Published On: Tue, Dec 17th, 2019

ಮಂಗಳೂರುನಲ್ಲಿ ಮಾಸಾಂ – ಕೊಂಕಣಿ ಕಥಾ ಸಂಕಲನ ಬಿಡುಗಡೆ

ಮುಂಬಯಿ: ಆ್ಯಂಟನಿ ಬಾರ್ಕುರ್ ರಚಿತ 13 ಕಥೆಗಳ ಸಂಕಲನ `ಮಾಸಾಂ’ ಪುಸ್ತಕ ಬಿಡುಗಡೆ ಸಮಾರಂಭ ಕಳೆದ ಸೋಮವಾರ ಮಂಗಳೂರು ಬೆಂದೂರು ಇಲ್ಲಿನ ಸಂತ ಸೆಬಾಸ್ಟಿಯನ್ ಸಭಾಂಗಣದಲ್ಲಿ ನಡೆಸಲ್ಪಟ್ತಿದ್ದು ಕನ್ನಡ ಸಾಹಿತಿ ಎಸ್.ಜೋಗಿ ಕೃತಿ ಬಿಡುಗಡೆಗೊಳಿಸಿ ಲೇಖಕರಿಗೆ ಶುಭ ಹಾರೈಸಿದರು.

masam release

ವೇದಿಕೆಯಲ್ಲಿ ವಂ| ಆಲ್ವಿನ್ ಸೆರಾವೊ, ಲೇಖಕ ರಿಚಾರ್ಡ್ ಮೊರಾಸ್, ಹೆನ್ರಿ ಆಲ್ಮೇಡಾ, ಜೆ.ಎಫ್ ಡಿಸೋಜ ಹಾಗೂ ಪ್ರಕಾಶಕ ವಿತೊರಿ ಕಾರ್ಕಳ್ ಉಪಸ್ಥಿತರಿದ್ದರು.

ದ್ವೀಪದ ಜನರ ಭಾಷೆ-ಭಾವನೆಗಳನ್ನು ಪರಿಣಾಮಕಾರಿಯಾದ ಸಂಕಥನವಾಗಿ ಮೂಡಿಸುವಲ್ಲಿ ಆ್ಯಂಟನಿ ಅವರದ್ದು ಎತ್ತಿದ ಕೈ. ಅಷ್ಟೇ ಪರಿಣಾಮಕಾರಿಯಾಗಿ ಐಟಿ ಪ್ರಪಂಚದ ತಲ್ಲಣಗಳನ್ನು ಕೂಡಾ ಅವರ ಕತೆಗಳಲ್ಲಿ ಕಾಣಬಹುದು. ಈ ಸಂಕಲನವು ಕೊಂಕಣಿ ಕಥಾ ಸಾಹಿತ್ಯವನ್ನು ಇನ್ನೊಂದು ಮಜಲಿಗೇರಿಸಲಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕವಿ ಮೆಲ್ವಿನ್ ರೊಡ್ರಿಗಸ್ ಬೆನ್ನುಡಿಯಲ್ಲಿ ಹೇಳಿದ್ದಾರೆ.

ಕವಿ ಸಾಹಿತಿ ಕಿಶೂ, ಬಾರ್ಕುರ್ ಪ್ರಸ್ತಾವನೆ ಬರೆದು, ಮುಖಪುಟ ರಚಿಸಿದ್ದಾರೆ. ಇದು ಸೃಜನಾ ಪ್ರಕಾಶನದ 11ನೇ ಪುಸ್ತಕವಾಗಿದ್ದು, ಈ ಪುಸ್ತಕವು ಜನವರಿಯಲ್ಲಿ ಗೋವಾದಲ್ಲಿ ನಡೆಯುವ ಕವಿತಾ ಫೆಸ್ತ್ ಸಂದರ್ಭದಲ್ಲಿ ಕವಿತಾ ಪಬ್ಲಿಕೇಶನ್ಸ್ ನಿಂದ ದೇವನಾಗರಿ ಲಿಪಿಯಲ್ಲಿ ಪ್ರಕಟವಾಗಲಿದೆ ಪ್ರಕಾಶಕ ವಿತೊರಿ ಕಾರ್ಕಳ್ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter