Published On: Tue, Feb 4th, 2020

ದೆಪ್ಪುಣಿ ಗುತ್ತಿನ ಯಕ್ಷ ಮಹಾಯಜ್ನ

ಯಜ್ನಎನ್ನುವುದುತ್ಯಾಗಭೂಯಿಷ್ಟವಾದಒಂದು ಶ್ರೇಷ್ಠಕರ್ಮ.ಕಳೆದ ಅರುವತ್ತುವರ್ಷಗಳಿಂದ ಇಂತಹ ಮಹಾನ್‍ಕಾರ್ಯದಲ್ಲಿ ತೊಡಗಿಸಿಕೊಂಡು, ಕಟೀಲುತಾಯಿಗೆ ಸರ್ವಸಮರ್ಪಣಾ ಭಾವದಿಂದಯಕ್ಷಸೇವೆಯನ್ನು ನೀಡುತ್ತಾ ಬರುತ್ತಿರುವತ್ಯಾಗಿಮನೆತನದೆಪ್ಪುಣಿಗುತ್ತಿನ ಮನೆತನ. ಸೇವಾವರುಷಗಳ ಸಂಖ್ಯೆಅರುವತ್ತಾದರೂ ಸೇವೆಯ ಸಂಖ್ಯೆ ಶತಕವನ್ನುದಾಟುತ್ತದೆ.ಈ ಸೇವೆಯ ಹಿಂದೆಅಹಂಕಾರಇಲ್ಲ, ಬಿಗುಮಾನಇಲ್ಲ. ಇರುವುದು ಕೇವಲ ಬಾಗುವಿಕೆ ಮಾತ್ರ.ಇದುವೇ ಈ ನಿರಂತರತೆಯಗುಟ್ಟು.

IMG-20200204-WA0013
ಒಂದುಕಾಲದಲ್ಲಿ ಕಲೆಸಾಹಿತ್ಯಗಳೆಲ್ಲ ರಾಜಾಶ್ರಯಕ್ಕೆ ಒಳಪಟ್ಟಿದ್ದವು.ಇಂದಿನ ಪ್ರಜಾಪ್ರಭುತ್ವದ ದಿನಗಳಲ್ಲಿ ಯಕ್ಷಗಾನದಂತಹ ಕಲೆಗಳಿಗೆ ಮಹಾಪ್ರೇಷಣೆದೊರಕುತ್ತಿರುವುದುದೆಪ್ಪುಣಿ, ಕಲ್ಲಾಡಿಯಂತಹ ಮನೆತನಗಳಿಂದ.ಇಲ್ಲದೇಇದ್ದಲ್ಲಿ ರಾಜಮನೆತನಗಳು ಮರೆಯಾದ ಹಾಗೆ ಸಹಸ್ರಾರು ಕಲೆಗಳೂ ವಿನಾಶವಾಗಿ ಹೋಗುತ್ತಿದವೋ ಎನೋ.ಅವಿನಾಶಿಯಾದ ಈ ಕಲೆಗಳಿಗೆ ವರ್ತಮಾನಕಾಲದಲ್ಲಿ ಆಶ್ರಯತಾಣವಾಗಿ ದೇವರು ಆಯ್ದುಕೊಂಡದ್ದುದೆಪ್ಪುಣಿಯಂತಹ ನೂರಾರು ಮನೆತನಗಳನ್ನು.ಸಂದ ಅರುವತ್ತು ವರುಷಗಳ ಮಹಾಯಜ್ನದಲ್ಲಿ ಕರ್ತೃಗಳಾಗಿ ಸಾರ್ಥಕ್ಯತೆಯನ್ನು ಪಡಕೊಂಡ ತಲೆಗಳು ಅನೇಕ.ದೆಪ್ಪುಣಿಗುತ್ತು ಮತ್ತುಕಟೀಲು ಮೇಳಗಳ ಅವಿನಾಭಾವ ಸಂಬಂಧಕೇವಲ ಅರುವತ್ತಕ್ಕೆ ಸೀಮಿತವಾಗುವುದಿಲ್ಲ, ಬದಲಾಗಿ 120 ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

01

ಕೊಡೆತ್ತೂರುಗುತ್ತು ದಿ.ರಾಮಣ್ಣ ಶೆಟ್ರು 1880 ರಿಂದ 1920ರ ತನಕಕಟೀಲು ದೇವಳದ ಮೊದಲ ಆಡಳಿತ ಮೊಕ್ತೇಸರರು.ಅವರುದೆಪ್ಪುಣಿಗುತ್ತುದೇವಕಿ ಶೆಟ್ಟಿಯವರನ್ನು ವಿವಾಹವಾಗಿ ದೆಪ್ಪುಣಿಗೇ ಸ್ಥಳಾಂತರಗೊಂಡರು.