Published On: Thu, Sep 21st, 2017

ಕರಾವಳಿ ಪ್ರಾಧಿಕಾರದ ಸದಸ್ಯಗೆ ಗುರುಪುರ ಪಂಚಾಯತಿನಲ್ಲಿ ಸನ್ಮಾನ

ಗುರುಪುರ : ಶಾಸಕರ ಪ್ರಸ್ತಾವನೆ ಮೇರೆಗೆ ಈ ಹಿಂದೆಯೇ ಕರ್ನಾಟಕ ಕರಾವಳಿ ಪ್ರಾಧಿಕಾರದಿಂದ ಪೊಳಲಿ ಮತ್ತು ಮಳಲಿಯಲ್ಲಿ 70 ಲಕ್ಷ ರೂ ವೆಚ್ಚದಲ್ಲಿ ಎರಡು ತೂಗುಸೇತುವೆ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿ ನಡೆಸಲು ತನ್ನ ಅವಧಿಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವೆ ಎಂದು ಕರಾವಳಿ ಪ್ರಾಧಿಕಾರದ ನೂತನ ಸದಸ್ಯ ಯಶವಂತ ಶೆಟ್ಟಿ ಹೇಳಿದರು.ಗುರುಪುರ ಗ್ರಾಮ ಪಂಚಾಯತ್ ವತಿಯಿಂದ ಸೆ. 21ರಂದು ಪಂಚಾಯತ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಉತ್ತರವಾಗಿ ಅವರು ಮಾತನಾಡಿದರು.YASU PHOTO

ಮಳಲಿಯಿಂದ ಪೊಳಲಿ ದೇವಸ್ಥಾನಕ್ಕೆ ಭಕ್ತರು ಹಾಗೂ ಜನಸಾಮಾನ್ಯರಿಗೆ ತೆರಳಲು ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರ ಬೇಡಿಕೆಯಾಗಿದ್ದು, ಇದಕ್ಕೆ ಸ್ಪಂದಿಸಿದ ಶಾಸಕ ಮೊೈದಿನ್ ಬಾವ, ಸರ್ಕಾರ ಹಾಗೂ ಕರಾವಳಿ ಪ್ರಾಧಿಕಾರದೊಂದಿಗೆ ಚರ್ಚಿಸಿ ಎರಡು ತೂಗು ಸೇತುವೆ ಪ್ರಸ್ತಾವಿಸಿದ್ದಾರೆ. ಸದ್ಯ ಯೋಜನೆಗೆ ಅನುದಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದ ಜಿ ಪಂ ಸದಸ್ಯ ಯು ಪಿ ಇಬ್ರಾಹಿಂ, ಯಶವಂತ ಶೆಟ್ಟಿ ಮತ್ತು ತಾನು ಕೆಲವು ವರ್ಷದಿಂದ ಕಾಂಗ್ರೆಸ್ಸಿಗಾಗಿ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಯಶವಂತ ಶೆಟ್ಟಿಯನ್ನು ಹೂಗುಚ್ಚ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾ ಪಂ ಸದಸ್ಯ ಸಚಿನ್ ಅಡಪ, ಪಿಡಿಒ ಅಬೂಬಕ್ಕರ್, ಕಾರ್ಯದರ್ಶಿ ಕೇಶವ, ಗ್ರಾ ಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಉದಯ ಭಟ್, ಸದಾಶಿವ ಶೆಟ್ಟಿ, ಪದ್ಮಿನಿ ಮತ್ತು ಇತರ ಸದಸ್ಯರು ಇದ್ದರು.

Displaying 1 Comments
Have Your Say
  1. Nawaz says:

    ಉಳಾಯಿಬೆಟ್ಟು ಪ್ರೀಮಿಯರ್ ಲೀಗ್ ಇದರ 5 ನೇ ವರ್ಷದ. UPL-2018 ಜನವರಿ ಯಲ್ಲಿ ನಡಯಲಿದೆ ಇದರ ಜವಾಬ್ದಾರಿ ಚಾರ್ ಮಿನಾರ್ ಸ್ಪೊರ್ಟ್ಸ್ ಕ್ಲಬ್ (ರಿ)ಹೊಯ್ಸಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter