Published On: Sat, Jan 25th, 2020

ವಿದ್ಯುತ್ ಸುರಕ್ಷತಾ ಮಾಸಾಚರಣೆ

ಬಂಟ್ವಾಳ: ಬಂಟ್ವಾಳ ಉಪವಿಭಾಗ-2 ಮೆಸ್ಕಾಂ ವಾಮದಪದವು ಶಾಖೆಯ ವತಿಯಿಂದ ವಿದ್ಯುತ್ ಸುರಕ್ಷತಾ ಕಾರ್ಯಕ್ರಮ ಚೆನ್ನೈತ್ತೋಡಿ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.  ಮೆಸ್ಕಾಂನ ವಾಮದಪದವು ಶಾಖಾಧಿಕಾರಿ ಸಂದೇಶ್ ಶೆಟ್ಟಿ ಅವರು ಅತಿಥಿಯಾಗಿ ಭಾಗವಹಿಸಿ, ವಿದ್ಯುತ್ ಉತ್ಪಾದನೆ, ವಿದ್ಯುತ್ ಪರಿಕಲ್ಪನೆಯ ಬಗ್ಗೆ ವಿವರಿಸಿ, ವಿದ್ಯುತ್ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.ಕಿರಿಯ ಪವರ್ ಮ್ಯಾನ್ ಇಬ್ರಾಹಿಂ ನಾಯ್ಕೋಡಿ ರವರು ವಿದ್ಯುತ್ ಸುರಕ್ಷಿತ ಬಳಕೆ, ವಿದ್ಯುತ್ ಸುರಕ್ಷಿತ ಬಳಕೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೂ ವಿದ್ಯುತ್‌ ಸುರಕ್ಷಿತ ಅಂಶಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು.

IMG-20200124-WA0043ವಾಮದಪದವು ಶಾಖೆಯ ಮೆಲ್ವೀಚಾರಕರಾದ  ಸಂತೋಷ ಕುಮಾರ್,ಮೆಕ್ಯಾನಿಕ್ ಸುಧಾಕರ್ ,ಪವರ್ ಮ್ಯಾನ್ ವಸಂತಕುಮಾರ ಪವರ್ ಅತಿಥಿಗಳಾಗಿದ್ದರುಶಾಲಾ ಮುಖ್ಯೋಪಾಧ್ಯಾಯರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

IMG-20200124-WA0042ವಾಮದಪದವು ಶಾಖೆಯ ಪವರ್ ಮ್ಯಾನ್ ಗಳಾದ  ಅನಿಲ, ಮಲ್ಲಿಕಾರ್ಜುನ, ಪಂಡಿತ್,  ಕಾಶೀನಾಥ, ಮಹೇಶ್,ಸುನೀಲ್ ಉಪಸ್ಥಿತಿ ರಿದ್ದರು .ಕಾರ್ಯಕ್ರಮದ ನೆನಪಿಗಾಗಿ ಶಾಲೆಗೆ ಕೊಡುಗೆಯೊಂದನ್ನು ಮೆಸ್ಕಾಂ ಶಾಖೆಯ ವತಿಯಿಂದ ನೀಡಲಾಯಿತು.ಕಿರಿಯ ಪವರ್ ಮ್ಯಾನ್ ಸುಭಾಸ್ ವಂದಿಸಿದರು. ನೇರವೇರಿಸಿದರು.ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಹಾಯದೊಂದಿಗೆ ಜಾಥಾದ ಮೂಲಕ ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷಿತೆಯ ಬಗ್ಗೆ ಅರಿವು ಮೂಡಿಸಲಾಯಿತು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter