Published On: Thu, Aug 10th, 2017

ಕಲ್ಲಡ್ಕ ಶಾಲಾ ಅನುದಾನ ರದ್ದು ,ಪ್ರತಿಭಟನೆ

ಬಂಟ್ವಾಳ: ಕೊಲ್ಲೂರು ಮುಕಾಂಬಿಕದೇವಾಲಯದಿಂದ ದತ್ತು ಯೋಜನೆಯಡಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಕಳೆದ ಹತ್ತು ವರ್ಷದಿಂದ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಗೊಳಿಸಿ ಬಡ ಮಕ್ಕಳ ಅನ್ನಕ್ಕೆ ಕಲ್ಲು ಹಾಕಿದ ಸರಕಾರದ ಕ್ರಮದ ವಿರುದ್ದ ಗರಂ ಆಗಿರುವ ವಿದ್ಯಾರ್ಥಿಗಳ ಪೋಷಕರು ಇಂದು (ಅ.11) ಬೆಳಿಗ್ಗೆ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ಅನುದಾನ ರದ್ದುಗೊಂಡ ಎರಡು ಶಾಲೆಯ ವಿದ್ಯಾರ್ಥಿಗಳು ಹಾಗೂ ಅವರ ಪೆಷಕರು ಪ್ರತಿಭಟನೆ ನಡೆಸಲಿದ್ದೆವೆ ಎಂದು ಪೆಷಕರಾದ ಶೋಭಾ,ನಳಿನಿ,ಅಬ್ದುಲ್ ಹಕೀಂರವರು ಗುರುವಾರ ಬಿ.ಸಿ.ರೋಡಿನ ಪ್ರಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 1 (1)
ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಸುಮಾರು 2,128 ವಿದ್ಯಾರ್ಥಿಗಳಿಗೆ ನಿರಂತರವಾಗಿ ಬಿಸಿಯೂಟ,ಸಮವಸ್ತ್ರ,ಉಚಿತಪಠ್ಯಪುಸ್ತಕಗಳನ್ನು ನೀಡಲಾಗುತ್ತಿದೆ. 2007ರಿಂದ ಕೊಲ್ಲೂರು ದೇವಾಲಯದಿಂದ ದತ್ತು ಯೋಜನೆಯಡಿ ಕಾನೂನುಬದ್ದವಾಗಿ ಆರ್ಥಿಕ ಸಹಾಯಧನ ನೀಡಲಾಗುತ್ತಿದ್ದು,ಸಿದ್ದರಾಮಯ್ಯ ನೇತ್ರತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕವೂ ನಾಲ್ಕವರೆ ವರ್ಷದವರೆಗೂ ಮುಂದುವರಿದಿತ್ತು.ಆದರೆ ಇದೀಗ ಹಠಾತ್ತನೆ ಕಲ್ಲಡ್ಕ ಮತ್ತು ಪುಣಚ ಶಾಲೆಯ ಅನುದಾನ ರದ್ದು ಗೊಳಿಸಿರುವುದು ಖಂಡನೀಯವಾಗಿದೆ ಎಂದರು. ಈ ವಿದ್ಯಾ ಸಂಸ್ಥೆಗಳಲ್ಲಿ ಶೇ94 ರಷ್ಟು ವಿದ್ಯಾರ್ಥಿಗಳು ಬಡ,ಹಿಂದುಳಿದ,ಪ.ಜಾ.ಪಂ.ಕ್ಕೆ ಸೇರಿದ ಅಹಿಂದ ವಿದ್ಯಾರ್ಥಿಗಳೇ ವಿದ್ಯಾರ್ಜನೆ ಮಾಡುತ್ತಿದ್ದಾರೆ. ರಾಜ್ಯದ 52 ಶಾಲೆಗಳಿಗೆ ಈ ರೀತಿಯಾಗಿ ಅನುದಾನ ನೀಡಲಾಗುತ್ತದ್ದು ಇದೀಗ ರಾಜಕೀಯ ದ್ವೇಷಕ್ಕಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಈ ಎರಡು ಶಾಲೆಗೆ ಬರುತ್ತಿದ್ದ ಅನುದಾನವನ್ನು ಮಾತ್ರ ರದ್ದುಗೊಳಿಸಿರುವುದು ಕನ್ನಡ ಶಾಲೆಯ ಮೇಲಿನ ದೌರ್ಜಜನ್ಯವಾಗಿದೆಯಲ್ಲದೆ ಸರಕಾರದ ಈಅಮಾನವೀಯ ಕ್ರಮ ಮಕ್ಕಳ ಶಿಕ್ಷಣ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದರು. ಮಕ್ಕಳ ಹಕ್ಕುಗಳ ಬಗ್ಗೆ ಭಾಷಣ ಬಿಗಿಯುವವರು ಈಗ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದ ಅವರು ಸರಕಾರ,ಸಚಿವರ ದ್ವೇಷದ ಮತ್ತು ನೀಚ ರಾಜಕಾರಣದಿಂ ದೇವರ ಪ್ರಸಾದ ರೂಪದ ಅನ್ನಕ್ಕೆ ಕಲ್ಲು ಹಾಕಿ ಹೊರಡಿಸಿದ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು ಇಲ್ಲದಿದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ವಿದ್ಯಾರ್ಥಿಗಳಾದ ಅಖಿಲಾ,ಭವ್ಯಶ್ರೀ,ರಾಜೀವಿ,ನ್ಯಾಯವಾದಿ ಆಶಾ ಪ್ರಸಾದ್ ರೈ ಮೊದಲಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter