ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿಯಾಗಿ ಲೀನಾ ಬ್ರಿಟ್ಟೋ ನಿಯುಕ್ತಿ
ಬಂಟ್ವಾಳ: ಸುಮಾರು ಎರಡು ತಿಂಗಳಿನಿಂದ ಬಂಟ್ವಾಳ ಪುರಸಭೆಯಲ್ಲಿ ಖಾಲಿ ಇದ್ದ ಮುಖ್ಯಾಧಿಕಾರಿ ಹುದ್ದೆಗೆ ಲೀನಾ ಬ್ರಿಟ್ಟೊ ಅವರನ್ನು ಕೊನೆಗೂ ನಿಯಕ್ತಿಗೊಳಿಸಲಾಗಿದೆ. ಈ ಹಿಂದೆ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಲೀನಾಬಿಟ್ರೋ ಅವರು ಪ್ರಸ್ತುತ ಪುತ್ತೂರು ನಗರಸಭೆಯಲ್ಲಿ ಮನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು,
ಅವರನ್ನು ಮರಳಿ ಬಂಟ್ವಾಳ ಪುರಸಭೆಯ ಮುಖ್ಯ ಅಧಿಕಾರಿ ಹುದ್ದೆಗೆ ನಿಯುಕ್ತಿಗೊಳಿಸಿ ಮಂಗಳವಾರ ಸರಕಾರ ಆದೇಶಿಸಿದೆ. ಮುಖ್ಯಾಧಿಕಾರಿಯಾಗಿದ್ದ ರೇಖಾ ಶೆಟ್ಟಿ ಅವರ ವರ್ಗಾವಣೆಯ ಬಳಿಕ ಈ ಹುದ್ದೆ ಖಾಲಿಯಾಗಿತ್ತು.ಕಳೆದ ಎರಡು ವಾರಗಳಿಂದ ಉಳ್ಳಾಲ ನಗರಸಭೆಯ ರಾಯಪ್ಪ ಅವರು ಪ್ರಭಾರ ನೆಲೆಯಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಪೂರ್ಣಕಾಲಿಕವಾಗಿ ಲೀನಾ ಬ್ರಿಟ್ಟೊ ಅವರನ್ನು ಮುಖ್ಯಾಧಿಕಾರಿಯಾಗಿ ನಿಯುಕ್ತಿಗೊಳಿಸಲಾಗಿದೆ.