ಅಲ್ಲಿಯೇಕೊಡೆತ್ತೂರುಗುತ್ತಿನ ಮನೆಯನ್ನೇ ಹೋಲುವ ಗೃಹ ನಿರ್ಮಾಣ ಮಾಡಿದರು.ಯಕ್ಷಗಾನಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರಾಮಣ್ಣಶೆಟ್ಟರುತನ್ನ ಮನೆಯಲ್ಲಿಕಟೀಲು ಮೇಳದ ಸೇವೆಯನ್ನು ಆರಂಭಿಸಿದ್ದು ಮಾತ್ರವಲ್ಲದೆ, ಅದರಅಭಿವೃದ್ದಿಗೂ, ಸ್ಥಿರತೆಗೂ ಕಾರಣೀಕರ್ತರೆನಿಸಿದರು.ಅವರೇ ಸ್ವತಃ ಮದ್ದಳೆವಾದಕರೂ ಆಗಿದ್ದರು.ಅವರಕಾಲದಲ್ಲಿಗುತ್ತಿನ ಮನೆಯಲ್ಲಿ 1 ತಿಂಗಳ ಪರ್ಯಂತಕಟೀಲುಮೇಳದ ಆಟ ನಡೆಯುತ್ತಿತ್ತು.ರಾಮಾಯಣ, ಮಹಾಭಾರತಗಳು ಪ್ರದರ್ಶನಗೊಳ್ಳುತ್ತಿದ್ದವು.ಆ ಕಾಲದಲ್ಲಿ ಮೇಳಕ್ಕೆ ಆಟಗಳೇ ಸಿಗದ ಕಾಲ.ಈ ದೃಷ್ಟಿಯಿಂದದೆಪ್ಪುಣಿಗುತ್ತಿನಕೊಡುಗೆಮರೆಯಲಾರದ್ದು,ಮರೆಯಬಾರದ್ದು.

IMG-20200204-WA0010ಅದುಕಲ್ಲಾಡಿಕೊರಗ ಶೆಟ್ರ ಕಾಲ.ಕಲ್ಲಾಡಿ ಮನೆತನಕ್ಕೂ, ದೆಪ್ಪುಣಿ ಮನೆತನಕ್ಕೂಸುಮಾರು ಮೂರುತಲೆಮಾರಿನದೀರ್ಘವಾದನಂಟಿದೆ.ಹಾಗೇ ದೆಪ್ಪುಣಿ ಮನೆತನಕ್ಕೂ,ಆಸ್ರಣ್ಣ ಬಂಧುಗಳಿಗೂ ಇವರ ಕಾಲದಿಂದಲೇ ಬಾಂಧವ್ಯ ಬೆಳೆದುಕೊಂಡು ಬಂದಿದೆ. ವಿಶೇಷ ವ್ಯಕ್ತಿತ್ವದರಾಮಣ್ಣ–ದೇವಕಿ ಶೆಟ್ಟಿ ದಂಪತಿಗಳು ಇಂತಹ ಪರಂಪರೆಯನ್ನು ಹುಟ್ಟು ಹಾಕಿ ಕೀರ್ತಿಶೇಷರಾದರು.ಈ ದಂಪತಿಗಳಿಗೆ ಮೂರು ಮಂದಿ ಮಕ್ಕಳು, ಚಂದ್ರಹಾಸ ಶೆಟ್ಟಿ, ಸದಾಶಿವ ಶೆಟ್ಟಿ, ಪದ್ಮನಾಭ ಶೆಟ್ಟಿ.

IMG-20200204-WA0009
ರಾಮಣ್ಣಶೆಟ್ರ ಕಾಲಾನಂತರ ಅವರಭಾವ ದೆಪ್ಪುಣಿಗುತ್ತು ಕೋಚಣ್ಣಶೆಟ್ರುಗುತ್ತಿನ ಮನೆಯಲ್ಲೇಈ ಸೇವೆಯನ್ನು ಮುಂದುವರಿಸಿಕೊಂಡು ಬಂದರು.ನಂತರ ಈ ಯಕ್ಷಸೇವೆಯನ್ನು ಮುಂದುವರೆಸಿಕೊಂಡು ಬಂದವರು ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟರು.ಅವರುದಿ.ಕಲ್ಲಾಡಿಕೊರಗ ಶೆಟ್ರುಮತ್ತು ದಿ.ಗೋಪಾಲಕೃಷ್ಣ ಅಸ್ರಣ್ಣರು ಬಹಳ ಆತ್ಮೀಯರು.ಅವರುಕಾವೂರುದೇವಸ್ಥಾನದಎದುರಿನಗೋಪುರ ನಿರ್ಮಾಣ ಮಾಡಿಕೊಟ್ಟವರು, ಕಟೀಲು ಬ್ರಹ್ಮಕಲಶದ ನೇತೃತ್ವ ವಹಿಸಿದವರು.ಹಾಗೇ ದೇವಕಿ ಶೆಟ್ಟಿಯವರ ಬಗ್ಗೆ ಅಸ್ರಣ್ಣರಿಗೂ ಮಾತೃವತ್ ಪ್ರೇಮ.ಇಂದಿನ ಲಕ್ಷ್ಮೀನಾರಾಯಣಅಸ್ರಣ್ಣರನ್ನುಎತ್ತಿ ಆಡಿಸಿದ ಪುಣ್ಯಕೈದೇವಕಿಶೆಟ್ಟಿಯವರದ್ದು. ಅವರ ನೇತೃತ್ವದಲ್ಲಿವರ್ಷದಲ್ಲಿಎರಡು ಆಟಗಳು ಪ್ರದರ್ಶನಗೊಳ್ಳುತ್ತಿದ್ದವು.ಅದರಲ್ಲಿಒಂದು ಆಟ ದೆಪ್ಪುಣಿಗುತ್ತುರಾಮಣ್ಣ ಶೆಟ್ಟಿಯವರ ಕಾಲದಿಂದ ನಡೆಯುತ್ತಿದ್ದ ಪ್ರದರ್ಶನ ವೀಳ್ಯ ಇಲ್ಲದೆ ಸೇವಾರೂಪವಾಗಿ.ಮತ್ತೊಂದುಚಂದ್ರಹಾಸ ಶೆಟ್ಟರೇ ಆರಂಭಿಸಿದ ಆಟ.ದಿ.ಚಂದ್ರಹಾಸ ಶೆಟ್ಟರ ಸ್ಮರಣಾರ್ಥಅವರ ಪತ್ನಿಕೊಡಿಯಾಲುಗುತ್ತು ವೇದಾವತಿ ಶೆಡ್ತಿಯವರು 1990ರಲ್ಲಿ ಎಕ್ಕಾರುದ್ವಾರ ಕಟ್ಟಿಸಿದ್ದಾರೆ.

IMG-20200204-WA0008
ದಿ. ದೆಪ್ಪುಣಿಗುತ್ತುದೇವಕಿ ಶೆಟ್ಟಿಯವರುಆಶ್ರಯ ನೀಡಿ ಬೆಳೆಸಿದ ಮತ್ತೊಂದು ಮಹಾನ್ ವ್ಯಕ್ತಿತ್ವ ದಿ. ನಾರಾಯಣಕಿಲ್ಲೆಯವರು.ಪುತ್ತೂರಿನಆಧುನಿಕಜನಕಎಂದೇ ಪ್ರಸಿದ್ದರಾದ ಕಿಲ್ಲೆಯವರುಅದ್ಭುತ ತಾಳಮದ್ದಳೆ ಅರ್ಥಧಾರಿಯೂಆಗಿದ್ದರು.ಕಿಲ್ಲೆಯವರುದೇವಕಿಶೆಟ್ಟಿಯವರಿಗೆ‘ಕಾಣಿಗೆ’ ಎಂಬ ಪುಸ್ತಕವನ್ನು ಅರ್ಪಿಸಿದ್ದರು.ಅಲ್ಲದೆಸನ್ಮಾನ ಮಾಡಲು ತೆಗೆದಿರಿಸಿದ್ದ ಶಾಲನ್ನುದುರದೃಷ್ಟವಶಾತ್‍ಅವರ ಪತ್ನಿಕಿಲ್ಲೆಯವರ ಮರಣಾ ನಂತರದೇವಕಿ ಶೆಟ್ಟಿಯವರ ಮರಣದ ಕಾಲಕ್ಕೆ ತಂದು ಹಸ್ತಾಂತರಿಸಿದ್ದರಂತೆ.ಹಾಗೆಯೇ ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ಒಂದು ಹಿಡಿ ಉಪ್ಪನ್ನುಕೊಟ್ಟುದೇವಕಿ ಶೆಟ್ಟಿಯವರುಕಿಲ್ಲೆಯವರನ್ನು ಆಶೀರ್ವದಿಸಿದ್ದರಂತೆ.
ದೇವಕಿ ಶೆಟ್ಟಿಯವರ ಬಗ್ಗೆ ಕಾವೂರು ಮಹಾಲಿಂಗೇಶ್ವರ ದೇವಳದ ಈಗಿನ ಅರ್ಚಕರಾದ ಶ್ರೀನಿವಾಸ ಭಟ್ ಮತ್ತುಅವರತಂದೆ ದಿ.ನಾರಾಯಣ ಭಟ್‍ಬಹಳ ಗೌರವವನ್ನು ಹೊಂದಿದ್ದರು.ಹಾಗೆಯೇಕೊಂರ್ಗಿಬೈಲು ವಿಷ್ಣುಮೂರ್ತಿ ದೇವಳದ ಅರ್ಚಕರುಗಳಾದ ಮಯ್ಯರ ಮನೆತನಕ್ಕೂದೆಪ್ಪುಣಿಗೂ ಬಹಳ ಹತ್ತಿರದ ಸಂಬಂಧ.

IMG-20200204-WA0011
ಮುಂದೆರಾಮಣ್ಣ ಶೆಟ್ರ ದ್ವಿತೀಯ ಪುತ್ರ ಸದಾಶಿವ ಶೆಟ್ಟರು1960ರಲ್ಲಿ ವಾಸ್ತವ್ಯವನ್ನುದೆಪ್ಪುಣಿಯಿಂದ ಬೋಂದೆಲ್‍ಗೆ ಬದಲಾಯಿಸಿದಾಗ, ಇಲ್ಲಿಯೇಯಕ್ಷಸೇವೆಯನ್ನು ಆರಂಭಿಸಿದರು.ಈ ಸೇವೆ ಈಗ ವಜ್ರಮಹೋತ್ಸವದ ಹೊಸ್ತಿಲಲ್ಲಿದೆ.ಅವರಿಗೆ ಕಂಬಳ ಮತ್ತು ಕೋಳಿ ಅಂಕವೆಂದರೆ ಬಹಳ ಆಸಕ್ತಿ.ಮುಗಿಪು ಮನೆಯಲ್ಲಿ ಕಂಬಳವನ್ನು ಆಯೋಜಿಸಿ ಯಶಸ್ವಿಯಾಗಿದ್ದರು.ಆಗ ಕಟೀಲಿನಲ್ಲಿಇದ್ದದ್ದುಒಂದೇಮೇಳ.ಅವರಿಗೆಕಿಲ್ಲೆ, ಕಲ್ಲಾಡಿಕೊರಗ ಶೆಟ್ರು ಮತ್ತುವಿಠಲ ಶೆಟ್ರಆತ್ಮೀಯ ಒಡನಾಟವೂಇತ್ತು.ಅವರು ಅನೇಕ ನ್ಯಾಯ ಪಂಚಾತಿಕೆಗಳನ್ನೂ ಮಾಡುತ್ತಿದ್ದರು.ಅವರಿಗೆ ಶ್ರೀಮಂತ ಗೆಳೆಯರೂ ಇದ್ದರು, ಹಾಗೆಯೇ ಬಡವರಆಶ್ರಯದಾತರೂಆಗಿದ್ದರು.ಇವರು 1944ರಲ್ಲಿ ಬೈಲುಮೂಡುಕೆರೆತ್ಯಾಂಪಣ್ಣ ನಾಯ್ಕ್ ಮತ್ತು ಶೆಡ್ಡೆ ಮೇಗಿನಮನೆ ಜಾನಕಿ ನಾಯ್ಕ್ ದಂಪತಿಗಳ ಮಗಳು ಗುಲಾಬಿ ಶೆಡ್ತಿಯವರನ್ನು ವಿವಾಹವಾದರು.ಸದಾಶಿವ ಶೆಟ್ಟರುಹತ್ತು ವರ್ಷಗಳ ಕಾಲ ಸೇವೆಯನ್ನು ನಡೆಸಿ 1970ರ ಫೆಬ್ರವರಿ 11 ರಂದು ಮರಣವನ್ನೈದಿದರು.
ಶೆಡ್ಡೆ ಮೇಗಿನಮನೆ ಜಾನಕಿ ನಾಯ್ಕ್‍ರ ಸಹೋದರ ಶೆಡ್ಡೆ ಮೇಗಿನಮನೆ ಕೃಷ್ಣ ಮಲ್ಲಿ ಆಗಿನ ದಿನಗಳ ಹಿರಿಯಅರ್ಥಧಾರಿ ಹಾಗೂ ಪ್ರವಚನಕಾರರಾಗಿದ್ದರು.ಇವರುಕಿಲ್ಲೆಯವರೊಂದಿಗೆ ಅನೇಕ ಕೂಟಗಳಲ್ಲಿ ಅರ್ಥ ಹೇಳಿದ್ದಾರೆ.ಒಮ್ಮೆಒಂದು ತಾಳಮದ್ದಳೆಯಲ್ಲಿ ಅರ್ಥ ಹೇಳುವಾಗ ಅವರೀರ್ವರ ಮಧ್ಯೆ ವಾದ – ಪ್ರತಿವಾದಗಳು ತಾರಕಕ್ಕೆಏರಿದಾಗ ಸಂಘಟಕರು ಹಿರಿಯ ಬಲಿಪರಲ್ಲಿತೀರ್ಪುಹೇಳಲು ವಿನಂತಿಸಿಕೊಂಡರಂತೆ.ಆಗ ಬಲಿಪರು‘ಇಬ್ಬರೂ ಪಾಂಡಿತ್ಯದಲ್ಲಿ ಸಮಾನರಿದ್ದಾರೆ.ಆದರೆಇಂದುಕಿಲ್ಲೆಯವರುಕಥೆಯ ಕಾಲದಿಂದ ಸ್ವಲ್ಪ ಮುಂದೆ ಹೋದರು’ಎಂದುತೀರ್ಪು ನೀಡಿದರಂತೆ.ಅಂದಿನಿಂದಕಿಲ್ಲೆಯವರುಒಂದು ವರ್ಷ ಕಾಲ ಯಾರಿಗೂಕಾಣ ಸಿಗಲಿಲ್ಲವಂತೆ.ತಾನುಕಲಿತದ್ದು ಸಾಕಾಗಲಿಲ್ಲ ಎಂದು ತಿಳಿದು ಶೃಂಗೇರಿಗೆ ಹೋಗಿ ಮತ್ತಷ್ಟುಅಧ್ಯಯನ ಮಾಡಿ ಬಂದರಂತೆ. ಹಾಗೆ ಮರಳಿದ ಕಿಲ್ಲೆಯವರ ನಾಲಗೆಯಲ್ಲಿ ಶಾರದೆಯೇನೆಲೆಸಿ ಮಾತನಾಡುತ್ತಿದ್ದಳು ಎಂದು ಸ್ವತಃ ಕೃಷ್ಣ ಮಲ್ಲಿಯವರೇ ಹೇಳುತ್ತಿದ್ದರಂತೆ.
ನಂತರ 1992ರ ತನಕ ಈ ಆಟವನ್ನುದಿ.ಸದಾಶಿವ ಶೆಟ್ರ ಭಾವಶೆಡ್ಡೆ ಮೇಗಿನಮನೆ ಜಯರಾಮ್ ನಾಯ್ಕ್‍ರವರು ಮುಂದುವರೆಸಿಕೊಂಡು ಬಂದರು.ಇವರು ಮೂಡುಶೆಡ್ಡೆ ಮಂಡಲ ಪಂಚಾಯತ್‍ನ ಅಧ್ಯಕ್ಷರಾಗಿದ್ದವರು ಮತ್ತು ಮೂಡುಶೆಡ್ಡೆಯ ಸಮಗ್ರಅಭಿವೃದ್ದಿಯ ಹರಿಕಾರರು.ಇವರುಒಂದು ದಶಕಗಳ ಕಾಲ ಕಾವೂರು ದೇವಳದ ಮೊಕ್ತೇಸರರಾಗಿದ್ದು ದೇವಳದ ಜೀರ್ಣೋದ್ದಾರದರೂವಾರಿಯಾಗಿದ್ದರು.ಜಯರಾಮ್ ನಾಯ್ಕ್ ಮತ್ತುವಿಠಲ ಶೆಟ್ರುಆತ್ಮೀಯ ಒಡನಾಡಿಗಳಾಗಿದ್ದರು. ಖ್ಯಾತ ಸಂಗೀತ ವಿದ್ವಾನ್ ದಿ.ಬೆಳಿಂಜೆ ಮೈಂದಪ್ಪ ರೈಗಳ ಹಿರಿಯ ಮಗಳಾದ ತಲಪಾಡಿದೊಡ್ಡಮನೆ ಸುಮವಾಣಿಯವರನ್ನುಇವರು ವಿವಾಹವಾಗಿದ್ದರು, ಕಿರಿಯ ಮಗಳನ್ನು ಈಗಿನ ಮುಗಿಪುರಾಮಣ್ಣ ಶೆಟ್ಟಿಯವರು ವಿವಾಹವಾದರು.ಮೈಂದಪ್ಪ ರೈಗಳು ಯಕ್ಷಗಾನಕ್ಕೆ ಸಂಗೀತವನ್ನು ಅಳವಡಿಸಿದ ಮೊದಲ ಶಕಪುರುಷ. ಅವರು ಪಿಟೀಲುಕೃಷ್ಣರಾಯರಿಂದ ಸಂಗೀತಾಭ್ಯಾಸವನ್ನು ಮಾಡಿದವರು.ಅವರು ದಿ.ಮಂಡೆಚ್ಚರ ಗುರುಗಳೂ ಹೌದು.ಕುಂಡಾವು ಮೇಳದ ಆರಂಭಕಾಲದಲ್ಲಿಅದರ ಭಾಗವತರಾಗಿದ್ದವರು, ಹಾಗೆಯೇತನ್ನ 16ನೇ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ಬಲಿಪ ನಾರಾಯಣ ಭಾಗವತರೊಂದಿಗೆಭಾಗವತಿಕೆ ಮಾಡಿದವರು.ಅವರ ಭಾಗವತಿಕೆಗೆ ನಾರಾಯಣಕಿಲ್ಲೆ, ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು ಅರ್ಥ ಹೇಳಿದ್ದಾರೆ.ಜಯರಾಮ್ ನಾಯ್ಕ್‍ರ ನೇತೃತ್ವದಲ್ಲಿ 1985ರಲ್ಲಿ ಬೆಳ್ಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕಟೀಲಿನ ಮೂರು ಮೇಳಗಳ ಕೂಡಾಟದಲ್ಲಿ‘ಸಮುದ್ರ ಮಥನ’ ಪ್ರಸಂಗ ಪ್ರದರ್ಶಿತವಾಯಿತು.ಈ ಆಟಕ್ಕೆ ಧರ್ಮಸ್ಥಳದಿಂದ ಆನೆ ತರಿಸಿದ್ದರಂತೆ.

ದೆಪ್ಪುಣಿಗುತ್ತುಸದಾಶಿವ ಶೆಟ್ಟಿ – ಶೆಡ್ಡೆ ಮೇಗಿನಮನೆ ಗುಲಾಬಿ ಶೆಡ್ತಿಯವರಒಬ್ಬನೇ ಪುತ್ರ ಮುಗಿಪು ರಾಮಣ್ಣ ಶೆಟ್ಟಿ.ಇವರುಕೊಡೆತ್ತೂರುರಾಮಣ್ಣ ಶೆಟ್ಟರಒಬ್ಬರೇ ಮೊಮ್ಮಗ.ಅಜ್ಜ ಹಾಗೂ ಮೊಮ್ಮಗನಿಗೆಒಂದೇ ಹೆಸರು.ಇವರುರಾಜ್ಯ ಮಟ್ಟದ ವಾಲಿಬಾಲ್‍ಆಟಗಾರರಾಗಿದ್ದು, ಅತ್ತಾವರ ಪ್ರೇಂಡ್ಸ್ ಸರ್ಕಲ್‍ತಂಡದ ನಾಯಕರೂಆಗಿದ್ದುಅನೇಕ ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಂಡ ಸಾಧಕ.ನೆರೆಯರಾಜ್ಯ ಕೇರಳದಲ್ಲೂ ಅವರುಆಟಗಾರನಾಗಿ ಹೆಸರುವಾಸಿಯಾಗಿದ್ದರು.2006ರಲ್ಲಿ ಮಂಗಳ ಕ್ರೀಡಾಂಗಣದಲ್ಲಿ ನಡೆದ‘ಕರ್ನಾಟಕ ವಾಲಿಬಾಲ್ ಅಸ್ಸೋಸಿಯೇಶನ್ ಕಪ್’ ಪಂದ್ಯಾಟದ ಸಂದರ್ಭದಲ್ಲಿರಾಮಣ್ಣ ಶೆಟ್ಟರನ್ನು ಬಂಟ್ವಾಳದ ರಾಜೀವಗಾಂಧಿಆಟ್ರ್ಸ್ ಮತ್ತು ಸ್ಪೋಟ್ರ್ಸ್ ಜೀವಮಾನ ಶ್ರೇಷ್ಠ ಸಾಧನಾ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.1996ರಲ್ಲಿ ಕಾವೂರಿನ ಬ್ರಹ್ಮಕಲಶದಅಧ್ಯಕ್ಷರಾಗಿ ಸಮರ್ಥ ಮುಂದಾಳತ್ವವನ್ನು ನೀಡಿದ್ದಾರೆ.1997ರಲ್ಲಿ ಆರಂಭವಾದಕಾವೂರಿನ ಮೊಸರುಕುಡಿಕೆಯ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಪ್ರಸಕ್ತಕಾವೂರು ದೇವಳದ ಆಡಳಿತ ಮೊಕ್ತೇಸರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇವರು 1992ರಿಂದ ಯಕ್ಷಸೇವಾಪರಂಪರೆಯನ್ನುಕಲ್ಲಾಡಿ ವಿಠಲಶೆಟ್ರ ಮಾರ್ಗದರ್ಶನದಲ್ಲಿ ಮುಂದುವರೆಸಿಕೊಂಡು ಬಂದರು.1995ರಲ್ಲಿತಂದೆದಿ.ದೆಪ್ಪುಣಿಗುತ್ತು ಸದಾಶಿವ ಶೆಟ್ಟರ 25ನೇ ಪುಣ್ಯತಿಥಿಯನ್ನುಅರ್ಥಪೂರ್ಣವಾಗಿ ಆಚರಿಸಲಾಯಿತು. ಇದು ಬೋಂದೆಲ್‍ನ ಸೇವೆಗೆ 35ನೇ ವರ್ಷ.ಈ ಪ್ರಯುಕ್ತಕಲ್ಲಾಡಿ ವಿಠಲ ಶೆಟ್ಟರನ್ನುಪೇಜಾವರ ಸ್ವಾಮಿಗಳ ಘನ ಉಪಸ್ಥಿತಿ –ಅನುಗ್ರಹ ಮಂತ್ರಾಕ್ಷತೆಯೊಂದಿಗೆ ಶ್ರೀ ಲಕ್ಷ್ಮೀನಾರಾಯಣಅಸ್ರಣ್ಣರ ಸಮಕ್ಷದಲ್ಲಿಸನ್ಮಾನಿಸಲಾಯಿತು.ಇದುಅವರಿಗೆ ಸಂದಮೊದಲ ಸನ್ಮಾನವೂ ಹೌದು, ದಾಖಲೆಯೂ ಹೌದು.ಕಾರಣ ವಿಠಲಶೆಟ್ಟರುಎಲ್ಲಿಯೂ ಸನ್ಮಾನಕ್ಕೆ ಒಪ್ಪಿಕೊಳ್ಳುತ್ತಲೇ ಇರಲಿಲ್ಲ.ವಿಧಾನಸಭಾ ಸದಸ್ಯ ಮತ್ತುಕಲಾವಿದಕುಂಬ್ಳೆ ಸುಂದರರಾವ್‍ಅವರಅಧ್ಯಕ್ಷತೆಯಲ್ಲಿ ನಡೆದರಜತಸಂಭ್ರಮದಲ್ಲಿ ವಿದ್ವಾಂಸರಾಮದಾಸ ಸಾಮಗರುತಮ್ಮ ಧನಿಗಳಿಗೆಅಭಿನಂದನಾ ಭಾಷಣವನ್ನು ನೆರವೇರಿಸಿದರು.
1997ರ ತನಕ ಈ ಸೇವೆ ಬೋಂದೆಲ್‍ನಲ್ಲಿಯೇ ನಡೆಯಿತು.ನಂತರ ಈ ಸೇವೆ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆದುಕೊಂಡು ಬರುತ್ತಿದೆ.2010ನೇ ಇಸವಿ ಈ ಯಕ್ಷಯಜ್ನದಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾಯಿತು.ಕಾವೂರುದೇವಳದಲ್ಲಿ ನಡೆದ ಈ ಸ್ವರ್ಣಜಾತ್ರೆಯಲ್ಲಿದೆಪ್ಪುಣಿಗುತ್ತು ಸದಾಶಿವ ಶೆಟ್ಟಿ – ಶೆಡ್ಡೆ ಮೇಗಿನಮನೆ ಜಯರಾಮ್ ನಾಯ್ಕ್- ಕಲ್ಲಾಡಿ ವಿಠಲ ಶೆಟ್ಟರ ಸಂಸ್ಮರಣೆಯನ್ನು ನಡೆಸಲಾಯಿತು.ಉತ್ಸವದೋಪೇತವಾಗಿ ನಡೆದಕಾರ್ಯಕ್ರಮದಲ್ಲಿಯಜಮಾನರಾದಕಲ್ಲಾಡಿದೇವಿಪ್ರಸಾದ ಶೆಟ್ಟರಿಗೆಅದ್ದೂರಿ ಸನ್ಮಾನ, ಹಿರಿಯಕಲಾವಿದಸಾಧಕರಾದಕೋಳ್ಯೂರುರಾಮಚಂದ್ರರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಸುಣ್ಣಂಬಳ ವಿಶ್ವೇಶ್ವರ ಭಟ್‍ರವರುಗಳಿಗೆ ಗೌರವಾರ್ಪಣೆ ನಡೆಯಿತು.ನಂತರದೇವಿಮಹಾತ್ಮೆಯಕ್ಷಗಾನಪ್ರದರ್ಶಿಸಲ್ಪಟ್ಟಿತು.ಬಳಿಕ 2013ರಿಂದ 2017ರ ತನಕ ಮತ್ತೆ ಬೋಂದೆಲ್‍ನಲ್ಲಿಯೇ ಈ ಸೇವೆ ಮುಂದುವರಿಯಿತು.2015, ಫೆಬ್ರುವರಿ 16ರ ಸೇವೆಯಲ್ಲಿಕಟೀಲು ಮೇಳವೊಂದರಲ್ಲಿಯೇ ಅರ್ಚಕರಾಗಿ ಸ್ವರ್ಣತಿರುಗಾಟ ನಡೆಸಿದ ಕಾಂತಾವರಅನಂತರಾಮ ಭಟ್ಟರನ್ನುಸನ್ಮಾನಿಸಲಾಯಿತು.2015, ಮೇ 18ರಂದು ರಾಮಣ್ಣಶೆಟ್ಟಿ–ತಲಪಾಡಿದೊಡ್ಡಮನೆ ಶಂಕರಿ ಶೆಟ್ಟಿಯವರವೈವಾಹಿಕ ಜೀವನದ 35ನೇ ವರ್ಷದ ಸಂಭ್ರಮದ ಸಂದರ್ಭದಲ್ಲಿ ಹಿರಿಯಕಲಾವಿದಗಂಗಯ್ಯ ಶೆಟ್ಟರನ್ನು ಸನ್ಮಾನಿಸಲಾಯಿತು ಮತ್ತುಕಟೀಲು ಮೇಳದ ಆಯ್ದಕಲಾವಿದರಕೂಡುವಿಕೆಯಲ್ಲಿಯಕ್ಷಗಾನ ಪ್ರದರ್ಶನ ನಡೆಯಿತು.2017ರಾಮಣ್ಣ ಶೆಟ್ರ ಮುಂದಾಳತ್ವಕ್ಕೆ ರಜತ ಸಂಭ್ರಮದ ವರ್ಷ.ಈ ಸೇವೆಯಾಟದಲ್ಲಿ ಈ ಸೇವೆಯೊಳಗಿನ ತನ್ನರಜತ ಸೇವೆಗೆ ಸುಣ್ಣಂಬಳ ವಿಶ್ವೇಶ್ವರ ಭಟ್ಟರನ್ನು‘ಯಕ್ಷಾವ್ಯಯನಿಧಿ’ ಬಿರುದು ಪ್ರದಾನಿಸಿ ಗೌರವಿಸಲಾಯಿತು.
ಈ ಯಕ್ಷಯಜ್ನದ ವಜ್ರಮಹೋತ್ಸವ ಫೇಬ್ರವರಿ 8ರಂದು ಶನಿವಾರಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯಲಿದೆ.ಅಂದು ಪೂರ್ವಾಹ್ನ9.30ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಯಜಮಾನರಾದಕಲ್ಲಾಡಿದೇವೀಪ್ರಸಾದ ಶೆಟ್ಟರಿಗೆಗೌರವಾರ್ಪಣೆ, ಕಟೀಲು ಮೇಳದ ಏಳು ಹಿರಿಯಕಲಾವಿದರಿಗೆ ಪ್ರಶಸ್ತಿ ಪ್ರದಾನ, ದೀರ್ಘಕಾಲದಿಂದಕಟೀಲು ಮೇಳದ ಸೇವೆಯಾಟ ನಡೆಸಿಕೊಂಡು ಬರುತ್ತಿರುವ ಸಂಸ್ಥೆ – ಮನೆಗಳಿಗೆ ಸೇವಾಭಿನಂದನೆ ನಡೆಯಲಿದೆ. ಅಪರಾಹ್ನ ಪ್ರಸಿದ್ದ ಕಲಾವಿದರಿಂದ‘ಪಾರ್ಥಸಾರಥ್ಯ’ ತಾಳಮದ್ದಳೆ ನಡೆಯಲಿದ್ದು, ರಾತ್ರಿಕಟೀಲು ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ಯಕ್ಷಗಾನ ಸೇವೆಯೂ ನಡೆಯಲಿದೆ.

ಒಂದೂವರೆ ಶತಕದ ಈ ಸುದೀರ್ಘಕಟೀಲಮ್ಮನಯಕ್ಷಸೇವೆಯಲ್ಲಿ ಅನೇಕ ತಲೆಮಾರುಗಳು, ಕುಟುಂಬಗಳು ಕೃತಾರ್ಥತೆಯನ್ನುಕಂಡಿವೆ. ಈ ಯಜ್ನ ಮನಗಳನ್ನು – ಕುಟುಂಬಗಳನ್ನು ಕೂಡಿಸಿದೆ, ಮಣ್ಣನ್ನು ಪವಿತ್ರಗೊಳಿಸಿದೆ, ಕಲೆಯನ್ನು ಬೆಳೆಸಿದೆ – ಶ್ರೀಮಂತಗೊಳಿಸಿದೆ, ಸಾಧಕರನ್ನು ಗುರುತಿಸಿದೆ, ಕಲಾವಿದರಿಗೆಆಶ್ರಯವಾಗಿದೆ.ಒಂದುಕಲಾಪೋಷಣೇಯ ಪುಣ್ಯಕರ್ಮಇದಕ್ಕಿಂತ ಹೆಚ್ಚಿನದ್ದೇನನ್ನು ಮಾಡೂವುದಕ್ಕೆ ಸಾಧ್ಯ?ಗರಿಷ್ಟವಾದ ಸರ್ವವನ್ನೂ ಬೋಂದೆಲ್‍ನ ಮುಗಿಪು ಕುಟುಂಬ ಆ ಕಲಾಮಾತೆಯ ಪದಕ್ಕೆ ಸೇವಾರೂಪವಾಗಿ ಅರ್ಪಿಸಿದೆ.ಮುಗಿಪು ರಾಮಣ್ಣ ಶೆಟ್ಟಿ, ಅವರ ಮಕ್ಕಳು ಮತ್ತುಕುಟುಂಬಸ್ಥರು ಈ ಪವಿತ್ರಕಾರ್ಯದಲ್ಲಿ ಪುಣ್ಯಸ್ನಾನ ಮಿಂದೆದ್ದಿದ್ದಾರೆ.ಈ ಸೇವೆ ಶತಕದ ಸಂಭ್ರಮವನ್ನುಕಾಣಲಿ ಎಂದು ಹಾರೈಸುತ್ತಾ ಮುಗಿಪು ಕುಟುಂಬದ ಈ ಸರ್ವಸಮರ್ಪಣಾ ಭಾವಕ್ಕೆ ನಾಡಿನಎಲ್ಲಾ ಕಲಾಹೃದಯಗಳು ಮುಡಿಬಾಗಿ ವಂದಿಸುತ್ತವೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter