Published On: Fri, Jan 24th, 2020

ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಗರ ಭಜನೆಗೆ ಚಾಲನೆ

ಬಂಟ್ವಾಳ: ಬಂಟ್ವಾಳ ತಾ. ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿಯ ವತಿಯಿಂದ ನಡೆಯುವ ನಗರ ಭಜನ ಕಾರ್ಯಕ್ರಮಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ.20 ರಂದು ಚಾಲನೆ ನೀಡಲಾಯಿತು.

2301pkt4
ದೇವಸ್ಥಾನದಲ್ಲಿ ದೀಪ ಬೆಳಗಿಸಿ, ಪೂಜೆ ಸಲ್ಲಿಸಿ, ಪ್ರಾರ್ಥನೆ ನಡೆಸುವುದರ ಮೂಲಕ ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ನಗರ ಭಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಜನ ಮಂಡಳಿಯ ಅಧ್ಯಕ್ಷ ದಿನೇಶ್ ಭಟ್ ದೈಲ, ಗೌರವಾಧ್ಯಕ್ಷ ಹೇಮಚಂದ್ರ ಶೆಟ್ಟಿಗಾರ್, ಮಂಡಳಿಯ ಸಂಚಾಲಕ ಸದಾನಂದ ಗೌಡ ಮತ್ತಾವು ಮತ್ತು ಭಜನ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.ಫೆ.21ರಂದು ಮಹಾಶಿವರಾತ್ರಿಯಂದು ಭಜನ ಮಂಗಲೋತ್ಸವ ನಡೆಯಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter