Published On: Mon, Jun 5th, 2017

‌ಹಿಂದೂ ಜಾಗರಣ ವೇದಿಕೆ ಉಚಿತ ಪುಸ್ತಕ ವಿತರಣೆ

ಬಂಟ್ವಾಳ: ‌ಹಿಂದೂ ಜಾಗರಣ ವೇದಿಕೆ ಕಾವಳ ಪಡೂರು ಮಂಡಲದ ವತಿಯಿಂದ 93 ವರ್ಷ ಇತಿಹಾಸವಿರುವ ಬಂಟ್ವಾಳ ತಾಲೂಕಿನ ಕಾಡಬೆಟ್ಟು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು . ಹಿಂದೂಜಾಗರಣವೇದಿಕೆ ತಾಲೂಕು ಸಹಸಂಚಾಲಕ ರಮೇಶ್ ಕುಮಾರ್ ವಗ್ಗ ಅವರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಳಿವಿನಂಚಿನಲ್ಲಿರುವ 93 ವರ್ಷ ಇತಿಹಾಸವಿರುವ ಕಾಡಬೆಟ್ಟು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರು ಪಕ್ಷಭೇದ ಮರೆತು ಪ್ರಯತ್ನಿಸಬೇಕು ಎಂದರು.IMG-20170604-WA0010

ವಿದ್ಯಾಭ್ಯಾಸವನ್ನು ವ್ಯವಹಾರವನ್ನಾಗಿ ಕಂಡುಕೊಂಡಿರುವ ಕಾರ್ಪೊರೇಟ್ ಸಂಸ್ಥೆಗಳಿಗೆ ಸಮನಾಗಿ ಸರಕಾರಿ ಶಾಲೆಗಳನ್ನು ಕೂಡ ಬೆಳೆಸುವ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಂಡು ಹಳ್ಳಿಯ ಕಟ್ಟಕಡೆಯ ಬಡವಿದ್ಯಾರ್ಥಿಗಳಿಗೂ ಕೂಡ ಉತ್ತಮ ವಿದ್ಯಾಭ್ಯಾಸ ಸಿಗುವ ನಿಟ್ಟಿನಲ್ಲಿ ಸರಕಾರೀ ಶಾಲೆಗನ್ನು ಉಳಿಸಿ ಬೆಳೆಸಬೇಕೆಂದ ಅವರು ವಿದ್ಯಾರ್ಥಿ ಗಳು ಉತ್ತಮ ವಿದ್ಯಾಭ್ಯಾಸದೊಂದಿಗೆ ತಮ್ಮನ್ನು ತಾವು ದೇಶನಿರ್ಮಾಣದ ಕಾರ್ಯದೊಂದಿಗೆ ತೊಡಗಿಸಿಕೊಳ್ಳಬೇಕೆಂದರು. ಈ ಶುಭಸಂದರ್ಭದಲ್ಲಿ ಹಿಂದೂಜಾಗರಣವೇದಿಕೆ ಪ್ರಮುಖರಾದ ಶರತ್ ಕುಮಾರ್ , ಪ್ರಸಾದ್ ಕುಮಾರ್ ನಮಿತ್ ಬೊಲ್ಲೊಟ್ಟು ,ಅರುಣ್ ಕುಮಾರ್, ಶಾಲಾಭಿವೃದ್ಧಿ ಸಮೀತಿ ಅಧ್ಯಕ್ಷ ರಮೇಶ ನಾಯಕ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಾಯಿನಿ, ಶಿಕ್ಷಕ ವೃಂದ,ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter