Published On: Fri, Dec 20th, 2019

ಕಟೀಲು ಬ್ರಹ್ಮಕಲಶೋತ್ಸವ ಚಪ್ಪರ ಮಹೂರ್ತ , ಆಮಂತ್ರಣ ಪತ್ರಿಕೆ ಬಿಡುಗಡೆ.

ಕಟೀಲು: ಭಾರತ ದೇಶ ವಿಶ್ವಗುರುವಾಗಿ ಮೂಡಿಬರಲು ಮತ್ತು ರಾಷ್ಟ್ರ ಜಾಗೃತಿ ಕಾರ್ಯಗಳಿಗೆ ಕಟೀಲು ದುರ್ಗೇಯ ಸನ್ನಿಧಿಯಲ್ಲಿ ಸಂಪನ್ನಗೊಳ್ಳಲಿರುವ ಬ್ರಹ್ಮಕಲಶೋತ್ಸವ ನಾಂಧಿಯಾಗಲಿ. ರಾಷ್ಠ್ರ ಹಾಗೂ ಸಮುಷ್ಟಿಯ ಹಿತದ ಕಾರ್ಯಗಳಿಗೆ ಅಡ್ಡಿ-ಆತಂಕಗಳು , ಸವಾಲುಗಲು ಕಾಡುವುದು ಸಹಜ ಕಬಡಿಯ ಕ್ರಿಯೆಯಲ್ಲಿರುವಂತೆ ಒಲಿತನ್ನು ಸಹಿಸದ ಮಂದಿ ಪೂರ್ವಗ್ರಹದೊಂದಿಗೆ ಕಾಳೆಲೆಯುತ್ತಲೇ ಇರುತ್ತಾರೆ ಎಂದು ಅದಮಾರು ಮಠದ ಹಿರಿಯ ಯತಿಗಳಾದ ಶ್ರೀ ವಿಶ್ವಪ್ರೀಯ ತೀರ್ಥ ಸ್ವಾಮಿಜಿ ಅವರು ಹೇಳಿದರು. ಅವರು ಕಟೀಲು ಶ್ರೀ ದುರ್ಗಾಪರೆಮೇಶ್ವರೀ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ಇಲ್ಲಿನ ಕುದ್ರು ಮೂಲಸಾನಿಧ್ಯ ಭ್ರಾಮರೀವನದಲ್ಲಿ ಚಪ್ಪರ ಮಹೂರ್ತ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.

20vm kateel swamiji
* ಕೋಟಿಜಪಯಜ್ಙ ಪರಣಾಮಕಾರಿ ಫಲ:
ಸಾಮೂಹಿಕ ಸಂಕಲ್ಪದೊಂದಿಗೆ ನಾಡಿನೆಲ್ಲೆಡೆಯ ಮಂದಿ ಸರ್ವಮಂಗಲೆಯನ್ನು ಕ್ಷಣಕ್ಷಣಕ್ಕೂ ಶ್ತುತಿಸುತ್ತಿದ್ದು ಕ್ಷೇತ್ರ ಮನೆ ಮಠಗಳು ಬಹಳ ಪರಿಣಾಮಕಾರಿ ಪ್ರತಿಫಲ ಪ್ರಾಪ್ತಿವಾಗುತ್ತದೆ. ಭಾರತ ದೇಶ ಹಲವು ರೀತಿಯ ಸಂಕಷ್ಠಗಳನ್ನು ಎದುರಿಸುತ್ತಿದ್ದು ಅವೆಲ್ಲವುಗಳ ನಿವಾರಣೆಗೆ ಈ ಸಾಮೂಹಿಕ ಪ್ರಾರ್ಥನೆ ಪ್ರೇರಕ ಶಕ್ತಿಯಾಗಲಿ ಎಂಬುದು ಸಾರ್ವತ್ರಿಕ ಆಶಯವಾಗಿದೆ ಎಂದು ಅವರು ಹೇಳಿದರು.20vm kateel thorana

20-8

*ಸಾಮೂಹಿಕ ಪ್ರಾರ್ಥನೆ ಆಮಂತ್ರಣ ಪತ್ರಿಕೆ ಬಿಡುಗಡೆ.

ಚಪ್ಪರ ಮಹೂರ್ತಕ್ಕೆ ಪೂರ್ವಭಾವಿಯಾಗಿ ಅದಮಾರು ಶ್ರೀ ವಿಶ್ವಪ್ರೀಯತೀರ್ಥಸ್ವಾಮಿಜೀಯವರು ದೇಗುಳದ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು . ಬಳಿಕ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿಯವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.20-03

20-01 20-06

20-6ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ , ಸ್ವಾಗತ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ದೇವಳದ ಅನುವಂಶಿಕ ಮೊಕ್ತೇಸರ ಹಾಗೂ ಅರ್ಚಕ ವಾಸುದೇವ ಆಸ್ರಣ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ , ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಅರ್ಚಕರಾದ ವೆಂಕಟರಮಣ ಆಸ್ರಣ್ಣ ,ಅನಂತಪದ್ಮನಾಭ ಆಸ್ರಣ್ಣ , ಲಕ್ಷ್ಮೀನಾರಾಯಣ ಆಸ್ರಣ್ಣ , ಕಮಲದೇವಿ ಪ್ರಸಾದ ಆಸ್ರಣ್ಣ, ಕೊಡೆತ್ತೂರುಗುತ್ತು ಕುಟುಂಬದ ಪ್ರಮುಖರು,ದ.ಕ.ಜಿಲ್ಲಾಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ,  ಹಾಗೂ ದೇವಳದ ಪ್ರಬಂಧಕ ತಾರನಾಥ ಶೆಟ್ಟಿ ,ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಈಶ್ವರ ಕಟೀಲು, ಸ್ವಾಗತ ಸಮಿತಿ ಪ್ರ, ಕಾರ್ಯದರ್ಶಿ ಭಾಸ್ಕರ ದೇವಸ್ಯ,  ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಎಲ್ ವಿ ಅಮೀನ್ ಮುಂಬಾಯಿ, ಯಾದವ ಕೋಟ್ಯಾನ್.,ಅತ್ತೂರು, ಕೊಡೆತ್ತೂರು, ಎಕ್ಕಾರು, ಶಿಬರೂರು ಮಾಗಣೆಯ ಪ್ರಮುಖರು  ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಅವರು ಕಾರ್ಯಕ್ರಮ ಸಂಯೋಜಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter