Published On: Sun, Oct 22nd, 2017

ಕಲ್ಲಡ್ಕ: ಮುಖ್ಯಮಂತ್ರಿಗಳೇ ನೀವು ಅನ್ನ ಕಿತ್ತುಕೊಂಡರೇನಾಯಿತು? ನಾವೇ ಅನ್ನದಾತರಾಗುತ್ತೇವೆ!!

ಕಲ್ಲಡ್ಕ :ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಿಂದ ಪ್ರಸಾದ ರೂಪದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಮದ್ಯಾಹ್ನದ ಅನ್ನಕ್ಕಾಗಿ ಬರುತ್ತಿದ್ದ ಧನ ಸಹಾಯವನ್ನು ಈಗಿನ ಸಿದ್ದನ ಪೆದ್ದು ಸರ್ಕಾರ ನಿಲ್ಲಿಸಿದ್ದು ಲೋಕಕ್ಕೆ ಗೊತ್ತಿರುವ ವಿಚಾರ.. ಇದಕ್ಕೆ ನಮ್ಮ ಬಂಟ್ವಾಳದ ಶಾಸಕ ರಮಾನಾಥ ರೈ ಅವರೇ ಕುಮ್ಮಕ್ಕು ಕೊಟ್ಟದು ಅನ್ನೋದು ಬೇರೆ ಆರೋಪ.  ವಿರೋಧವಾಗಿ ಕಲ್ಲಡ್ಕದ 3500 ಮಕ್ಕಳು ಸಿಡಿದೆದ್ದು ಬಿಸಿರೋಡ್ನ ನಡು ರಸ್ತೆಯಲ್ಲಿ ಮಾತಿನ ಮೂಲಕ ಮುಖ್ಯಮಂತ್ರಿ ಹಾಗೂ ರಮಾನಾಥ ರೈ ವಿರುದ್ಧ ಇಡೀ ರಾಜ್ಯ ಹಾಗೂ ದೇಶದ ಗಮನ ಸೆಳೆದಿತ್ತು..

9ccda100-1a11-4e89-bb58-f5f0064c93d5

0be243c6-3e43-40eb-8bc3-2d4ce9bf8591

ತಮ್ಮ ಅನ್ನ ಕಿತ್ತುಕೊಂಡ ಈ ರಾಕ್ಷಸರ ವಿರುದ್ಧ ಕಲ್ಲಡ್ಕದ ಮಕ್ಕಳು ತಮ್ಮ ನಿಷ್ಠೆ, ಕಠಿಣ ಪರಿಶ್ರಮ ಮೆರೆದು ರಾಜ್ಯವೇ  ಆ ಮಕ್ಕಳೆದುರು ತಲೆಬಾಗುವಂತೆ ಮಾಡಿದ್ದಾರೆ ?

ಕಲ್ಲಡ್ಕದ ವಿದ್ಯಾರ್ಥಿಗಳು ID ಕಾರ್ಡ್ ಹಾಕಿಕೊಂಡು ಕುತ್ತಿಗೆಗೊಂದು ಟೈ,ಕಾಲಿಗೆ ಶೂ ಹಾಕಿಕೊಂಡು ಇರುವ ಪಟ್ಟಣದ ಟೈಸನ್ ಕೋಳಿಯ ಹಾಗೆ ಇರುವ ಮಕ್ಕಳಂತೆ ಅಲ್ವೇ ಅಲ್ಲ, ಹುಲಿ ಬಂದಾಗ ಗನ್ ಬದಲು ಗನ್ ನ ಲೈಸೆನ್ಸ್ ತೋರಿಸುವಷ್ಟು ಬುದ್ಧಿವಂತರೂ ಅಲ್ಲಪ್ಪ. ಅವರು ಶ್ರಮಜೀವಿಗಳು, ಮಣ್ಣಲ್ಲೇ ಹುಟ್ಟಿ , ಮನ್ನಿಗೋಸ್ಕರ ಜೀವಿಸುವವರು.

ಇತ್ತೀಚೆಗೆ ಕಲ್ಲಡ್ಕದ ವಿದ್ಯಾರ್ಥಿಗಳು ಕಲ್ಲಡ್ಕ ಪಕ್ಕದ ಸುದೇಕಾರು ಎಂಬಲ್ಲಿ ಶಾಲೆಯ ಗದ್ದೆಯಲ್ಲಿ ಶುದ್ಧ ಸಾವಯವದ ಬಂಗಾರದ ಬೆಳೆ ಬೆಳೆದಿದ್ದಾರೆ. ಅವರೇ ನಾಟಿ ಮಾಡಿ, ಅವರೇ ನೆಟ್ಟು,ಅವರೇ ಗೊಬ್ಬರ ಹಾಕಿ,ಅವರೇ ಕಟಾವು ಮಾಡಿ. ಕಷ್ಟಪಟ್ಟು ಅವರ ಬೆವರನ್ನು ಬತ್ತವಾಗಿ ಪರಿವರ್ತಿಸಿ ಶ್ರೀರಾಮನ ಪಾದಕ್ಕೆ ಅರ್ಪಣೆ ಮಾಡಿದ್ದಾರೆ. ಸುಮಾರು 2 ಎಕರೆ ಜಾಗ ಗದ್ದೆಯಲ್ಲಿ ಬತ್ತ ಬೆಳೆಯಲಾಗಿದೆ.ಇದರ ಹುಲ್ಲು ಕಾಲೇಜಿನ ವಸುಧಾರ ಗೋಶಾಲೆಗೆ. ಸಂಬಂದಿಸಿದ ಫೋಟೋ ಇಲ್ಲಿ ಕಾಣಬಹುದು.fa72a1c8-3d1f-44fe-a3d9-e9d4fec7aa37

ಈಗಿನ ಕಾಲದಲ್ಲಿ ದನಕ್ಕೆ ಎಷ್ಟು ಕಾಲಿದೆ ಅಂತ ಗೊತ್ತಿಲ್ಲದವರೆ ಜಾಸ್ತಿ.  ಈ ವಾಟ್ಸ್ ಅಪ್ ಯುಗದಲ್ಲಿ ಕೆಸರಿನ ಗದ್ದೆಗಿಳಿದು ತಾವೇ ನಾಟಿ ಮಾಡಿ ತಾವೇ ದುಡಿದು ತಾವೇ ಕಟಾವು ಮಾಡಿ ತಾವೇ ತಿನ್ನುವ ವಿದ್ಯಾರ್ಥಿಗಳು ಎಲ್ಲಿಯಾದ್ರು ಇದ್ರೆ ಅದು ಹಿಂದುತ್ವದ ಶಕ್ತಿಕೇಂದ್ರ ಕಲ್ಲಡ್ಕದಲ್ಲಿ ಮಾತ್ರ.

ಕನ್ನಡ ಮಾಧ್ಯಮ; ಕನ್ನಡ ಮಾಧ್ಯಮ ಅಂತ ಬಾಯಿ ಬಾಯಿ ಬಡಿದುಕೊಳ್ಳುವ ಕನ್ನಡ ಸಂಘಟನೆಗಳು ಊಟದ ವಿಷಯದಲ್ಲಿ ಕರ್ನಾಟಕದ ಅತೀ ದೊಡ್ಡ ಕನ್ನಡ ಮಾಧ್ಯಮ ಶಾಲೆಗೆ ಅನ್ಯಾಯ ಆದಾಗಂತೂ ಮಾತಾಡಲಿಲ್ಲ.. ಇವಾಗಳಾದರೂ ಬಂದು ಮಕ್ಕಳನ್ನು ಪ್ರೋತ್ಸಾಹಿಸುತ್ತೀರಾ? ಅಭಿನ0ದಿಸುತ್ತೀರಾ ಅಂತಾ ಕಾದು ನೋಡಬೇಕಿದೆ.

ಇದಕ್ಕೆಲ್ಲದ್ದಕ್ಕೂ ಮಾರ್ಗದರ್ಶಕರು ಹಿಂದುತ್ವದ ದೃವನಕ್ಷತ್ರದಂತೆ ಇರುವ  ಡಾ.ಕಲ್ಲಡ್ಕ ಪ್ರಭಾಕರ ಭಟ್ ಜಿ. ಮಕ್ಕಳೊಂದಿಗೆ ಅವರೂ ಗದ್ದೆಗಿಳಿದು ಪೈರು ಕಟಾವು ಮಾಡುತ್ತಾರೆ, ನಗು ನಗುತ್ತಾ ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸುವ ದಾರಿದೀಪ ಅವರು. ಅದರೋಂದಿಗೆ ಶಿಕ್ಷಕ ವರ್ಗದವರ ಪಾತ್ರವೂ ಅಪಾರ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter