Published On: Fri, Dec 26th, 2014

ಈ ಕಲಿಯುಗದಲ್ಲೂ ದೇವತೆಗಳು ಇದ್ದಾರೆ ಎಂದರೆ ನಂಬುವಿರಾ?

ಡಿಸೆಂಬರ್ 12, ಶುಕ್ರವಾರದಂದು ನಿವೃತ್ತ ಹಿರಿಯ ನಾಗರಿಕರಾದ ಪಾಂಗಾಳ ಸುರೇಶ್ ನಾಯಕ್ ತಮ್ಮ ಪತ್ನಿ ಸಮೀನ ಜತೆ ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿದ್ದರು. ಆದರೆ ದಾರಿ ನಡುವೆ ಅವರ ಕಾರಿನ ಆರ್ಸಿ (ರೆಜಿಸ್ಟ್ರೇಷನ್ ಸರ್ಟಿಫಿಕೇಟ್) ಕಳೆದು ಹೋಯಿತು. ಅದನ್ನು ಹುಡುಕುವ ಅವರ ಎಲ್ಲಾ ಪ್ರಯತ್ನಗಳು ವಿಫಲವಾದವು.

Suresh_Nayak
ಈ ವಿಚಾರವಾಗಿ ಅವರು ಚಿಂತೆಯಲ್ಲಿದ್ದಾಗ, ಮರುದಿನ ಅಂದರೆ ಡಿಸೆಂಬರ್ 13, ಶನಿವಾರ ಅಶ್ವಥ್ ಮತ್ತು ವಿನೋದ್ ಹೆಸರಿನ ಇಬ್ಬರು ಯುವಕರು ಅವರ ಮನೆಗೆ ಬಂದು, ಅವರ ಕಳೆದುಹೋಗಿದ್ದ ಆರ್ಸಿಯನ್ನು ಅವರ ಕೈಗಿತ್ತರು!
ಈ ಯುವಕರು ಆರ್ಸಿಯನ್ನು ಆರ್ಟಿಒ ಕಚೇರಿಯ ಪಕ್ಕದಲ್ಲಿ ಬಿದ್ದಿರುವುದನ್ನು ನೋಡಿ ಅದನ್ನು ಕೈಗೆತ್ತಿಕೊಂಡಿದ್ದರು. ಯಾರೋ ಈ ಆರ್ಸಿಯನ್ನು ಕಳೆದುಕೊಂಡಿದ್ದಾರೆಂದು ತಿಳಿದು ಅದರ ವಾರಸುದಾರರನ್ನು ಪತ್ತೆಹಚ್ಚಲು ಬಹಳ ಶ್ರಮಿಸಿದ್ದರು. ಆರ್ಸಿಯಲ್ಲಿ ಮನೆಯ ವಿಳಾಸವನ್ನು ನಮೂದಿಸಿದ್ದರೂ ಅದನ್ನು ಪತ್ತೆಹಚ್ಚುವ ಕಾರ್ಯ ಬಹಳ ತ್ರಾಸದಾಯಕವಾಗಿತ್ತು. ಆದರೂ ಈ ಆಪತ್ಬಾಂಧವರು ತಮ್ಮ ಪ್ರಯತ್ನವನ್ನು ಕೈಬಿಡದೆ ಕೊನೆಗೂ ಮನೆಯನ್ನು ಪತ್ತೆಹಚ್ಚುವಲ್ಲಿ ಸಫಲರಾದರು.
ಆರ್ಸಿಯನ್ನು ತಮಗೆ ಮರಳಿಸಿದ ಯುವಕರಿಗೆ ನಾಯಕ್ ದಂಪತಿಗಳು ಮನ:ಪೂರ್ವಕವಾಗಿ ಕೃತಜ್ಞತೆ ಹೇಳಿ ಅವರ ಕಾರ್ಯವನ್ನು ಕೊಂಡಾಡಿದರು.
“ಭ್ರಷ್ಟಾಚಾರ ಮತ್ತು ವಂಚನೆ ಹಾಸುಹೊಕ್ಕಾಗಿರುವ ಈಗಿನ ಸಮಾಜದಲ್ಲಿ ಇಂತಹ ಚಾರಿತ್ರ್ಯವಂತ, ಪ್ರಾಮಾಣಿಕ ಯುವಕರು ತಮ್ಮಂತಹ ಇತರ ಯುವಕರಿಗೆ ಮತ್ತು ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ,” ಎಂದು ಕಳೆದು ಹೋದ ಆರ್ಸಿ ಮರಳಿ ಸಿಕ್ಕ ಸಂತಸದಲ್ಲಿ ಸುರೇಶ್ ನಾಯಕ್ ಹೇಳಿದರು.
-ಮಹೇಶ್ ನಾಯಕ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter