Published On: Tue, Dec 17th, 2019

 ಗ್ರಾಮೀಣ ಪ್ರದೇಶಗಳ ಅಭಿವೃದ್ದಿಯತ್ತ ಹೆಚ್ಚಿನ ಆದ್ಯತೆ- ಶಾಸಕ ಉಮಾನಾಥ ಕೋಟ್ಯಾನ್

ಕಿನ್ನಿಗೋಳಿ : ಕಿಲೆಂಜೂರು ಪುಚ್ಚಾಡಿಯಲ್ಲಿ ನಂದಿನಿ ನದಿಗೆ ತಡೆಗೋಡೆ ಇಲ್ಲದೆ ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಕೃಷಿ ಭೂಮಿಗೆ ಹನಿಯಾಗುತ್ತಿತ್ತು.ಇದೀಗ ತಡೆಗೋಡೆ ಯ ಮೂಲಕ ನೆರೆ ಬಾರದಂತೆ ಶಾಶ್ವತ ಪರಿಹಾರವನ್ನು ಮಾಡಲಾಗುತ್ತಿದೆ ಎಂದು ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮನಾಥ ಕೋಟ್ಯಾನ್ ಅವರು ಹೇಳಿದರು.ಅವರು ಸೋಮವಾರದಂದು ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಂದಿನಿ ನದಿಯ ಪುಚ್ಚಾಡಿ ಅಣೆಕಟ್ಟು ಬಳಿ 1 ಕೋಟಿ 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ತಡೆಗೋಡೆಗೆ ಶಿಲನ್ಯಾಸ ನೇರ ವೇರಿಸಿ ಮಾತನಾಡಿದರು.ಅಲ್ಲದೆ ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಕೃಷಿಯಾಧರಿತ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗುತ್ತದೆ ಎಂದರು.ಗ್ರಾಮೀಣ ಭಾಗದಲ್ಲಿನ ಹಲವಾರು ರಸ್ತೆಗಳು ಅಭಿವೃದ್ದಿಯತ್ತ ಅಗುತ್ತದೆ.ಮುಂದಿನ ದಿನದಲ್ಲಿ ಇಲ್ಲಿನ ಪುರಾತನ ಅತ್ತೂರು ಬೈಲು ಗಣಪತಿ ಮಂದಿರಕ್ಕೆ ಹೋಗುವ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

WhatsApp Image 2019-12-17 at 12.55.11

ಅತ್ತೂರು ಬೈಲು ವೆಂಕಟರಾಜ ಉಡುಪ,ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ,ಬಿಜೆಪಿ ಮಂಡಲಾಧ್ಯಕ್ಷ ಈ ಶ್ವರ್ ಕಟೀಲ್,ತಾ.ಪಂ ಸದಸ್ಯೆ ವಜ್ರಾಕ್ಷಿ ಶೆಟ್ಟಿ,ಶುಭಲತಾ ಶೆಟ್ಟಿ,ಕಟೀಲು ಗ್ರಾ.ಪಂ ಅಧ್ಯಕ್ಷೆ ಗೀತಾ ಪೂಜಾರ್ತಿ,ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ,ಕೆಮ್ರಾಲ್ ಗ್ರಾ.ಪಂ ಅಧ್ಯಕ್ಷ ನಾಗೇಶ್ ಬೊಳ್ಳೂರು,ಪಂ.ಸದಸ್ಯ ಜನಾರ್ಧನ ಕಿಲೆಂಜೂರು,ಪ್ರಮಿಳಾ ಶೆಟ್ಟಿ,ಕೆ.ಭುವನಾಭಿರಾಮ ಉಡುಪ,ಕಿನ್ನಿಗೋಳಿ ಶಕ್ತಿಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ,ಕಿಲೆಂಜೂರು ಧೂಮಾವತಿ ಮಿತ್ರ ಮಂಡಳಿ ಅಧ್ಯಕ್ಷ ರಾಜೇಶ್ ಮೂಲ್ಯ,ಗುತ್ತಿಗೆದಾರ ಲಾರೆನ್ಸ್ ಪಕ್ಷಿಕೆರೆ,ಸಣ್ಣ ನೀರಾವರಿ ಇಲಾಖೆಯ ರಾಜೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter