Published On: Mon, Jun 5th, 2017

ಎಸ್.ವಿ.ಎಸ್. ವಿದ್ಯಾರ್ಥಿನಿಯರಿಗೆ ಗೌರವಾರ್ಪಣೆ

ಬಂಟ್ವಾಳ: ವಿದ್ಯಾಗಿರಿ ಬಂಟ್ವಾಳದ ಎಸ್.ವಿ.ಎಸ್. ಇಂಗ್ಲೀಷ್ ಸ್ಕೂಲ್ ನಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಗೌರವಾರ್ಪಣೆ ಮಾಡಲಾಯಿತು.5bhsvsschool

ಪಲ್ಲವಿ ಡಿ. ಶೆಟ್ಟಿ ಅವರಿಗೆ ಚಿನ್ನದ ಪದಕವನ್ನೂ, ಮೈನಾ ಅಂಜುಮ್ ಕೆ.ಕೆ. ಮತ್ತು ಐಶ್ವರ್ಯ ಅವರಿಗೆ ನಗದು ಬಹುಮಾನವನ್ನು ಶಿಕ್ಷಣ ಪ್ರೇಮಿ ವಿಠಲ ಕೇಶವ ಪ್ರಭು ನೀಡಿ ಆಶೀರ್ವದಿಸಿದರು. ಕಳೆದ ಶೈಕ್ಷಣಿಕ ವರ್ಷದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಯೋಜನೆಯನ್ನು ಮುಂದುವರಿಸುವದರ ಜತೆಗೆ ವಿದ್ಯಾರ್ಥಿಗಳು ದೃಢ ನಿಷ್ಠೆಯಿಂದ ಕರ್ತವ್ಯ ನಿರತರಾದಾಗ ಅಸಾಧ್ಯವಾದುದು ಯಾವುದೂ ಇಲ್ಲವೆಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ. ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಭಾಮಿ ವಿಠಲದಾಸ್ ಶೆಣೈ, ಸುಜಾತ, ಐತಪ್ಪ ಪೂಜಾರಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಸೋಮನಾಥ ಭಟ್ ಸ್ವಾಗತಿಸಿ, ಜಯಶ್ರೀ ಪೂಂಜ ವಂದಿಸಿದರು.

 

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter