Published On: Fri, Jan 3rd, 2020

80000 ಕೋಟಿ ಸಾಲ ಹಿನ್ನಲೆ: ‘ಮಹಾರಾಜ’ನ ಮಾರಾಟ!

ಮುಂಬೈ : ಮಹಾರಾಜ ಎಂದೇ ಕರೆಸಿಕೊಳ್ಳುತ್ತಿದ್ದ ಏರ್‌ ಇಂಡಿಯಾ ಈಗ ಸುಮಾರು 80,000 ಕೋಟಿ ರು. ನಷ್ಟದಲ್ಲಿದೆ. ಸತತ ನಷ್ಟದಲ್ಲಿರುವ ಏರ್‌ ಇಂಡಿಯಾವನ್ನು ಖಾಸಗಿಕರಣಗೊಳಿಸದೇ ಸರ್ಕಾರಕ್ಕೆ ಬೇರೆ ಆಯ್ಕೆ ಇಲ್ಲ. ಅದಲ್ಲದೆ ಖಾಸಗಿಕರಣ ಪ್ರಕ್ರಿಯೆಗೆ ಉದ್ಯೋಗಿಗಳ ಸಹಕಾರ ಮುಖ್ಯವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

36_1_Airbus320

 

ಏರ್‌ ಇಂಡಿಯಾದ 13 ಯೂನಿಯನ್‌ಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದಾಗ ,ಏರ್‌ ಇಂಡಿಯಾವನ್ನು ಖಾಸಗಿಯವರಿಗೆ ಹಸ್ತಾಂತರಿಸುವುದಕ್ಕೆ ಯೂನಿಯನ್‌ಗಳು ವಿರೋಧ ವ್ಯಕ್ತಪಡಿಸಿವೆ. ಸರ್ಕಾರದ ಬೆಂಬಲ ದೊರೆತರೆ ಸಂಸ್ಥೆಯನ್ನು ಮುನ್ನಡೆಸುವ ಸಾಮರ್ಥ್ಯವನ್ನು ಉದ್ಯೋಗಿಗಳು ಹೊಂದಿದ್ದಾರೆ ಎಂದು ವಿರೋಧ ವ್ಯಕ್ತ ಪಡಿಸಿದ್ದಾರೆ. ಏರ್‌ ಇಂಡಿಯಾ ಖಾಸಗಿಕರಣದ ಬಳಿಕ ಉದ್ಯೋಗಕ್ಕೆ ಸಂಬಂಧಿಸಿದ ಕಳವಳವನ್ನು ಬಗೆ ಹರಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ ಸತತ ನಷ್ಟದಲ್ಲಿರುವ ಏರ್‌ಇಂಡಿಯಾವನ್ನು ಖರೀದಿಸುವವರು ಯಾರು ಎಂಬುದು ಇದೀಗ ದೋಡ್ಡ ಪ್ರಶಯಾಗಿ ಉಳಿದಿದೆ. ಏರ್‌ ಇಂಡಿಯಾ ಸಂಸ್ಥೆ ಮಾರಾಟಕ್ಕಿಟ್ಟಿದ್ದರೂ ಖರೀದಿದಾರರೇ ಸಿಗ್ತಿಲ್ಲ. ಅದಲ್ಲದೆ 80 ಸಾವಿರ ಕೋಟಿ ರು. ನಷ್ಟದಲ್ಲಿರುವ ಏರ್‌ಇಂಡಿಯಾಗೆ ಖಾಸಗಿಕರಣ ಬಿಟ್ಟು ಬೇರೆ ಯಾವ ಪರಿಹಾರನು ಇಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಅಸಹಾಯಕತೆ ವ್ಯಕ್ತಪಡಿಸಿದ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter