Published On: Mon, Dec 12th, 2016

ಬೋಂಬೆ ಬಂಟ್ಸ್ ಅಸೋಸಿಯೇಶನ್ ಮುಂಬಯಿ ವಾರ್ಷಿಕ ಸ್ನೇಹ ಸಮ್ಮಿಲನ

ಮುಂಬಯಿ: ಬೋಂಬೆ ಬಂಟ್ಸ್ ಅಸೋಸಿಯೇಶನ್ ಮುಂಬಯಿ ವಾರ್ಷಿಕ ಸ್ನೇಹ ಸಮ್ಮಿಲನವನ್ನು ಕಳೆದ ಶನಿವಾರ ನವಿಮುಂಬಯಿ ಅಲ್ಲಿನ ಜೂಯಿ ನಗರದಲ್ಲಿನ ಬಂಟ್ಸ್ ಸೆಂಟರ್‍ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಅದ್ದೂರಿಯಾಗಿ ನೇರವೇರಿಸಲ್ಪಟ್ಟಿತು. ಅಸೋಸಿಯೇಶನ್‍ನ ಅಧ್ಯಕ್ಷ ನ್ಯಾಯವಾದಿ ಉಪ್ಪೂರು ಶೇಖರ್ ಶೆಟ್ಟಿ ಸಾರಥ್ಯ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಲೆಮಿನಾ ಸಮೂಹದ ಆಡಳಿತ ನಿರ್ದೇಶಕ ನಿಟ್ಟೆ ವಿನಯ್ ಹೆಗ್ಡೆ ಸಭಾಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ ಸಭಾಕಾರ್ಯಕ್ರಮಕ್ಕೆ ಚಾಲನೆಯನ್ನೀಡಿದರು. ಮುಖ್ಯ ಅತಿಥಿಯಾಗಿ ಭಾರತ ಸರಕಾರದ ಶಿಪ್ಪಿಂಗ್ ಪ್ರಾಧೀಕಾರದ ಡೈರೆಕ್ಟರ್ ಜನರಲ್ ದೀಪಕ್ ಶೆಟ್ಟಿ ಉಪಸ್ಥಿತರಿದ್ದರು.

bba-1

bba-6
bba-8

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಅವೆನ್ಯೂ ಹೊಟೇಲು ಸಮೂಹದ ರಘುರಾಮ ಕೆ. ಶೆಟ್ಟಿ, ಅಸೋಸಿಯೇಶನ್‍ನ ಟ್ರಸ್ಟಿ, ಮಾಜಿ ಅಧ್ಯಕ್ಷ ಬಾಬು ಎನ್.ಶೆಟ್ಟಿ, ರಿಜೆನ್ಸಿ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಜಯರಾಮ ಎನ್.ಶೆಟ್ಟಿ, ಸೋನಿ ಸ್ಟೀಲ್ ಆ್ಯಂಡ್ ಅಪ್ಲಯನ್ಸಸ್‍ನ ಆಡಳಿತ ನಿರ್ದೇಶಕ ಪಾಂಡುರಂಗ ಎಸ್.ಶೆಟ್ಟಿ ದಂಪತಿ ಮತ್ತಿತರನ್ನು ಅತಿಥಿಗಳು ಸನ್ಮಾನಿಸಿ ಅಭಿನಂದಿಸಿದರು ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಶುಭಾರೈಸಿದರು.

bba-2

bba-3

ಇದೇ ಶುಭಾವಸರದಲ್ಲಿ ಅಸೋಸಿಯೇಶನ್‍ನ ಯುವ ವಿಭಾಗವು ಮ್ಯಾಕಾೈ ಪ್ರಾಯೋಜಕತ್ವದಲ್ಲಿ ನಡೆಸಲ್ಪಟ್ಟ ಬಂಟ್ಸ್ ಶ್ರೀಮಾನ್-ಶ್ರೀಮತಿ2016 ಸ್ಪರ್ಧೆಯಲ್ಲಿ ಸದಾನಂದ ಶೆಟ್ಟಿ ಮತ್ತು ಗೀತಾ ಎಸ್.ಶೆಟ್ಟಿ ದಂಪತಿ `ಬಂಟ್ಸ್ ಶ್ರೀಮಾನ್-ಶ್ರೀಮತಿ 2016′ ವಿಜೇತರೆಣಿಸಿದರು. ಭಾಗ್ಯ ಪ್ರಸಾದ್ ಶೆಟ್ಟಿ ಮತ್ತು ಸುಚಿತ್ರಾ ಬಿ.ಶೆಟ್ಟಿ ದಂಪತಿ ಜನಪ್ರಿಯ ದಂಪತಿ (ಪಾಪ್ಯುಲರ್ ಕಪಲ್) ಮಾನ್ಯತೆಗೆ ಪಾತ್ರರಾದರೆ, ಯೋಗೇಶ್ ಶೆಟ್ಟಿ ಮತ್ತು ಆರತಿ ವೈ.ಶೆಟ್ಟಿ ದಂಪತಿ ಪ್ರಥಮ ರನ್ನರ್ಸ್ ಹಾಗೂ ನಾರಾಯಣ ಶೆಟ್ಟಿ ನಂದಳಿಕೆ ಮತ್ತು ಶಾಂತ ಎನ್.ಶೆಟ್ಟಿ ದಂಪತಿ ದ್ವಿತೀಯ ರನ್ನರ್ಸ್ ಸ್ಥಾನಕ್ಕೆ ಭಾಜನರಾದರು. ನವೀನ್‍ಚಂದ್ರ ಶೆಟ್ಟಿ ಮತ್ತು ತ್ರಿವೇಣಿ ಎಸ್.ಶೆಟ್ಟಿ, ಗಣೇಶ್ ಎಸ್.ಶೆಟ್ಟಿ ಮತ್ತು ಗೀತಾ ಜಿ.ಶೆಟ್ಟಿ, ಅಶೋಕ್ ಶೆಟ್ಟಿ ಮತ್ತು ಜ್ಯೋತಿ ಎ.ಶೆಟ್ಟಿ, ಅಮರ್‍ನಾಥ ಶೆಟ್ಟಿ ಮತ್ತು ಶೈಲಶ್ರೀ ಎ.ಶೆಟ್ಟಿ ದಂಪತಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಅವರನ್ನು ಗೌರವಿಸಲಾಯಿತು. ನಿತೇಶ್ ಶೆಟ್ಟಿ ಎಕ್ಕಾರು ಮತ್ತು ಸ್ಮೃತಿ ಬಾಲಕೃಷ್ಣ ಶೆಟ್ಟಿ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು. ಯುವ ವಿಭಾಗೀಯ ತಂಡದ ಹಾಡಿನೊಂದಿಗೆ ಸ್ಪರ್ಧೆ ಸಮಾಪನ ಗೊಂಡಿತು.

bba-10

bba-9

ವೈವಾಹಿಕ ಜೀವನದ ಸ್ವರ್ಣಮಹೋತ್ಸವ ಸಂಭ್ರಮಿಸಿದ ದಂಪತಿಗಳಾದ ಜಯಂತಿ ನಾರಾಯಣ ಶೆಟ್ಟಿ (ಎಟುಝೆಡ್), ವಾರಿಜ ಚಂದ್ರಶೇಖರ ಶೆಟ್ಟಿ, ಸುಶೀಲ ಸಂಜೀವ ಶೆಟ್ಟಿ, ಶಾಲಿನಿ ಶಿವರಾಮ ಶೆಟ್ಟಿ, ವಿಮಲಾ ರಾಮಕೃಷ್ಣ ಶೆಟ್ಟಿ, ಪುಷ್ಫ ಕೃಷ್ಣ ಸಿ.ಶೆಟ್ಟಿ, ವಾರಿಜ ರಾಘು ಪಿ.ಶೆಟ್ಟಿ, ವಸಂತಿ ಭುಜಂಗ ಶೆಟ್ಟಿ, ವಿೂನಾ ಐತಪ್ಪ ಶೆಟ್ಟಿ, ಇಂದಿರಾ ಭಾಸ್ಕರ್ ಶೆಟ್ಟಿ ಹಾಗೂ ಎ.ಬಿ ಶೆಟ್ಟಿ ಹಾಗೂ ಸ್ಪರ್ಧಾ ಪ್ರಾಯೋಜಕರುಗಳಾದ ರಿಲೈಬಯಲ್ ಸಮೂಹದ ಶಕುಂತಲಾ ಸದಾನಂದ ಆರ್.ಶೆಟ್ಟಿ, ವಿ.ಕೆ ಸಮೂಹದ ನಿರ್ದೇಶಕ ಧೀರಾಜ್ ಕರುಣಾಕರ ಶೆಟ್ಟಿ, ವಿಶೇಷ ಅತಿಥಿü ಚಿತಾ ಜಯ್ಞೇಶ್ ಶೆಟ್ಟಿ ಅವರನ್ನು ಅಸೋಸಿಯೇಶನ್‍ನ ಪದಾಧಿಕಾರಿಗಳು ಸ್ಪರ್ಧಾ ಮಧ್ಯಾಂತರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಆಶಾ ಎಸ್.ಶೆಟ್ಟಿ ಸನ್ಮಾನಿತ ದಂಪತಿಗಳನ್ನು ಪರಿಚಯಿಸಿದರು.

bba-5

ಅಸೋಸಿಯೇಶನ್‍ನ ಉಪಾಧ್ಯಕ್ಷ ನ್ಯಾಯವಾದಿ ಸುಭಾಷ್ ಬಿ.ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ| ವಿಶ್ವನಾಥ ಎಸ್.ಶೆಟ್ಟಿ, ಜತೆ ಕಾರ್ಯದರ್ಶಿ ಕರುಣಾಕರ ಎಂ.ಶೆಟ್ಟಿ, ಜತೆ ಕೋಶಾಧಿಕಾರಿ ಶ್ಯಾಮಸುಂದರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಜೆ.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ವೈಶಾಲಿ ಕೆ.ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದರು. ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ಚರಣ್ ಶೆಟ್ಟಿ, ಗೌ| ಕಾರ್ಯದರ್ಶಿ ಸನ್ನಿಧಿ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರುತಿ ಶೆಟ್ಟಿ ಮತ್ತು ಕೋಶಾಧಿಕಾರಿ ಧನಂಜಯ ಶೆಟ್ಟಿ, ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷರುಗಳಾದ ತೋಕುರುಗುತ್ತು ಭಾಸ್ಕರ ಶೆಟ್ಟಿ, ಜಯರಾಮ ಜೆ.ಮಲ್ಲಿ, ಎನ್.ಸಿ ಶೆಟ್ಟಿ, ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ನ್ಯಾ| ಆನಂದ್ ವಿ.ಶೆಟ್ಟಿ, ಜಯ ಎನ್.ಶೆಟ್ಟಿ, ಜಯಂತ್ ಕೆ.ಶೆಟ್ಟಿ, ನ್ಯಾ| ರತ್ನಾಕರ ವಿ.ಶೆಟ್ಟಿ, ಶ್ಯಾಮ ಎನ್.ಶೆಟ್ಟಿ ಹಾಗೂ ಇತರ ಪದಾಧಿಕಾರಿ ಸದಸ್ಯರು, ಯುವ ವಿಭಾಗ, ಮಹಿಳಾ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದು, ಮಹಿಳೆಯರು ಫ್ಯಾಶನ್‍ಶೋ ಪ್ರಸ್ತುತ ಪಡಿಸಿದ್ದು, ಯುವ ವಿಭಾಗವು ನೃತ್ಯಾವಳಿ, ಪ್ರಹಸನ ಪ್ರದರ್ಶಿಸಿದರು. ಅನ್ವೇಷ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ರಾಜೀವ್ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

bba-7

ವಿನಾಯಕ ಸ್ತುತಿಯೊದಿಗೆ ಕಾರ್ಯಕ್ರಮ ಆದಿಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಅಶೋಕ್ ಡಿ.ಶೆಟ್ಟಿ ಸ್ವಾಗತಿಸಿದರು. ಗೀತಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ವೈಶಾಲಿ ಕೆ.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಬಾಬಾ ಪ್ರಸಾದ್ ಅರಸ ಸಭಾ ಕಾರ್ಯಕ್ರಮ ನಿರೂಪಿಸಿದರು. ಗೌ| ಪ| ಕಾರ್ಯದರ್ಶಿ ಸಿಎ| ಸುರೇಂದ್ರ ಕೆ.ಶೆಟ್ಟಿ ವಂದಿಸಿದರು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

Displaying 1 Comments
Have Your Say
  1. Pradeep shetty says:

    Super

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter