Published On: Mon, Dec 16th, 2019

ಅದ್ಬುತ ಕಾರ್ಯಕ್ರಮ, ದೆಹಲಿಯಲ್ಲೂ ಅನಾವರಣಗೊಳ್ಳಲಿ ; ಕಿರಣ್ ಬೇಡಿ

ಬಂಟ್ವಾಳ:   ಶ್ರೀರಾಮವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ ದೆಹಲಿಯ ಗಣರಾಜ್ಯೋತ್ಸವದಲ್ಲಿ  ಪ್ರದರ್ಶನಗೊಳ್ಳುವುದರ ಮೂಲಕ ಭಾರತೀಯ ಸಂಸ್ಕೃತಿ  ರಾಷ್ಟ್ರಮಟ್ಟದಲ್ಲಿ ಅನಾವರಣಗೊಳ್ಳಬೇಕು ಎಂದು  ಪುದುಚೇರಿಯ ಲಿಪ್ಟಿನೆಂಟ್ ಗವರ್ನರ್ ಡಾ ಕಿರಣ್ ಬೇಡಿ ಹೇಳಿದ್ದಾರೆ.  ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ಸಂಜೆ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಪ್ರಧಾನ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು  ಇದೊಂದು ಅದ್ಬುತ ಕಾರ್ಯಕ್ರಮ, ನನ್ನ ಜೀವಮಾನದಲ್ಲಿ  ಇಂತಹ ಕಾರ್ಯಕ್ರಮ ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಹೆಣ್ಣು ಮತ್ತು ಗಂಡು ಜೊತೆಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮಾದರಿಯಾಗಿದೆ ಎಂದ ಅವರು ಈ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ಹೆತ್ತವರಿಗೂ ವಿಶೇಷ ಅಭಿನಂದನೆ ಸಲ್ಲಿಸಿದರು.2

17ಈ ಶಾಲೆಯ ಸಂಸ್ಥಾಪಕರು,ಶಿಕ್ಷಕರು ಅಭಿನಂದನಾರ್ಹರು ಭಾರತೀಯ ಸಂಸ್ಕೃತಿಯ ಬಗ್ಗೆ ಹೆಮ್ನೆ ಎನಿಸುತ್ತದೆ.ಇಂತಹ ಕಾರ್ಯಕ್ರಮ ದೇಶದ ಎಲ್ಲಾ ಶಾಲೆಗಳಲ್ಲಿಯು ಅನುಷ್ಠಾನಗೊಳ್ಳಬೇಕೆ ಎಂದು ಆಶಯ ವ್ಯಕ್ತ ಪಡಿಸಿದರು     ಜಾರ್ಖಂಡಿನ ಉದ್ಯಮಿ ಒಂಪ್ರಕಾಶ್ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೇತ್ರತಜ್ಙ ಡಾ. ಕೃಷ್ಣ ಪ್ರಸಾದ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ  ಬರೋಡಾದ ಶಶಿಧರ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ,ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ರಹೀಂ ಉಚ್ಚಿಲ್, ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಳ್ಳಾರಿ ರಾಜಶೇಖರ ಮುಲಾನಿ,ವಿಹಿಪಂ.ನ ಶ್ರೀಧರ್ ನಾಡಿಗರ್ ,ರಾಘವೇಂದ್ರಸರ್ವಂ,ಶಾಸಕ ಹರೀಶ್ ಪೂಂಜಾ ಅವರು ಮಾತನಾಡಿದರು.3 (1)

ಕೇಂದ್ರದ ಸಚಿವ ಡಿ.ವಿ. ಸದಾನಂದ ಗೌಡ,ರಾಜ್ಯದ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಉಮೇಶ್ ಜಾದವ್ ,ಕೆ.ಸಿ.ರಾಮಮೂರ್ತಿ, , ಶಾಸಕರುಗಳಾದ  ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಅರವಿಂದ ಬೆಲ್ಲದ,ಪಿ.ರಾಜೀವ್ , ಪೂರ್ಣಿಮ  ಅಮೃತ ದೇಸಾಯಿ, ,ಅವಿನಾಶ್ ಜಾದವ್,ಉಮಾನಾಥ ಕೋಟ್ಯಾನ್ ,ಎಸ್.ಎಲ್.ಬೋಜೇಗೌಡ,ಅರುಣ್ ಜೋಶಿ ,ಡಿಜಿಪಿ ಮೋಹನ್ ಪ್ರಸಾದ್ ,  ಭ್ರಷ್ಟಾಚಾರ ನಿಗ್ರಹದಳದ ಐಜಿ ಚಂದ್ರಶೇಖರ್,ಜಿಲ್ಲಾ ಎಸ್ಪಿ  ಲಕ್ಷ್ನಿಪ್ರಸಾದ್ , ಸಿನೆಮಾ ನಟಿ ಪ್ರಣೀತಾ ಸುಭಾಷ್ ,ಮಾಜಿ ಸಚಿವ ನಾಗರಾಜ ಶೆಟ್ಟಿ,  ಕೃಷ್ಣಪಾಲೇಮಾರ್,  ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕ್ಯಾ.ಗಣೇಶ್ ಕಾರ್ಣಿಕ್ , ರಾಷ್ಟ್ರ ಸೇವಿಕಾದ ಸೀತಕ್ಕ. ಆರ್ ಎಸ್ ಎಸ್ ಮುಖಂಡ ಶ್ರೀಧರ್ ನಾಡಿಗರ್ ,ನಿವೃತ್ತ ಪೊಲೀಸ್ ಅಧಿಕಾರಿ  ಜಯಂತ ಶೆಟ್ಟಿ,ಕಮಲಾ ಪ್ರಭಾಕರ ಭಟ್,ಟಿ.ಜಿ.ರಾಜಾರಾಮ ಭಟ್,ಸುರೇಶ್ ಶೆಟ್ಟಿ ಗುರ್ಮೆ,ಎ.ಎಂ.ಖಾನ್,  ಎ.ವಿ.ರವಿ,ಪ್ರಕಾಶ್ ದಾಸನೂರು,ಭರತ್ ಜೈನ್,ಮಂಜುನಾಥ್ ಜಾರ್ಖಂಡ್,  ಪ್ರದೀಪ್ ಕುಮಾರ್ ಕಲ್ಕೂರ, ಜಗದೀಶ್ ಶೇಣವ, ಪ್ರಭಾಕರ ಪ್ರಭು,ಪ್ರಸಾದ್ ಕುಮಾರ್  ಹಾಗು ಹಲವಾರು ಗಣ್ಯರು ಈ ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್  ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ವಸಂತ ಮಾಧವ ಪ್ರಸ್ತಾವಿಸಿ, ಸ್ವಾಗತಿಸಿದರು.ವಿದ್ಯಾಕೇಂದ್ರ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಹಸಂಚಾಲಕ ರಮೇಶ್, ಪದವಿ ಕಾಲೇಜು ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter