ಬಿಕೋ ಎನ್ನುತ್ತಿರುವ ಶೃಂಗೇರಿ! ನಂದಿತಾ ಸಾವನ್ನು ಖಂಡಿಸಿ ಬಂದ್ಗೆ ಬೆಂಬಲ
ಚಿಕ್ಕಮಗಳೂರು: ತೀರ್ಥಹಳ್ಳಿಯ ಶಾಲಾ ಬಾಲಕಿ ನಂದಿತಾ ಪೂಜಾರಿ ಶಂಕಾಸ್ಪದ ಸಾವಿನ ಹಿನ್ನೆಲೆಯಲ್ಲಿ ಮಂಗಳವಾರ ಕರೆ ನೀಡಿದ್ದ ಶೃಂಗೇರಿ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಶೃಂಗೇರಿ ಮುಖ್ಯರಸ್ತೆ ಬಿಕೋ ಎನ್ನುತ್ತಿದ್ದು, ವಾಹನಗಳು ಸಂಚಾರವನ್ನು ಸಂಪೂರ್ಣ ನಿಲ್ಲಿಸಿವೆ. ಅಂಗಡಿ-ಮುಂಗಟ್ಟುಗಳು ಮುಂಜಾನೆಯಿಂದಲೇ ತೆರೆದಿರಲಿಲ್ಲ.
ನಂದಿತಾ ಸಾವಿಗೆ ಕಾರಣರಾದವರನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ರಕ್ಷಿಸುತ್ತಿದೆ ಎಂದು ಆರೋಪಿಸಿ ಮಂಗಳವಾರ ಶೃಂಗೇರಿ ಬಂದ್ಗೆ ಕರೆ ನೀಡಲಾಗಿತ್ತು. ಮುಂಜಾನೆ ಶೃಂಗೇರಿ ಶಾರದಾಂಬ ದೇಗುಲದ ಸಮೀಪ ಜಮಾಯಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸರಕಾರ, ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಯನ್ನು ಕೂಗಿದರು.
ಬಳಿಕ ಶೃಂಗೇರಿ ಪೇಟೆಯಲ್ಲಿ ಮೆರವಣಿಗೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪೊಲೀಸರಿಗೆ ಮನವಿ ಮಾಡಲಾಯಿತು. ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಭಾಗವಹಿಸಿದ್ದರು.