Published On: Thu, Jun 8th, 2017

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ : ಶಾಲಾ ನಾಯಕನಾಗಿ ವೈಭವ್ ವಿ. ರಾವ್ ಆಯ್ಕೆ.

ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 10ನೇ ತರಗತಿಯ ವೈಭವ್ ವಿ. ರಾವ್ ವಿದ್ಯಾರ್ಥಿ ನಾಯಕನಾಗಿ ಹಾಗೂ 9 ನೇ ತರಗತಿಯ ವಿಜೇತ್ ಕೆ. ಎಂ. ಉಪನಾಯಕನಾಗಿ ಬಹುಮತದಿಂದ ಆಯ್ಕೆಗೊಂಡಿದ್ದಾರೆ.

IMG_1542
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಯೋಗಿಕ ಅರಿವು ಮೂಡಿಸುವ ಹಿನ್ನಲೆಯಲ್ಲಿ ವಿದ್ಯುನ್ಮಾನ ಮತ ಯಂತ್ರ ಬಳಸಿಕೊಂಡು ವಿದ್ಯಾರ್ಥಿ ನಾಯಕರ ಆಯ್ಕೆಗೆ ಚುನಾವಣೆ ನಡೆಸಲಾಯಿತು.
ಮತಯಂತ್ರದ ಬಳಕೆ, ಅಭ್ಯರ್ಥಿಗಳಿಗೆ ಚಿಹ್ನೆ ನೀಡಿಕೆ , ಚುನಾವಣಾ ಅಧಿಕಾರಿಗಳ ವಿಶೇಷ ನಿಗಾ ವ್ಯವಸ್ಥೆ, ಮತಗಟ್ಟೆ ಅಧಿಕಾರಿಗಳ ನೇಮಕ, ಶಿಸ್ತುಪಾಲನೆಗೆ ಅಧಿಕಾರಿಗಳು ಮೇಲ್ವಿಚಾರಕರು, ಮತದಾರರಿಂದ ಮತದಾನ , ಮತಎಣಿಕೆ, ವಿಜೇತ ಅಭ್ಯರ್ಥಿಗಳ ಘೋಷಣೆ ಹೀಗೆ ಎಲ್ಲವೂ ಶಿಸ್ತುಬದ್ಧವಾಗಿ ನಡೆಯಿತು.

IMG_1538

IMG_1544
ಮುಖ್ಯ ಚುನಾವಣಾಧಿಕಾರಿಯಾಗಿ ಸಿ. ಶ್ರೀಧರ್, ಚುನಾವಣಾ ಅಧಿಕಾರಿಗಳಾಗಿ ವಿಜಯಲಕ್ಷ್ಮೀ .ವಿ . ಶೆಟ್ಟಿ ಹಾಗೂ ಗ್ರೇಸ್ ಪಿ ಸಲ್ಡಾನ ಕಾರ್ಯನಿರ್ವಹಿಸಿದರು. ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕಿಯರಾದ ಮೋಹಿನಿ ಎ. ರೈ , ಮಂಜುಳಾ ಎಚ್. ಗೌಡ , ಸುಧಾ ಎನ್. ರಾವ್, ಯಜ್ಞೇಶ್ವರಿ ಎಸ್. ಶೆಟ್ಟಿ, ರಶ್ಮಿ ಫೆರ್ನಾಂಡಿಸ್, ಶುಭಾ, ಲೀಲಾ ಹಾಗೂ ಪ್ರಸಾದ್, ಶಿಸ್ತು ಪಾಲಕರಾಗಿ ದಿನಕರ್ ಪೂಜಾರಿ, ವಿಶಾಲಾಕ್ಷಿ ಎಚ್. ಆಳ್ವ ಹಾಗೂ ರಾಮಚಂದ್ರ ಅಜಿರವರು ಕಾರ್ಯನಿರ್ವಹಿಸಿದರು. ಸಂಚಾಲಕ ಪ್ರಹ್ಲಾದ್ ಜೆ ಶೆಟ್ಟಿ ಮಾರ್ಗದರ್ಶನ ನೀಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter