ತಿಯಾಝ್ ಅಹ್ಮದ್ ಅರ್ಕುಳ ಅವರು ಭಾರತದಲ್ಲಿ ಪ್ರಸಕ್ತ ಕಂಡುಬರುತ್ತಿರುವ ಅಸಹಿಷ್ಣುತೆ, ಅದರ ಹುಟ್ಟು, ಬೆಳವಣಿಗೆ, ಕಾರಣ ಮತ್ತು ಪರಿಣಾಮಗಳ ಬಗ್ಗೆವಿವರಿಸಿದರು. ಭಾರತದಲ್ಲಿ ನಡೆಯುತ್ತಿರುವ ಹತ್ಯೆಗಳ ಸೂತ್ರದಾರರಾರು ಎಂಬುವುದು ಇಲ್ಲಿನನ್ಯಾಯಾಂಗ ವ್ಯವಸ್ಥೆ, ಅಧಿಕಾರಿ ವರ್ಗ ಮತ್ತು ಸರಕಾರಕ್ಕೆ ತಿಳಿದಿದ್ದರೂ, ಯಾವುದೇತನಿಖಾ ಸಂಸ್ಥೆಯ ತನಿಖೆಯು ಹತ್ಯಾಕಾಂಡಗಳನ್ನು ನಡೆಸುತ್ತಿರುವ ಸೂತ್ರದಾರ ಸಂಘಟನೆಯವರೆಗೆತಲುಪದಿರುವುದು ಬಹುದೊಡ್ಡ ದುರಂತವೆಂದು ಬಣ್ಣಿಸಿದರು.ಜಾತ್ಯಾತೀತ ಶಕ್ತಿಗಳು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ತೋರುತ್ತಿರುವ ಮೃದು ಧೋರಣೆ ನಿಲ್ಲಿಸಿ ಕಠಿಣ ನಿಲುವು ತಳೆಯುವ ದಿನದಿಂದ ಫ್ಯಾಶಿಸ್ಟ್’ನ ಅಂತ್ಯ ಆರಂಭವಾಗಲಿದೆ ಎಂದರು.ISF 1

ಮುಖ್ಯಅತಿಥಿಯಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಬಾಬು ಅವರುಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಇಂಡಿಯಾದಲ್ಲಿ ಸಂವಿಧಾನವೇ ಅಪಾಯದಲ್ಲಿರುವ ಈಸಂಧರ್ಭದಲ್ಲಿ ಜಾತ್ಯಾತೀತ ಶಕ್ತಿಗಳು ತಮ್ಮ ಸ್ವಪ್ರತಿಷ್ಟೆಯನ್ನು ಬದಿಗಿಟ್ಟು ಒಂದಾಗಿಹೋರಾಟ ಮಾಡಬೇಕೆಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ಅನಿವಾಸಿಗಳೆಡೆ ಜಾಗೃತಿಯನ್ನುಮೂಡಿಸುತ್ತಿರುವ ಐಎಸ್ಎಫ್ ನಡೆ ಶ್ಲಾಘನೀಯ ಎಂದರು.ISF 3

ಇನ್ನೋರ್ವಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಸೇವಕರೂ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ವ್ಯವಸ್ಥಾಪಕರೂ ಆದ ಅಬ್ದುಲ್ ರಜಾಕ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.ಅಭಿವ್ಯಕ್ತಿ ಸ್ವಾತಂತ್ರ್ಯವು ಮಾನವನ ಮೂಲಭೂತ ಅವಶ್ಯಕತೆಯಾಗಿದ್ದು, ಅದರಲ್ಲೂ ಒಂದುಮಹಿಳೆಯನ್ನು ಜಾತ್ಯಾತೀತರ ಪರ ಶಬ್ಧವೆತ್ತಿದ ಕಾರಣಕ್ಕಾಗಿ ಅಮಾನವೀಯವಾಗಿ ಕೊಲ್ಲುವುದುಕೊಲೆಗಡುಕ ಸಂಘಟನೆಯ ನೀಚ ಸ್ವರೂಪವನ್ನು ಬಿಂಬಿಸುತ್ತದೆ ಎಂದು ಖಂಡಿಸಿದರು.ISF 8

ಇಂಡಿಯನ್ಸೋಶಿಯಲ್ ಫೋರಮ್ ಮೀಡಿಯೇಟ್ಸ್ ತಂಡದ ಸಂಚಾಲಕರಾದ ಅಶ್ರಫ್ ಕಾಲತ್ತೋಡ್, ಕುವೈಟ್‌ಇಂಡಿಯಾ ಫ್ರೆಟರ್ನಿಟಿ ಫೋರಮ್ ಕರ್ನಾಟಕ ಚಾಪ್ಟರ್ ಅಧ್ಯಕ್ಷರಾದ ಮುಸ್ತಕೀಮ್ ಶಿರೂರ್ಸಭಿಕರನ್ನುದ್ದೇಶಿಸಿ ಮಾತನಾಡಿದರು. ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿ ಪ್ರಧಾನಕಾರ್ಯದರ್ಶಿಯಾದ ಮುಹಮ್ಮದ್ ರಫೀಕ್ ಮಂಚಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಕ್ಬಾಲ್ಬಡ್ಡೂರು ಆರಂಭದಲ್ಲಿ ಸ್ವಾಗತಗೈದರೆ ತಂಝೀಲ್ ಕಲ್ಲಾಪು ಕಾರ್ಯಕ್ರಮವನ್ನು ನಿರೂಪಿದರು.ಹಂಝ ಉಚ್ಚಿಲ ಅಂತ್ಯದಲ್ಲಿ ಧನ್ಯವಾದವನ್ನಿತ್ತರು. ರಾತ್ರಿಯ ಉಪಾಹಾರದೊಂದಿಗೆಕಾರ್ಯಕ್ರಮವು ಮುಕ್ತಾಯಗೊಂಡಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter